ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿನ ಪ್ರಕರಣದ A6 ಆರೋಪಿ ಆದಿತ್ಯ ಆಳ್ವ, ತನ್ನ ವಿರುದ್ಧದ ಪ್ರಕರಣವನ್ನೇ ಕೈಬಿಡಿ ಎಂದು ನೇರವಾಗಿ ಹೈಕೋರ್ಟ್ ಮೊರೆ ಹೋಗಿದ್ದಾನೆ.
ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಮಾಫಿಯಾ ಕೇಸಿನಲ್ಲಿ ಸ್ಯಾಂಡಲ್ವುಡ್ನ 'ಮಾದಕ' ನಟಿ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ ಜತೆಗೆ ಹಲವು ಡ್ರಗ್ಸ್ ಪೆಡ್ಲರ್ಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಆದಿತ್ಯ ಆಳ್ವ ಮಾತ್ರ ಸಿಸಿಬಿ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದಾನೆ. ನಟಿಮಣಿಯರಿಬ್ಬರು ಸೇರಿ ಹಲವು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈತ ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ FIR ರದ್ದು ಮಾಡುವಂತೆ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. ಇದನ್ನೂ ಓದಿರಿ ‘ರಾಗಿಣಿಗೆ ನಾನೇ ಡ್ರಗ್ಸ್ ಕೊಡುತ್ತಿದ್ದೆ… ಡ್ರಗ್ಸ್ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’
ಇದೀಗ ತನ್ನ ವಿರುದ್ಧದ ಪ್ರಕರಣವನ್ನೇ ಕೈಬಿಡಿ ಎಂದು ಕೋರಿ ಹೈಕೋರ್ಟ್ಗೆ ಸಲ್ಲಿಸಿರುವ ಆದಿತ್ಯನ ಅರ್ಜಿ ಈ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.