ನ್ಯೂಸ್

ಮೆಟ್ರೋನಲ್ಲೇ​ ಕಿಸ್ಸಿಂಗ್​! ನಿರ್ಬಂಧಗಳನ್ನು ವಿರೋಧಿಸಿ ಸಾರ್ವಜನಿಕವಾಗಿ ಕಿಸ್ ಮಾಡಲು ಆರಂಭಿಸಿದ ಜೋಡಿಗಳು

ಮಾಸ್ಕೋ: ಭಾರತದಲ್ಲಿ ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆಯಾದರೂ ಅನೇಕ ರಾಷ್ಟ್ರಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿದೆ. ಅದೇ ಹಿನ್ನೆಲೆಯಲ್ಲಿ ರಷ್ಯಾ ಸೇರಿ ಅನೇಕ ರಾಷ್ಟ್ರಗಳು ವಿವಿಧ ನಿರ್ಬಂಧಗಳನ್ನು ಹೇರಿವೆ. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ವಿಚಿತ್ರ ರೀತಿಯಲ್ಲಿ ನಿರ್ಬಂಧಗಳನ್ನು ಮುರಿದು ಪ್ರತಿಭಟಿಸುತ್ತಿದ್ದಾರೆ.

ರಷ್ಯಾದಲ್ಲಿ ಕರೊನಾ ನಿರ್ಬಂಧಗಳಿಗೆ ವಿರೋಧ ವ್ಯಕ್ತಪಡಿಸಿರುವ ಜನರು, ಮೆಟ್ರೋ ರೈಲಿನಲ್ಲಿ ತಮ್ಮ ಜೋಡಿಯ ತುಟಿಗೆ ಮುತ್ತು ಕೊಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ರೀತಿ ಹತ್ತಾರು ಜೋಡಿಗಳು ಮೆಟ್ರೋ ರೈಲಿನಲ್ಲೇ ಚುಂಬಿಸುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಈ ರೀತಿ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಇದೇ ಮೊದಲಲ್ಲ. ಕರೊನಾ ಆರಂಭ ಕಾಲದಲ್ಲಿ ನಿರ್ಬಂಧಗಳನ್ನು ವಿರೋಧಿಸಿದ್ದ ರಷ್ಯಾದ ಜನರು ಶೌಚಗೃಹಗಳ ಸೀಟುಗಳನ್ನು ನೆಕ್ಕುವ ಮೂಲಕ ವಿಚಿತ್ರ ರೀತಿಯಲ್ಲಿ ನಿಯಮ ಉಲ್ಲಂಘನೆ ಮಾಡಿದ್ದರು. ಸರ್ಕಾರ ವಿಧಿಸುವ ನಿಯಮಗಳನ್ನು ಪಾಲಿಸಲು ತಾವು ಸಿದ್ಧರಿಲ್ಲ ಎಂದು ಈ ಮೂಲಕ ತಿಳಿಸಿದ್ದರು. (ಏಜೆನ್ಸೀಸ್​)