ನ್ಯೂಸ್

ದಂಗು ಬಡಿಸುತ್ತೆ ಜಮೀರ್​ ಆಪ್ತನ ಮತ್ತೊಂದು ರಹಸ್ಯ! ಇದು ಕ್ಯಾಸಿನೋ 'ಶೇಖ್​'ನ ದೌಲತ್ತು...

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿರುವ ಶಾಸಕ ಜಮೀರ್​ ಅಹ್ಮದ್​ರ ಆಪ್ತ, ಕ್ಯಾಸಿನೋ ಶೇಖ್ ಫಾಝಿಲ್​ನ ಸ್ಫೋಟಕ ರಹಸ್ಯ ಬಯಲಾಗಿದೆ.

ಜಮೀರ್ ಅಹ್ಮದ್​ರ ಮಗನ ಟೇಕ್ ಕೇರ್ ಮಾದರಿಯಲ್ಲಿದ್ದ ಶೇಖ್​ ಫಾಝಿಲ್, ಆತನ ಎಲ್ಲ ವ್ಯವಹಾರದಲ್ಲೂ ಭಾಗಿಯಾಗುತ್ತಿದ್ದ. ಆತನ ಸಿನಿಮಾದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಫಾಝಿಲ್​, ಬಾಲಿವುಡ್ ಸ್ಟಾರ್ ನಟರ ಸಂಪರ್ಕ ಮಾಡಿಕೊಟ್ಟಿದ್ದ. ಫಾಸಿಲ್​ಗೆ ಕ್ಯಾಸಿನೋ ವ್ಯವಹಾರ ಅಷ್ಟೇ ಅಲ್ಲ, ಕ್ರಿಕೆಟ್ ನಂಟೂ ಇದೆ. ಪ್ರತಿಷ್ಠಿತ ಕ್ರಿಕೆಟ್ ಲೀಗ್‌ನಲ್ಲಿ ಫಾಸಿಲ್ ಬಂಡವಾಳ ಹೂಡಿದ್ದು, ಕರ್ನಾಟಕ ಟಸ್ಕರ್ಸ್ ತಂಡದ ಪ್ರಮುಖ ಸ್ಪಾನ್ಸರ್ ಬೆಲೀಸ್ ಕ್ಯಾಸಿನೋ!

ಬೆಲೀಸ್ ಕ್ಯಾಸಿನೋದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿರುವ ಶೇಖ್ ಫಾಝಿಲ್​, ಅಬುದಾಬಿ ಟಿ-10 ಲೀಗ್‌ನಲ್ಲೂ ಬಂಡವಾಳ ಹೂಡಿಕೆ ಮಾಡಿದ್ದಾನೆ. ಕರ್ನಾಟಕ ಟಸ್ಕರ್ಸ್

ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ಹೊಂದಿದ್ದು, 2019ರಲ್ಲಿ ಈ ತಂಡಕ್ಕೆ ಬೆಲೀಸ್ ಕ್ಯಾಸಿನೋ ಸ್ಪಾನ್ಸರ್​ಶಿಪ್​ ಆಗಿತ್ತು. ಟೂರ್ನಿ ಯುದ್ದಕ್ಕೂ ಟಸ್ಕರ್ಸ್ ತಂಡದೊಂದಿಗೆ ಶೇಖ್ ಫಾಝಿಲ್​ ಗುರುತಿಸಿಕೊಂಡಿದ್ದು, ಪ್ರಮುಖ ಕ್ರಿಕೆಟ್​ ಆಟಗಾರ ಜತೆ ನಂಟು ಹೊಂದಿದ್ದಾನೆ. ಸಿನಿ ಸೆಲೆಬ್ರೆಟಿಗಳ ಲಿಂಕ್​ ಕೂಡ ಈತನಿಗಿದೆ.

10 ವರ್ಷದ ಹಿಂದೆ ಮೆಕ್ಯಾನಿಕ್​ ಆಗಿದ್ದ ಶೇಖ್​ ಫಾಝಿಲ್​ ಈಗ ಫುಲ್ ಹೈಫೈ ಆಗಿದ್ದೇಗೆ? ಅಷ್ಟೊಂದು ಹಣ ಹೇಗೆ ಬಂತು? ಎಂಬೆಲ್ಲ ಪ್ರಶ್ನೆಗಳಿಗೆ ಸಿಸಿಬಿ ತನಿಖೆಯಲ್ಲೇ ಉತ್ತರ ಹೊರಬೀಳಬೇಕಿದೆ.

ಜಮೀರ್ ಅಹ್ಮದ್​ರ ಮತ್ತೊಬ್ಬ ಆಪ್ತ ರೋಹನ್ ಎಂಬಾತನೊಂದಿಗೆ ಶೇಖ್​ ಫಾಝಿಲ್​ ಸಂಪರ್ಕ ಹೊಂದಿದ್ದ. ರೋಹನ್​ ಮೂಲಕ ಜಮೀರ್ ಮಗನ ಸ್ನೇಹವನ್ನು ಫಾಝಿಲ್​ ಬೆಳೆಸಿದ್ದ. ಬಳಿಕ ಆತನ ಎಲ್ಲ ಎಲ್ಲ ವ್ಯವಹಾರದಲ್ಲೂ ಭಾಗಿಯಾಗುತ್ತಿದ್ದ ಎಂದು ಗೊತ್ತಾಗಿದೆ. (ದಿಗ್ವಿಜಯ ನ್ಯೂಸ್​)