ನ್ಯೂಸ್

ಸಾರ್ವಜನಿಕ ಸಾರಿಗೆಯಲ್ಲಿ ಮಹತ್ವದ ತಿರುವು: ಚಾಲಕ ರಹಿತ ಬಸ್ ಪ್ರಯೋಗಾರ್ಥ ಯಶಸ್ಸು..

ಸ್ಯಾನ್​ಫ್ರಾನ್ಸಿಸ್ಕೋ: ಜನನಿಬಿಡ ರಸ್ತೆಗಳಲ್ಲಿ ಸಾಗುವ ಬಸ್, ಜನರು ಬರುವಷ್ಟರಲ್ಲಿ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ. ಬಸ್ ಹತ್ತಿದ ನಂತರ ಮತ್ತೇ ಮುಂದೆ ಸಾಗುತ್ತದೆ. ಆದರೆ, ಇದರಲ್ಲಿ ವಿಶೇಷವೇನಿದೆ ಎಂದುಕೊಳ್ಳಬೇಡಿ. ಈ ಬಸ್ಸಿನಲ್ಲಿ ನಿಜವಾದ ಡ್ರೈವರ್ ಇಲ್ಲ.. ಸ್ಟೀರಿಂಗ್ ಕೂಡ ಇಲ್ಲ. ಆದರೂ ಕೂಡ ಬಸ್ ಯಾವುದೇ ತೊಂದರೆಯಿಲ್ಲದೆ ತನ್ನಷ್ಟಕ್ಕೆ ಚಲಿಸುತ್ತಿದೆ. ಇದು ಕಾಲ್ಪನಿಕ ಚಲನಚಿತ್ರಗಳಲ್ಲಿನ ದೃಶ್ಯವಲ್ಲ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಈ ಕನಸು ನನಸಾಗಿದೆ.

ಚಾಲಕ ರಹಿತ ಹಾಗೂ ಸ್ಟೀರಿಂಗ್ ರಹಿತ ಬಸ್​​ನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಇದನ್ನು ನೋಡಿದ ಜನರು ಹುಬ್ಬೆರಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ರೋಬೋಟ್ಯಾಕ್ಸಿಸ್ ಅನುಮೋದನೆಯ ಒಂದು ವಾರದೊಳಗೆ ಸ್ಯಾನ್ ಫ್ರಾನ್ಸಿಸ್ಕೋ ಈ ಬಸ್​ನ್ನು ಹೊರತಂದಿದ್ದು, ಈ ವಿನೂತನ ಬಸ್ ಶುಕ್ರವಾರ ಟ್ರೆಷರ್ ಐಲ್ಯಾಂಡ್ ಸುತ್ತ ಸುತ್ತಿದೆ. ಈ ಎಲೆಕ್ಟ್ರಿಕ್ ಬಸ್ ಯಾವುದೇ ತೊಂದರೆಯಿಲ್ಲದೆ 20 ನಿಮಿಷಗಳಲ್ಲಿ ದ್ವೀಪವನ್ನು ಸುತ್ತು ಹಾಕಿದ್ದು, ಇದಕ್ಕೆ ಡ್ರೈವರ್ ಇಲ್ಲ ಆದರೆ ಒಬ್ಬ ಅಟೆಂಡರ್ ಇದ್ದು ಆತ ತುರ್ತು ಸಂದರ್ಭದಲ್ಲಿ ಬಸ್​ನ್ನು ನಿಯಂತ್ರಿಸುತ್ತಾನೆ.

ಇದನ್ನೂ ಓದಿ: ಪ್ರತಿದಿನ ಅಕ್ಕಿ ಗಂಜಿ ಕುಡಿದರೆ ಇಷ್ಟೆಲ್ಲಾ ಲಾಭಗಳಿವೆ ಗೊತ್ತಾ..?

ಫ್ಲೋರಿಡಾ ಮೂಲದ ಕಂಪನಿ ಈ ಚಾಲಕ, ಸ್ಟೇರಿಂಗ್​ ರಹಿತ ಬಸ್​ನ ಪ್ರಾಯೋಗಿಕ ಚಾಲನೆಯನ್ನು ಕೈಗೊಂಡಿದ್ದು, ಈ ಬಸ್‌ನ ಮೊದಲ ಮತ್ತು ಕೊನೆಯ ನಿಲ್ದಾಣಗಳನ್ನು ಕಿರು ಸಂಪರ್ಕ ಮಾರ್ಗಗಳಿಗಾಗಿ ನಿರ್ಮಿಸಲಾಗಿದೆ. ಸ್ವಯಂ ಚಾಲಿತ ವಾಹನವು ಮಾನವನಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಹೆಚ್ಚು ವಿಶ್ವಾಸಾರ್ಹ ಸೇವೆಯನ್ನು ಒದಗಿಸುತ್ತದೆ ಏಕೆಂದರೆ ಇದು ಯಾವುದೇ ಕ್ಷಣದಲ್ಲಿ ವಿಚಲಿತರಾಗುವುದಿಲ್ಲ ಎಂದು ಪ್ರಾಜೆಕ್ಟ್ ಮ್ಯಾನೇಜರ್ ಶೆಲ್ಲಿ ಕ್ಯಾರನ್ ಹೇಳಿದ್ದಾರೆ.

ಪರೀಕ್ಷಾರ್ಥ ಸವಾರಿಯ ಸಮಯದಲ್ಲಿ ವಾಹನವನ್ನು ನಿಧಾನವಾಗಿ ಮತ್ತು ಬಹಳ ಎಚ್ಚರಿಕೆಯಿಂದ ಓಡಿಸಲಾಯಿತು. ರಸ್ತೆಗೆ ಅಡ್ಡಲಾಗಿ ಟ್ರಕ್ ನಿಲ್ಲಿಸಿದಾಗ ಅಟೆಂಡರ್ ವಾಹನವನ್ನು ಚಲಾಯಿಸಿದರು. ಈ ಬಸ್​ನಲ್ಲಿ 10 ಪ್ರಯಾಣಿಕರು ಕುಳಿತುಕೊಳ್ಳಬಹುದಾಗಿದ್ದು, ಇದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಚಲಿಸುತ್ತದೆ.(ಏಜೆನ್ಸೀಸ್​)