ನ್ಯೂಸ್

VIRAL VIDEO: ಕುಡಿದ ಅಮಲಿನಲ್ಲಿ ಗೂಳಿ ಕೊಂಬು ಹಿಡಿಯಲು ಯತ್ನ; ಮುಂದೆ ನಡೆದಿದ್ದೇ ಬೇರೆ

ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಜಗತ್ತಿನಾದ್ಯಂತ ನಡೆಯುವ ಅನೇಕ ಘಟನೆಗಳು ಕ್ಷಣಮಾತ್ರದಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತದೆ. ಕೇವಲ ನಮ್ಮ ಕೈಬೆರಳಿನಲ್ಲಿ ಪ್ರಪಂಚದ ಹಾಗು ಹೋಗುಗಳನ್ನು ತಿಳಿಯುವಂತ ಸಾಮರ್ಥ್ಯ ಇಂದಿನ ಟೆಕ್ನಾಲಜಿ ನಮಗೆಲ್ಲಾ ಒದಗಿಸಿಕೊಟ್ಟಿದೆ.

ಆ ಪೈಕಿ ಅಂತರ್ಜಾಲ ಶಕ್ತಿಯೇ ಮುಂದು. ಎಲ್ಲಾ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೇಗವಾಗಿ ಹರಿದಾಡುವ ಮುಖೇನ ಹೆಚ್ಚೆಚ್ಚು ಶೇರ್​ ಹಾಗೂ ಲೈಕ್​ ಪಡೆದುಕೊಳ್ಳುವ ಜತೆಗೆ ತೀವ್ರ ಚರ್ಚೆಗೂ ಕಾರಣವಾಗುತ್ತದೆ.

ಇಲ್ಲೊಬ್ಬ ವ್ಯಕ್ತಿ ಕುಡಿದ ಅಮಲಿನಲ್ಲಿ ಗೂಳಿ ಜತೆಗೆ ಸೆಣಸಾಡಲು ಹೋಗಿ ಅದರ ಕೋಪಕ್ಕೆ ತುತ್ತಾದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣವನ್ನು ಸುತ್ತುವರಿದಿದೆ. ವಿಡಿಯೋದ ಪ್ರಕಾರ, ಕುಡಿದ ನಶೆಯಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಸುಮ್ಮನೆ ನಿಂತಿದ್ದ ದೈತ್ಯ ಗೂಳಿ ಬಳಿ ಹೋಗಿ, ಅದರ ಕೊಂಬನ್ನು ಹಿಡಿಯಲು ಕೆಲವು ಬಾರಿ ಪ್ರಯತ್ನ ಪಟ್ಟಿದ್ದಾನೆ. ಆದ್ರೆ, ಇದು ಮೊದಲು ಸಾಧ್ಯವಾಗಿಲ್ಲ.

ತದನಂತರ ಬಲವಾಗಿ ಹಿಡಿಯಲು ಯತ್ನಿಸಿದ್ದಕ್ಕೆ ಕೋಪಗೊಂಡ ಗೂಳಿ ಕೂಡಲೇ ಆತನನ್ನು ತನ್ನ ಕೊಂಬಿನಿಂದ ತಿವಿದು ಮೇಲಕ್ಕೆ ಎತ್ತಿ ಬೀಸಾಡಿದೆ. ನೆಲಕ್ಕೆ ಬಿದ್ದ ವ್ಯಕ್ತಿ ಪೆಟ್ಟು ಬಿದ್ದ ನಂತರ ನೋವಿನಿಂದ ರಸ್ತೆ ಬದಿ ತೆರಳಿ ವಿಶ್ರಾಂತಿಸಿದ್ದಾನೆ. ಸದ್ಯ ಈ ಒಂದು ದೃಶ್ಯ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಶೇರ್​ ಆಗಿದ್ದು, ಸೋನಿ ಬಾಯ್​ 1931 ಎಂಬ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಘಟನೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ,(ಏಜೆನ್ಸೀಸ್).