ಪ್ರೇಯಸಿಗೆ ಮಿಲಿಟರಿ ರಹಸ್ಯ ರವಾನೆ ಮಾಡಿದ ಮಾಜಿ ಕ್ಯಾಪ್ಟನ್ ಮಾಜಿ ಕ್ಯಾಪ್ಟನ್ 
ನ್ಯೂಸ್

DRDO ರಹಸ್ಯ ಮಾಹಿತಿ ಲೀಕ್: ಹನಿಟ್ರ್ಯಾಪ್‌ ಬಲೆಗೆ ಬಿದ್ದನಾ ಮಾಜಿ ಆರ್ಮಿ ಕ್ಯಾಪ್ಟನ್? | DRDO Secret Leak

ಡಿಆರ್‌ಡಿಒಗೆ ಸೇರಿದ ಅತ್ಯಂತ ರಹಸ್ಯ ಹಾಗೂ ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಮಹಿಳೆಯೊಂದಿಗೆ ಹಂಚಿಕೊಂಡ ಆರೋಪದ ಮೇಲೆ ತಮಿಳುನಾಡಿನಲ್ಲಿ ಮಾಜಿ ಆರ್ಮಿ ಕ್ಯಾಪ್ಟನ್‌ನನ್ನು ಬಂಧಿಸಲಾಗಿದೆ.

Defence Secrets Leak: ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಒಬ್ಬರು ರಕ್ಷಣಾ ಇಲಾಖೆಯ ಅತ್ಯಂತ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಯನ್ನು ಮಹಿಳೆಯೊಬ್ಬರ ಜತೆ ಹಂಚಿಕೊಂಡ ಆರೋಪದ ಮೇಲೆ ತಮಿಳುನಾಡಿನಲ್ಲಿ ಅರೆಸ್ಟ್ ಆಗಿದ್ದಾರೆ.

ವೆಲ್ಲೂರು ಮೂಲದ 52 ವರ್ಷದ ನಿವೃತ್ತ ಕ್ಯಾಪ್ಟನ್ ಬಾಬು, ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಆರಣಿ ಬಳಿ ಅಡಗಿದ್ದಾಗ ಖಚಿತ ಬೇಹುಗಾರಿಕಾ ಮಾಹಿತಿ ಆಧರಿಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಏನಿದು ಪ್ರಕರಣ?

ಆರೋಪಿ ಬಾಬು, ತಾನು ಪ್ರೀತಿಸುತ್ತಿದ್ದ ಮಹಿಳೆಯೊಂದಿಗೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (DRDO) ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪ್ರೀತಿಯ ನೆಪದಲ್ಲಿ ಈ ಮಹಿಳೆ ಭಾರತದ ಭದ್ರತಾ ಪಡೆಗಳ ಗೌಪ್ಯ ಮಾಹಿತಿಯನ್ನು ಕಲೆಹಾಕಿರಬಹುದು ಎನ್ನಲಾಗಿದೆ.

ಡಿಆರ್‌ಡಿಒದಲ್ಲಿ ಕೆಲಸ ಮಾಡಿದ್ದ ಆರೋಪಿ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಇಂತಹ ಅತ್ಯಂತ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ಬರುವುದಿಲ್ಲ. ಆರೋಪಿ ಈ ಹಿಂದೆ ಡಿಆರ್‌ಡಿಒದಲ್ಲಿ ಕೆಲಸ ಮಾಡಿದ್ದ’ ಎಂದು ತಿಳಿಸಿದ್ದಾರೆ.

ಮಹಿಳೆ ಯಾರು ಎಂಬ ತನಿಖೆ?

ಆತನ ಜತೆ ಸಂಪರ್ಕದಲ್ಲಿದ್ದ ಮಹಿಳೆ ಪಾಕಿಸ್ತಾನದವಳೇ ಎಂಬ ಪ್ರಶ್ನೆಗೆ, ‘ಪ್ರಸ್ತುತ ಈ ಬಗ್ಗೆ ಸ್ಪಷ್ಟತೆ ಇಲ್ಲ. ವಾಟ್ಸಾಪ್ ಸಂಸ್ಥೆಯಿಂದ ಐಪಿ (IP) ವಿಳಾಸದ ಮಾಹಿತಿ ಬಂದ ನಂತರವಷ್ಟೇ ಆಕೆಯ ಗುರುತು ಮತ್ತು ರಾಷ್ಟ್ರೀಯತೆ ಖಚಿತವಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Madhu on Rashmika : ನನ್ನ ಆಕ್ಸೆಂಟ್ ಹೀಗೇ ಇರುತ್ತೆ, ಅದಕ್ಕೇನು?: ರಶ್ಮಿಕಾ ಮಂದಣ್ಣ ಧೈರ್ಯಕ್ಕೆ ಹಿರಿಯ ನಟಿ ಮಧೂ ಫಿದಾ!

ಕೇಂದ್ರ ತನಿಖಾ ಸಂಸ್ಥೆಗಳ ವಶಕ್ಕೆ

1994ರಲ್ಲಿ ಸೇನೆಯಿಂದ ನಿವೃತ್ತರಾಗಿ ಡಿಆರ್‌ಡಿಒದಲ್ಲೂ ಕೆಲಸ ಮಾಡಿದ್ದ ಬಾಬೂನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆಗೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯ ಡಿಜಿಟಲ್ ದಾಖಲೆಗಳು ಹಾಗೂ ಮೊಬೈಲ್ ಸಂಭಾಷಣೆಗಳನ್ನು ತನಿಖಾಧಿಕಾರಿಗಳು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಈ ಮೂಲಕ ರಹಸ್ಯ ಮಾಹಿತಿ ಬೇರೆಯವರಿಗೆ ರವಾನೆಯಾಗಿದೆಯೇ ಮತ್ತು ಇದರ ಹಿಂದೆ ವಿದೇಶಿ ಬೇಹುಗಾರಿಕಾ ಜಾಲವಿದೆಯೇ ಎಂಬುದನ್ನು ಕಲೆಹಾಕಲಾಗುತ್ತಿದೆ. (ಏಜೆನ್ಸೀಸ್​)