ನ್ಯೂಸ್

ಸಿಸಿಬಿ ಕಚೇರಿಗೆ ವಕೀಲರ ಜೊತೆ ಬಂದ ಐಂದ್ರಿತಾ-ದಿಗಂತ್​

ಬೆಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ ಇಬ್ಬರೂ ಸಿಸಿಬಿ ಕಚೇರಿಗೆ ಬುಧವಾರ ಬೆಳಗ್ಗೆ 11.15ರ ಸುಮಾರಿಗೆ ಹಾಜರಾಗಿದ್ದಾರೆ.

ಡ್ರಗ್ಸ್ ದಂಧೆ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ ಜತೆ ಐಂದ್ರಿತಾ ಇರುವ ಫೋಟೋಗಳು ಈಗಾಗಲೇ ವೈರಲ್ ಆಗಿದ್ದವು. ಅದರ ವಿವರಗಳು ಮಾಧ್ಯಮಗಳಲ್ಲಿ ಹರಿದಾಡತೊಡಗಿದಾಗ ಸ್ವತಃ ಐಂದ್ರಿತಾ ಫೋನ್ ಮೂಲಕ ಸಮಜಾಯಿಷಿ ನೀಡಿದ್ದರು. ಮಂಗಳವಾರ ಸಂಜೆ ವಾಟ್ಸ್ಆ್ಯಪ್​ ಮೂಲಕ ದಿಗಂತ್​ ಮತ್ತು ಐಂದ್ರಿತಾಗೆ ನೋಟಿಸ್​ ಕಳಿಸಿದ್ದ ಸಿಸಿಬಿ, ಬುಧವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಆ ವೇಳೆ ದಂಪತಿ ಇಬ್ಬರೂ ಕೇರಳದಲ್ಲಿ ಜಾಲಿ ಟ್ರಿಪ್‌ ಮೂಡ್​ನಲ್ಲಿದ್ದರು. ಇದನ್ನೂ ಓದಿರಿ ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

ಮಂಗಳವಾರ ತಡರಾತ್ರಿಯೇ ಬೆಂಗಳೂರಿಗೆ ಬಂದ ದಿಗಂತ್- ಐಂದ್ರಿತಾ ರೇ, ಬುಧವಾರ ಬೆಳಗ್ಗೆ ಸಿಸಿಬಿ ಅಧಿಕಾರಿಗಳಿಗೆ ಖುದ್ದು ಕರೆ ಮಾಡಿ ಕಚೇರಿಗೆ ಬರುವುದಾಗಿ ತಿಳಿಸಿದ್ದರು. ಅದರಂತೆ 11.15ಕ್ಕೆ ರಹಸ್ಯ ಸ್ಥಳದಿಂದ ನೇರವಾಗಿ ಸಿಸಿಬಿ ಕಚೇರಿಗೆ ಹಾಜರಾದ ದಂಪತಿ, ತಮ್ಮ ಜತೆಯಲ್ಲಿ ವಕೀಲರನ್ನೂ ಕರೆತಂದಿದ್ದಾರೆ.

ಸಿಸಿಬಿ ಇನ್​ಸ್ಪೆಕ್ಟರ್​ ಪುನೀತ್​ ಮತ್ತು ಅಂಜುಮಾಲಾ ನಾಯಕ್ ತಂಡ ತಾರಾದಂಪತಿಯನ್ನು ವಿಚಾರಣೆ ನಡೆಸುತ್ತಿದೆ.