ನ್ಯೂಸ್

ಭಾರತೀಯ ನಿಯೋಗ ಆಗಮಿಸುವ ಮೊದಲೇ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಡ್ರೋನ್​ ದಾಳಿ| Drone Attack

ಮಾಸ್ಕೋ: ಭಾರತೀಯ ಸಂಸದರ ನಿಯೋಗವನ್ನು ಹೊತ್ತ ವಿಮಾನವು ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ಕ್ಷಣಗಳ ಮೊದಲು ಡ್ರೋನ್ ದಾಳಿ ಕಂಡುಬಂದಿದೆ. ಹೀಗಾಗಿ ಭಾರತೀಯ ನಿಯೋಗವನ್ನು ಹೊತ್ತ ವಿಮಾನವು ಬಹಳ ಹೊತ್ತು ಗಾಳಿಯಲ್ಲಿ ಸುತ್ತಾಡಿದೆ. ನಂತರ ಪರಿಸ್ಥಿತಿ ಸುಧಾರಿಸಿದ ನಂತರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆಗಿದೆ.

ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಭಾರತೀಯ ಸಂಸದರ ತಂಡ ಮಾಸ್ಕೋಗೆ ಹೋಗಿದೆ. ಆಪರೇಷನ್ ಸಿಂಧೂರ್‌ನ ಅಗತ್ಯವನ್ನು ಎತ್ತಿ ತೋರಿಸುವುದು ಮತ್ತು ಪಾಕಿಸ್ತಾನವನ್ನು ಬಯಲು ಮಾಡುವುದು ಇದರ ಉದ್ದೇಶವಾಗಿದೆ.

ನ್ನಿಮೋಳಿ ನೇತೃತ್ವದ ಸಂಸದರ ನಿಯೋಗ ಮೇ 22 ರಂದು ರಷ್ಯಾಕ್ಕೆ ತೆರಳಿತ್ತು. ಕನ್ನಿಮೋಳಿ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ತೊಂದರೆ ಅನುಭವಿಸಿದೆ ಎಂಬುದು ಈಗ ಬೆಳಕಿಗೆ ಬಂದಿದೆ.

ಭಾರತೀಯ ಸಂಸದರ ನಿಯೋಗವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.

(ಏಜೆನ್ಸೀಸ್)

ಮಾಸ್ಕೋ ವಿಮಾನ ನಿಲ್ದಾಣದ ಮೇಲಿನ ಈ ಡ್ರೋನ್ ದಾಳಿಯನ್ನು ಉಕ್ರೇನ್ ನಡೆಸಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್‌ನ ಈ ಡ್ರೋನ್ ದಾಳಿಯಿಂದಾಗಿ, ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಹಲವಾರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ‘

ಉಕ್ರೇನ್​ನಿಂದ​ ಡ್ರೋನ್​ ದಾಳಿ

ಕನಿಮೋಳಿ ಅವರು ತಮ್ಮ ನಿಯೋಗದ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಬಿಜೆಪಿ ಸಂಸದ ಬ್ರಿಜೇಶ್ ಚೌಟಾ, ಎಎಪಿ ಸಂಸದ ಡಾ. ಅಶೋಕ್ ಕುಮಾರ್ ಮಿತ್ತಲ್, ಮಾಜಿ ರಾಜತಾಂತ್ರಿಕ ಮಂಜೀವ್ ಪುರಿ ಮತ್ತು ಆರ್ಜೆಡಿ ಸಂಸದ ಪ್ರೇಮಚಂದ್ ಗುಪ್ತಾ ಇದ್ದಾರೆ. ಮಾಸ್ಕೋಗೆ ನಿಯೋಗದ ಸದಸ್ಯರೊಂದಿಗೆ ಹೊರಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.