ನ್ಯೂಸ್

ಡ್ರಗ್ಸ್ ಕೇಸ್; ಸದ್ಯಕ್ಕೆ ಸ್ಟಾರ್​ ದಂಪತಿಗೆ ಬಿಗ್​ ರಿಲೀಫ್​

arunakunigal

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟಿನ ಪ್ರಕರಣ ಸಂಬಂಧ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ರ ಮೊದಲ ಸುತ್ತಿನ ಸಿಸಿಬಿ ವಿಚಾರಣೆ ಮುಕ್ತಾಯವಾಗಿದೆ.

ಬುಧವಾರ ಬೆಳಗ್ಗೆ 11.15ರಿಂದ ಮಧ್ಯಾಹ್ನ 2.30ರವರೆಗೂ ದಿಗಂತ್​ ಮತ್ತು ಐಂದ್ರಿತಾರನ್ನು ಪ್ರತ್ಯೇಕವಾಗಿ ನಿರಂತರ ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಡ್ರಗ್ಸ್​ ಮಾಫಿಯಾ ಕುರಿತು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯಕ್ಕೆ ಈ ದಂಪತಿ ನಿರಾಳವಾಗಿದ್ದರೂ ಮತ್ತೊಮ್ಮೆ ಸಮನ್ಸ್​ ಕೊಡುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್​ ಪಾಟೀಲ್​ ತಿಳಿಸಿದ್ದಾರೆ. ಇದನ್ನೂ ಓದಿರಿ PHOTOS/ ಡ್ರಗ್ಸ್​ ದಂಧೆಯ ಕಿಂಗ್​ಪಿನ್​ ಜತೆ ಐಂದ್ರಿತಾ ಪೋಸ್

ಸಿಸಿಬಿ ಇನ್​ಸ್ಪೆಕ್ಟರ್​ ಪುನೀತ್​ ಅವರು ದಿಗಂತ್​ರನ್ನು ಮತ್ತು ಅಂಜುಮಾಲಾ ನಾಯಕ್ ಅವರು ಐಂದ್ರಿತಾ ರೇ ಅವರನ್ನು ವಿಚಾರಣೆ ನಡೆಸಿದರು. ಇಬ್ಬರ ಸ್ಟೇಟ್​ಮೆಂಟ್

ಅನ್ನು ದಾಖಲಿಸಿಕೊಂಡಿದ್ದಾರೆ. ಇಬ್ಬರ ಹೇಳಿಕೆ ಹಾಗೂ ಡ್ರಗ್ಸ್​ ಕೇಸ್​ನಲ್ಲಿ ಇವರ ಪಾತ್ರದ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಮತ್ತೊಂದು ನೋಟಿಸ್ ನೀಡಲಿದ್ದಾರೆ. ಸದ್ಯಕ್ಕೆ 'ಗುಳಿಕೆನ್ನೆ' ಜೋಡಿ ಬಂಧನ ಭೀತಿಯಿಂದ ಹೊರ ಬಂದಿದ್ದಾರೆ. ಆದ್ರೆ ಅವರಿಬ್ಬರ ಮೊಬೈಲ್​ ಸಿಸಿಬಿ ವಶದಲ್ಲಿದೆ.

ಡ್ರಗ್ಸ್ ದಂಧೆ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್​ನ ಕ್ಯಾಸಿನೋ ಪಾರ್ಟಿಗಳಲ್ಲಿ ಐಂದ್ರಿತಾ ಕಾಣಿಸಿಕೊಂಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರ್​ ಆಗುವಂತೆ ಮಂಗಳವಾರ ಸಂಜೆ ಕೇರಳಾದಲ್ಲಿದ್ದ ಐಂದ್ರಿತಾ ದಂಪತಿಗೆ ವಾಟ್ಸ್ಆ್ಯಪ್​ ಮೂಲಕ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ದಿಗಂತ್​, 'ನಾವು ಎಲ್ಲೂ ತಲೆ ಮರೆಸಿಕೊಂಡಿಲ್ಲ. ವಿಚಾರಣೆಗೆ ಹಾಜರಾಗ್ತೀವಿ' ಎಂದಿದ್ದರು. ಐಂದ್ರಿತಾ ಕೂಡ, 'ಸಿಸಿಬಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನಿಗದಿತ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ಸಿಸಿಬಿ ಕಚೇರಿಗೆ ಬರುತ್ತೇವೆ' ಎಂದು ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿದ್ದರು.

ಮಂಗಳವಾರ ತಡರಾತ್ರಿಯೇ ಬೆಂಗಳೂರಿಗೆ ಬಂದ ದಿಗಂತ್- ಐಂದ್ರಿತಾ ರೇ, ಬುಧವಾರ ಬೆಳಗ್ಗೆ 11.15ಕ್ಕೆ ಸಿಸಿಬಿ ಕಚೇರಿಗೆ ಹಾಜರಾಗಿದ್ದರು.