ಬೆಂಗಳೂರು: ಪಾರ್ಟಿ ಆಯೋಜಿಸುವ ಮೂಲಕ ಸಿನಿಮಾ ನಟ-ನಟಿಯರಿಗೆ, ಪ್ರತಿಷ್ಠಿತರಿಗೆ ಆಹ್ವಾನ ನೀಡಿ ಡ್ರಗ್ಸ್ ನಶೆ ಏರಿಸುತ್ತಿದ್ದ ವೀರೇನ್ ಖನ್ನಾ ಸದ್ಯ ಸಿಸಿಬಿ ಕಸ್ಟಡಿಯಲ್ಲಿದ್ದಾನೆ. ಈತನ ಡ್ರಗ್ಸ್ ದಂಧೆಯ ಘಾಟು ಓಪನ್ ಏರ್ ಥಿಯೇಟರ್ನಲ್ಲೂ ಪಸರಿಸಿದ್ದು ತನಿಖೆಯಲ್ಲಿ ಬಯಲಾಗಿದೆ.
ಆನ್ಲೈನ್ನಲ್ಲೇ ಬುಕ್ಕಿಂಗ್ ಮಾಡಿಸಿ, ಪಾರ್ಟಿಗೆ ಇನ್ವೈಟ್ ಮಾಡುತ್ತಿದ್ದ. ಪಾರ್ಟಿಯಲ್ಲಿ ಪಾಲ್ಗೊಂಡವರಿಗೆ ಡ್ರಗ್ಸ್ ಕೂಡ ಅಲ್ಲೇ ಸಪ್ಲೈ ಮಾಡುತ್ತಿದ್ದ.
ನಿರ್ಜನ ಪ್ರದೇಶದಲ್ಲಿ ಬೃಹತ್ ಪರದೆಯಲ್ಲಿ ಬಾಲಿವುಡ್- ಹಾಲಿವುಡ್ ಸಿನಿಮಾ ಪ್ರದರ್ಶನ ಆಗುತ್ತಿದ್ದರೆ ವೀರೇನ್ ಖನ್ನಾ ಆ್ಯಂಡ್ ಟೀಂ ಕಾರಿನಲ್ಲೇ ಕುಳಿತು ನೋಡಿ ಎಂಜಾಯ್ ಮಾಡುತ್ತಿತ್ತು.
ವೀರೇನ್ ಖನ್ನಾ ಬೆಂಗಳೂರು, ದೆಹಲಿ, ಮುಂಬೈ, ಗೋವಾ ಮೊದಲಾದ ಕಡೆಗಳಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡುತ್ತಿದ್ದ.