ಐಜ್ವಾಲ್: ಮಿಜೋರಾಂನಲ್ಲಿ ನಡೆದ ಮಾದಕವಸ್ತು ಕಳ್ಳಸಾಗಣೆಯಲ್ಲಿ, ಪೊಲೀಸರು 350 ಕೋಟಿ ರೂ. ಮೌಲ್ಯದ ಕ್ರಿಸ್ಟಲ್ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(ಏಜೆನ್ಸೀಸ್)
ಆರೋಪಿಯ ವಿರುದ್ಧ 1985 ರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ವಾಹನವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ತಂಡವು ಸುಮಾರು 300 ಕೋಟಿ ರೂ. ಮೌಲ್ಯದ 20.304 ಕೆಜಿ ಕ್ರಿಸ್ಟಲ್ ಮೆತ್ ಮತ್ತು 128 ಸೋಪ್ ಪೆಟ್ಟಿಗೆಗಳಲ್ಲಿ ಅಡಗಿಸಿಟ್ಟಿದ್ದ 49.56 ಲಕ್ಷ ರೂ. ಮೌಲ್ಯದ 1.652 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿಕೊಳ್ಳಲಾಗಿದೆ. ಐಜ್ವಾಲ್‌ನ ಮುವಾಲ್ ವೆಂಗ್ ನಿವಾಸಿಯಾದ ಬಿ ಲಾಲ್ತಜುವಾಲಾ (45) ಎಂದು ಗುರುತಿಸಲಾದ ವಾಹನ ಚಾಲಕನನ್ನು ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ, ಅಪರಾಧ ತನಿಖಾ ಇಲಾಖೆ ಮತ್ತು ಐಜ್ವಾಲ್‌ನಲ್ಲಿರುವ ವಿಶೇಷ ಮಾದಕವಸ್ತು ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಒಳಗೊಂಡ ತಂಡ, ಆಗಸ್ಟ್ 1 ರಂದು ರಾಜ್ಯ ರಾಜಧಾನಿಯ ಬಳಿ ಕಾರ್ಯಾಚರಣೆ ನಡೆಸಿತು. ಜೆಮಾಬಾಕ್ ಮತ್ತು ಸೆಲಿಂಗ್ ಪ್ರದೇಶಗಳ ನಡುವಿನ ಪ್ರದೇಶದಲ್ಲಿ ಐಜ್ವಾಲ್‌ಗೆ ಹೋಗುತ್ತಿದ್ದ ಪಿಕಪ್ ಟ್ರಕ್ ಅನ್ನು ಜಂಟಿ ತಂಡ ತಡೆದಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.