ನ್ಯೂಸ್

ಡಾ. ಕಿಕ್ಕೇರಿ ಕೃಷ್ಣಮೂರ್ತಿಗೆ ವಿಶ್ವ ಮಾನ್ಯರು ಪ್ರಶಸ್ತಿ

ಯುಎಸ್​: ಅಮೆರಿಕದಲ್ಲಿ ನಡೆಯುತ್ತಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಖ್ಯಾತ ಗಾಯಕ ಸಂಗೀತ ನಿರ್ದೇಶಕ ನೂತನವಾಗಿ ಕೆ.ಎಸ್. ನರಸಿಂಹ ಸ್ವಾಮಿ ಟ್ರಸ್ಟ್​ನ ಅಧ್ಯಕ್ಷ ರಾಗಿ ಸರ್ಕಾರದಿಂದ ನೇಮಕವಾಗಿರುವ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರನ್ನು ಅಭಿನಂದಿಸಿ ವಿಶ್ವ ಮಾನ್ಯರು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿಧಾನ ಪರಿಷತ್​ನ ಸಭಾಪತಿಗಳಾದ ಸನ್ಮಾನ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಶ್ರೀಮತಿ ರಾಣಿ ಸತೀಶ್,ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಯಾದವ್, ವಚನಾನಂದ ಸ್ವಾಮೀಜಿ, ಹೃದಯವಾಹಿನಿ ಪತ್ರಿಕೆಯ ಸಂಪಾದಕರಾದ ಮಂಜುನಾಥ ಸಾಗರ್, ಅಕ್ಕ ಸಂಸ್ಥೆಯ ಸಂಸ್ಥಾಪಕರಾದ ಡಾ.ಅಮರನಾಥ ಗೌಡರು, ಹಳೆಕೋಟೆ ವಿಶ್ವಾಮಿತ್ರ ಮುಂತಾದ ಗಣ್ಯರು ಉಪಸ್ಥಿತರಿದ್ದರು.