ಬೆಂಗಳೂರು: ವಿವಿಧ ಕ್ಷೇತ್ರಗಳ 15 ಸಾಧಕರಿಗೆ 23, 24 ಮತ್ತು 25ನೇ ಸಾಲಿನ ಅಂಬೇಡ್ಕರ್ ಪ್ರಶಸ್ತಿಯನ್ನು(Ambedkar Award) ರಾಜ್ಯ ಸರ್ಕಾರ ಇದೀಗ ಪ್ರಕಟಿಸಿದೆ.
ಇದೇ ಏ.14ರಂದು ಡಾ.ಬಿ.ಆರ್ ಅಂಬೇಡ್ಕರ್ 134 ನೇ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಜನರಿಗೆ 2023, 2024 ಮತ್ತು 2025ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ವಿತರಿಸಿ, ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಮಾಹಿತಿ ನೀಡದೇ ಜಮೀನು ಸಮೀಕ್ಷೆ
1. ಹರಿಹರನಂದ ಸ್ವಾಮಿ-ಮೈಸೂರು, ಸಮಾಜಸೇವೆ.
2.ಇಂದೂಧರ ಹೊನ್ನಾಪುರ-ಬೆಂಗಳೂರು, ಪತ್ರಿಕೋದ್ಯಮ
3.ರುದ್ರಪ್ಪ ಹನಗವಾಡಿ-ದಾವಣಗೆರೆ, ಆಡಳಿತ
4.ಸೀತವ್ವ ಜೋಡಟ್ಟಿ-ಬೆಳಗಾವಿ, ದೇವದಾಸಿ ವಿಮೋಚನೆ.
5.ಕೆ.ಪುಂಡಲೀಕರಾವ್ ಶೆಟ್ಟಿ ಬಾ-ಬೀದರ್, ಸಮಾಜಸೇವೆ/ರಾಜಕೀಯ
1. ಶ್ರೀಧರ ಕಲಿವೀರ-ಬೆಂಗಳೂರು, ಹೋರಾಟ
2.ಮಲ್ಲಾಜಮ್ಮ-ಮಂಡ್ಯ, ಸಮಾಜಸೇವೆ/ರಾಜಕೀಯ
3.ರಾಮದೇವ ರಾಕೆ-ಬೆಂಗಳೂರು, ಪತ್ರಿಕೋದ್ಯಮ
4.ವೈ.ಬಿ. ಹಿಮ್ಮಡಿ-ಬೆಳಗಾವಿ,ಸಾಹಿತ್ಯ/ಸಾಮಾಜಸೇವೆ
5.ಲಕ್ಷ್ಮೀಪತಿ ಕೋಲಾರ-ಕೋಲಾರ, ಸಾಹಿತ್ಯ/ಸಂಘಟನೆ
1.ದತ್ತಾತ್ರೇಯ ಇಕ್ಕಳಗಿ-ಪ್ರಕಾಶನ
2.ಮಾವಳ್ಳಿ ಶಂಕರ್-ಹೋರಾಟ
3.ಎಫ್.ಎಚ್.ಜಕ್ಕಪ್ಪನವರ್-ಹೋರಾಟ
4.ಹೊನ್ನೂರು ಗೌರಮ್ಮ-ಜನಪದ ಕಲೆ
5.ಈರಪ್ಪ-ಹಾಸನ, ದಲಿತ ಹೋರಾಟ