ಪುಣೆ: ಜಿಲ್ಲೆಯ ಪಿಂಪ್ರಿ- ಚಿಂಚ್ವಾಡ್ ಟೌನ್ಶಿಪ್ನಲ್ಲಿ ವ್ಯಕ್ತಿಯೋರ್ವನನ್ನು ಕಾರಿನ ಬ್ಯಾನೆಟ್ ಮೇಲೆ ಹಾಕಿ 3 ಕಿ.ಮೀ ದೂರ ಚಾಲಕ ಹೊತ್ತೊಯ್ದ ಘಟನೆ ಇತ್ತೀಚಿಗೆ ನಡೆದಿದೆ. ಇದೀಗ ಈ ವಿಡಿಯೋ(Video viral) ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ.
ಈ ಘಟನೆಯನ್ನು ಪೊಲೀಸರು ಗುರುತಿಸಿದ್ದು, ಕಾರು ಚಾಲಕ ಕಮಲೇಶ್ ಪಾಟೀಲ್ (23), ಇತನ ಇಬ್ಬರು ಸಹಚಾರರಾದ ಹೇಮಂತ್ ಮಲ್ಹಾಸ್ಕರ್(26) ಮತ್ತು ಪ್ರಥಮೇಶ್ ದಾರಾಡೆ(22) ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ನೂತನ ಸಿಎಂ! ಬಿಜೆಪಿ ಸಭೆಯಲ್ಲಿ ನಿರ್ಧಾರ; ಅಧಿಕೃತ ಘೋಷಣೆಯೊಂದೆ ಬಾಕಿ.. | Maha CM
ಪ್ರಕರಣದ ಹಿನ್ನೆಲೆ..
ಸಂತ್ರಸ್ತೆ ಝಚೇರಿಯಾ ಮ್ಯಾಥ್ಯೂ, ಬೈಕ್ನಲ್ಲಿ ಹೋಗುತ್ತಿದ್ದಾಗ ಇಂದಿನಿಂದ ಬಂದ ಆರೋಪಿಗಳ ಅಡಿ ಕಾರ್ ಇವರ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಕಾರಿನಲ್ಲಿದ್ದವರನ್ನು ಮ್ಯಾಥ್ಯೂ ಪ್ರಶ್ನಿಸಿದ್ದಾನೆ. ಇದರಿಂದ ಕುಪಿತಗೊಂಡ ಕಾರು ಚಾಲಕ ಕಮಲೇಶ್ ಪಾಟೀಲ್, ಮ್ಯಾಥ್ಯೂ ಅವರನ್ನು ಥಳಿಸಿ ಕಾರಿನ ಬ್ಯಾನೆಟ್ ಮೇಲೆ ಹಾಕಿ ಬರೊಬ್ಬರಿ ಮೂರು ಕಿ.ಮೀ ಹೊತ್ತೊಯ್ದಿದ್ದಾನೆ. ಕಾರಿನಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).