ನ್ಯೂಸ್

ನಟನ ಕಚೇರಿ ಮೇಲೆ ಕಸ್ಟಮ್ಸ್​​ ದಾಳಿ; ₹ 35 ಲಕ್ಷ ಮೌಲ್ಯದ ಡ್ರಗ್ಸ್​ ವಶ, ಸಿಬ್ಬಂದಿ ಬಂಧನ | Drugs Case

ಮುಂಬೈ: ನಟ ಎಜಾಜ್​ ಖಾನ್​ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಎಜಾಜ್​ ಖಾನ್​​​ ಕಚೇರಿ ಮೇಲೆ ಕಸ್ಟಮ್ಸ್​​ ಇಲಾಖೆ ದಾಳಿ ನಡೆಸಿದೆ. ಈ ಮೊದಲು ಡ್ರಗ್ಸ್​​ ಕೇಸ್​(Drugs Case)ಗೆ ಸಂಬಂಧಿಸಿದಂತೆ ಬಂಧನವಾಗಿದ್ದ ಎಜಾಜ್​ ಖಾನ್​​ ಕಳೆದ ವರ್ಷ (2023) ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಮುಂಬೈ ಕಸ್ಟಮ್ಸ್‌ನ ವಿಶೇಷ ಪೋಸ್ಟಲ್ ಇಂಟೆಲಿಜೆನ್ಸ್ ಬ್ರಾಂಚ್ ಯುರೋಪ್ ದೇಶದಿಂದ ಬರುತ್ತಿದ್ದ ಸರಕುಗಳನ್ನು ಪತ್ತೆಹಚ್ಚಿದೆ ಎಂದು ಹೇಳಲಾಗುತ್ತಿದೆ. ಆ ಸರಕು ವೀರ ದೇಸಾಯಿ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಎಜಾಜ್ ಖಾನ್ ಅವರ ಕಚೇರಿಗೆ ರವಾನೆಯಾಗಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ನಟ ಮತ್ತೆ ಡ್ರಗ್ಸ್ ವಿಚಾರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

<p>" class="alignnone size-full wp-image-2398345" height="400" src="https://www.vijayavani.net/wp-content/uploads/2024/10/Untitled-design-2024-10-09T185711.193.webp" width="600"/>

ಮುಂಬೈನ ಅಂಧೇರಿಯಲ್ಲಿರುವ ನಟ ಎಜಾಜ್ ಖಾನ್ ಅವರ ಕಚೇರಿಯಲ್ಲಿ ಕಸ್ಟಮ್ಸ್ ಇಲಾಖೆಯಿಂದ ಶೋಧ ನಡೆಸಲಾಗಿತ್ತು. ವಾಸ್ತವವಾಗಿ,ಎಜಾಜ್ ಖಾನ್ ಅವರ ಸಿಬ್ಬಂದಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ. ನಂತರ ಕಸ್ಟಮ್ ಇಲಾಖೆ ಈ ಹುಡುಕಾಟವನ್ನು ನಡೆಸಿತು. ಕಸ್ಟಮ್ಸ್ ಇಲಾಖೆ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಸುಮಾರು 100 ಗ್ರಾಂ ಎಂಡಿಗೆ ಆರ್ಡರ್ ಮಾಡಿದ ಎಜಾಜ್ ಖಾನ್ ಸಿಬ್ಬಂದಿ ಅವರ ಕಚೇರಿ ವಿಳಾಸದಲ್ಲಿದ್ದರು. ಈ ಆರ್ಡರ್​​ ಅನ್ನು ಯುರೋಪ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಅದರ ಬೆಲೆ ಸುಮಾರು 30 ರಿಂದ 35 ಲಕ್ಷ ಎಂದು ಹೇಳಲಾಗುತ್ತಿದೆ.

ನಿಷೇಧಿತ ಔಷಧಿಗಳ ಪ್ಯಾಕೇಜ್ ವಿತರಣೆಗೆ ಸಂಬಂಧಿಸಿದಂತೆ ಬಂದ ಮಾಹಿತಿಯ ಆಧಾರದ ಮೇಲೆ, ಕಸ್ಟಮ್ಸ್ ಅದನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿತು. ಈ ಸರಕುಗಳನ್ನು ಬುಕ್ ಮಾಡಿದ ವ್ಯಕ್ತಿಯ ಮೇಲೆ ಅಧಿಕಾರಿಗಳು ನಿರಂತರವಾಗಿ ಕಣ್ಣಿಟ್ಟಿದ್ದರು ಮತ್ತು ಅದು ನಟನ ಕಚೇರಿಯಲ್ಲಿ ಕೆಲಸ ಮಾಡುವ ಸೂರಜ್​​​ ಗೌರ್ ಎಂದು ತಿಳಿದುಬಂದಿದೆ. ಸೂರಜ್ ಗೌರ್​ನನ್ನು ಬಂಧಿಸಲಾಗಿದೆ.

ಇಂಥದ್ದೆ ಪ್ರಕರಣದಲ್ಲಿ ಎಜಾಜ್ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಎಜಾಜ್​ನನ್ನು 2021ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾದಕವಸ್ತು ಪ್ರಕರಣದಲ್ಲಿ ಬಂಧಿಸಲಾಗಿತ್ತು ಮತ್ತು 2023ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದೆ. ಇದು ಮಾತ್ರವಲ್ಲದೆ 2018ರಲ್ಲಿ ನವಿ ಮುಂಬೈ ಆಂಟಿ ನಾರ್ಕೋಟಿಕ್ಸ್ ಸೆಲ್ ಅವರನ್ನು ಹೋಟೆಲ್‌ನಲ್ಲಿ ಎಕ್ಸ್‌ಟಸಿ ಟ್ಯಾಬ್ಲೆಟ್‌ಗಳೊಂದಿಗೆ ಬಂಧಿಸಿತ್ತು.

ಅಂದ್ಹಾಗೆ ಈ ವರ್ಷದ ಆರಂಭದಲ್ಲಿ ಎಜಾಜ್​ ಖಾನ್​​ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ತನ್ನ ಅಫಿಡವಿಟ್‌ನಲ್ಲಿ ಎಜಾಜ್ ಅವರು 44.5 ಲಕ್ಷ ರೂಪಾಯಿ ಮೌಲ್ಯದ ನಿವ್ವಳ ಮೌಲ್ಯ ಹೊಂದಿರುವುದಾಗಿ ಘೋಷಿಸಿದ್ದಾರೆ. (ಏಜೆನ್ಸೀಸ್​​)