ನ್ಯೂಸ್

ಗುಡ್ಡ ಕುಸಿತ ಸಂತ್ರಸ್ಥರಿಗೆ ಡಾ.ಇ.ಭಾಸ್ಕರ್ ಸಹಾಯ

ಬೆಂಗಳೂರು: ಇಎಲ್‌ವಿ ಸಮೂಹದ ಸಂಸ್ಥಾಪಕ ಹಾಗೂ ಚೇರ್ಮನ್ ಡಾ. ಇ. ಭಾಸ್ಕರ್ ಜನ್ಮದಿನಾಚರಣೆ ಸಮಾರಂಭವು ಭಾನುವಾರ ಅದ್ಧೂರಿಯಾಗಿ ನಡೆಯಿತು.

ವರ್ತೂರಿನಲ್ಲಿರುವ ಪ್ರಾಡಿಜೀಸ್ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಹಮ್ಮಿಕೋಂಡಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಸಿಬ್ಬಂಧಿಗಳು, ಹಿತೈಷಿಗಳು, ಬಂಧು-ಮಿತ್ರರು ಶುಭ ಕೋರಿದರು.

ಪ್ರತಿ ಜನ್ಮದಿನದಂದು ಸೇವಾ ಮನೋಭಾವದಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡುತ್ತಾ ಬಂದಿರುವ ಡಾ. ಭಾಸ್ಕರ್ ಈ ಬಾರಿ ಬಡಾವಣೆಯ ಜನರಿಗೆ ಉಚಿತ ಕುಡಿಯುವ ನೀರಿನ ಟ್ಯಾಂಕರ್‌ನ್ನು ನೀಡಿದರು. ಜೊತೆಗೆ ಇದೇ ವೇಳೆ ಕೇರಳ ಮತ್ತು ಕರ್ನಾಟಕದ ಗುಡ್ಡ ಕುಸಿತದಿಂದ ಸಂತ್ರಸ್ಥರಾದವರಿಗೆ ಆರ್ಥಿಕ ಸಹಾಯ ಮಾಡಿದರು. ಕಳೆದ ಬಾರಿ ನೀಡಿದ್ದ ಉಚಿತ ಆ್ಯಂಬುಲೆನ್ಸ್ ಬಡಜನರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಾಗಿ ಭಾಸ್ಕರ್ ಭರವಸೆ ನೀಡಿದರು.