ನ್ಯೂಸ್

ದಿಗಂತ್​ಗೆ ಮತ್ತೊಮ್ಮೆ ಸಿಸಿಬಿ ಡ್ರಿಲ್​!

arunakunigal

ಬೆಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ನಟ ದಿಗಂತ್​ಗೆ ಸಿಸಿಬಿ ಮತ್ತೊಮ್ಮೆ ನೋಟಿಸ್​ ಜಾರಿ ಮಾಡಿದ್ದು, ಬುಧವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಸೆ.17ರಂದು ಸ್ಯಾಂಡಲ್​ವುಡ್​ನ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ ಇಬ್ಬರೂ ಸಿಸಿಬಿ ವಿಚಾರಣೆ ಎದುರಿಸಿದ್ದರು. ಇದೀಗ ದಿಗಂತ್​ಗೆ ಸಿಸಿಬಿ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದು, ಬಂಧನ ಭೀತಿ ಆವರಿಸಿದೆ. ಇದನ್ನೂಓದಿರಿ ಕುಡಿತ-ಸಿಗರೇಟ್​ ಅಭ್ಯಾಸ ಇದ್ದದ್ದು ನಿಜ ಎಂದ ಲೂಸ್​ಮಾದ, ರಾಗಿಣಿ ಬಗ್ಗೆ ಹೇಳಿದ್ದೇನು?

ಐಂದ್ರಿತಾ ರೇ ಮತ್ತು ದಿಗಂತ್​ ಇಬ್ಬರನ್ನೂ ಪ್ರತ್ಯೇಕ ವಿಚಾರಣೆ ನಡೆಸಿರುವ ಸಿಸಿಬಿ ಮಹತ್ತರ ಮಾಹಿತಿ ಕಲೆ ಹಾಕಿದೆ. ಅಲ್ಲದೆ ಆ ವೇಳೆ ಇಬ್ಬರ ಮೊಬೈಲ್​ಗಳನ್ನು ವಶಕ್ಕೆ ಪಡೆದು ಎಫ್​ಎಸ್ ಎಲ್​ಗೆ ಕಳುಹಿಸಿ ಡೇಟಾ ರಿಟ್ರೀವ್ ಮಾಡಲಾಗಿದೆ.

ಟೆಕ್ನಿಕಲ್ ಎವಿಡನ್ಸ್, ಡಿಜಿಟಲ್ ಎವಿಡನ್ಸ್ ಮತ್ತು ಬಂಧಿತ ಆರೋಪಿ ಹೇಳಿಕೆ ಆಧರಿಸಿ ದಿಗಂತ್​ಗೆ ಮತ್ತೆ‌ ಸಿಸಿಬಿ ಡ್ರಿಲ್ ಶುರುವಾಗಿದೆ.

ಮೊದಲ ನೋಟಿಸ್ ಹಾಗೂ ಎರಡನೇ ನೋಟಿಸ್ ಮಧ್ಯದ ಒಂದು ವಾರದ ಅವಧಿಯಲ್ಲಿ ಸಾಕಷ್ಟು ಸಾಕ್ಷ್ಯಾಧಾರವನ್ನು ಸಿಸಿಬಿ ಕಲೆ ಹಾಕಿದ್ದು, ಇನ್ನಷ್ಟು ವಿಚಾರಣೆ ನಡೆಸಲಿದೆ. ಚಾಮರಾಜಪೇಟೆಯ ಸಿಸಿಬಿ ಮುಖ್ಯ ಕಚೇರಿಗೆ ಆಗಮಿಸುವಂತೆ ನೋಟಿಸ್​ನಲ್ಲಿ ವಿವರಿಸಲಾಗಿದೆ.