Rajnath Singh: ಆಧುನಿಕ ಯುದ್ಧ ನೀತಿಯಲ್ಲಿ ಡ್ರೋನ್‌ಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ (ಆಗಸ್ಟ್,30) ತಿಳಿಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ನಡೆದ ರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ರಕ್ಷಣಾ ಸಚಿವ, ಸಾಮಾನ್ಯವಾಗಿ, ನಾವು ವಿಮಾನ ಎಂಬ ಪದವನ್ನು ಕೇಳಿದಾಗ, ತೇಜಸ್, ರಫೇಲ್ ಮತ್ತು ಫೈಟರ್ ಜೆಟ್‌ಗಳ ಚಿತ್ರಗಳು ನೆನಪಿಗೆ ಬರುತ್ತವೆ. ಏಕೆಂದರೆ ಇವೆಲ್ಲವೂ ಯುದ್ಧ ವಿಮಾನಗಳಾಗಿವೆ. ಆದರೆ ಇಂದಿನ ಬದಲಾಗುತ್ತಿರುವ ಕಾಲದಲ್ಲಿ, ಡ್ರೋನ್‌ಗಳು ಯುದ್ದದಲ್ಲಿ ಗಮನಾರ್ಹ ಶಕ್ತಿಯಾಗಿ ಹೊರಹೊಮ್ಮಿವೆ. ದೊಡ್ಡ ವೆಪನ್ಗಳು ತಲುಪಲು ಸಾಧ್ಯವಾಗದ ಪ್ರದೇಶಗಳಲ್ಲಿಯೂ ಈಗ ಡ್ರೋನ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಮೈಲಿಗಲ್ಲು ನಿರ್ಮಿಸಿದ ಕೈರನ್ ಪೊಲ್ಲಾರ್ಡ್: ಈ ಸಾಧನೆಗೈದ 2ನೇ ಆಟಗಾರ| Kyron Pollard
ಮುಂದುವರೆದು ಮಾತನಾಡಿದ ರಾಜ್ನಾಥ್ ಸಿಂಗ್, ನೀವು ರಷ್ಯಾ ಮತ್ತು ಯುಕ್ರೇನ್ ಸಂಘರ್ಷವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಯುದ್ದದಲ್ಲಿ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಇಂದಿನ ಯುಗದಲ್ಲಿ ಡ್ರೋನ್‌ಗಳ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ನಮ್ಮ ಯುದ್ಧ ನೀತಿಯಲ್ಲಿ ಸೇರಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಈ ಯುದ್ದವು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.
ಡ್ರೋನ್‌ಗಳ ಇತಿಹಾಸವನ್ನು ಎತ್ತಿ ತೋರಿಸಿದ ಸಿಂಗ್, ಇವುಗಳ ಆರಂಭಿಕ ದಿನಗಳಲ್ಲಿ ಅವುಗಳನ್ನು ಕಣ್ಗಾವಲಿಗೆ ಮಾತ್ರ ಬಳಸಲಾಗುತ್ತಿತ್ತು. ನಂತರ ಕೆಲವು ದೇಶಗಳು ಯುದ್ಧಗಳಿಗಾಗಿ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದವು, ಮತ್ತು ಅನೇಕ ರಾಷ್ಟ್ರಗಳು ಗಡಿ ಸಂಘರ್ಷಗಳಲ್ಲಿ ಅವುಗಳನ್ನು ನಿಯೋಜಿಸಲು ಪ್ರಾರಂಭಿಸಿದವು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಡ್ರೋನ್ ತಂತ್ರಜ್ಞಾನಕ್ಕೆ ಹೂಡಿಕೆ ಮಾಡಿದ ದೇಶಗಳು ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಆದರೆ ಇನ್ನೂ ಅನೇಕ ದೇಶಗಳು ಹಿಂದುಳಿದಿವೆ. ಇಂದಿನ ರಕ್ಷಣಾ ಕ್ಷೇತ್ರದ ವಾಸ್ತವತೆಯು ವಿಮಾನ ತಂತ್ರಜ್ಞಾನ ಮತ್ತು ಡ್ರೋನ್‌ಗಳ ಮೇಲೆ ನಿಂತಿದೆ ಎಂದು ನಾನು ಹೇಳಬಲ್ಲೆ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಈ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮೊದಲು ನಾವು ಡ್ರೋನ್‌ಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು, ಆದರೆ ಇಂದು ನಾವು ಅವುಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸುತ್ತಿದ್ದೇವೆ, ಅಭಿವೃದ್ಧಿಪಡಿಸುತ್ತಿದ್ದೇವೆ ಮತ್ತು ತಯಾರಿಸುತ್ತಿದ್ದೇವೆ ಎಂದು ಡ್ರೋನ್‌ಗಳ ಮಹತ್ವವನ್ನು ಒತ್ತಿ ಹೇಳಿದರು.(ಏಜೆನ್ಸೀಸ್)