ನ್ಯೂಸ್

Double Eclipse: ಸೆಪ್ಟೆಂಬರ್​ನಲ್ಲಿ ಎರಡೆರೆಡು ಗ್ರಹಣ! ಯಾವಾಗ? ಪರಿಣಾಮವೇನು? ಇಲ್ಲಿದೆ ನೋಡಿ ಮಾಹಿತಿ

ಬಾಬುಪ್ರಸಾದ್​ ಮೋಡಿಸ್​

Double Eclipse: ಈ ಬಾರಿ ಒಂದೇ ದಿನದಲ್ಲಿ ಎರಡು ಗ್ರಹಣಗಳು ಸಂಭವಿಸಲಿವೆ. ಇದೇ ಸೆ.7ರಂದು ಚಂದ್ರಗ್ರಹಣ ಪ್ರಾರಂಭವಾಗಲಿದೆ. ಬಳಿಕ ಸೆ.21ರಂದು ಸೂರ್ಯಗ್ರಹಣ ಸಂಭವಿಸುತ್ತದೆ. ಇನ್ನು ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಗೋಚರಿಸಲಿಸಲಿದ್ದು, ಇದನ್ನು ನೋಡುವುದು ಬಹಳ ಅಪರೂಪ. ಅಲ್ಲದೆ, ಸೆ.7ರಂದು ಸಂಭವಿಸುವ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆ.

ಚಂದ್ರಗ್ರಹಣ ಎಲ್ಲಿ, ಯಾವಾಗ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರಲ್ಲಿ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಸೆ.7 ಮತ್ತು 8ರ ನಡುವೆ ಸಂಭವಿಸಲಿದೆ. ಇದು ಒಂದು ಪೂರ್ಣ ಚಂದ್ರಗ್ರಹಣ ಆಗಿದ್ದು, ಭಾರತ ಸೇರಿದಂತೆ ಏಷ್ಯಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇತರ ಪ್ರದೇಶಗಳಲ್ಲಿ ಗೋಚರವಾಗಲಿದೆ. ಭೂಮಿಯ ವಾತಾವರಣದಿಂದ ಕೆಂಪು ಬೆಳಕು ಚಂದ್ರನ ಮೇಲೆ ಬೀಳುವುದರಿಂದ ಚಂದ್ರನು “ರಕ್ತ ಚಂದ್ರ” ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಸೂರ್ಯಗ್ರಹಣ ಎಲ್ಲಿ, ಯಾವಾಗ ಸಂಭವಿಸಲಿದೆ?

ಸೆಪ್ಟೆಂಬರ್ 21 ರಂದು ಭಾಗಶಃ ಸೂರ್ಯಗ್ರಹಣವು ಭಾರತೀಯ ಸಮಯ ರಾತ್ರಿ 10:59 ಕ್ಕೆ ಪ್ರಾರಂಭವಾಗಿ ತಡರಾತ್ರಿ 03:23 ಕ್ಕೆ ಕೊನೆಗೊಳ್ಳುತ್ತದೆ.ಈ ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಉತ್ತರಫಲ್ಗುಣಿ ನಕ್ಷತ್ರಪುಂಜದಲ್ಲಿ ಸಂಭವಿಸುತ್ತದೆ. ಈ ಗ್ರಹಣದ ಒಟ್ಟು ಅವಧಿ 4 ಗಂಟೆ 24 ನಿಮಿಷಗಳು. ಈ ಸೂರ್ಯಗ್ರಹಣ ರಾತ್ರಿ ಸಂಭವಿಸುವುದರಿಂದ ಭಾರತದಲ್ಲಿ ಕಾಣವುದಿಲ್ಲ.

ಚಂದ್ರ ಗ್ರಹಣದಿಂದ ಪರಿಣಾಮ ಏನು?

ಇನ್ನು ಶಾಸ್ತ್ರದ 9 ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಅತ್ಯಂತ ಮುಖ್ಯವಾದ ಗ್ರಹವಾಗಿದೆ. ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಚಂದ್ರನಿಗೆ ಪ್ರಮುಖ ಸ್ಥಾನವಿದೆ. ಚಂದ್ರ, ಭೂಮಿಗೆ ಹತ್ತಿರವಾಗಿರುವುದರಿಂದ, ಅದು ನೇರವಾಗಿ ನಮ್ಮ ಮೇಲೆ ಸಣ್ಣ ಪುಟ್ಟ ಪರಿಣಾಮ ಬೀರುತ್ತದೆಯೇ ಹೊರತು ದೊಡ್ಡ ಪ್ರಮಾಣದಲ್ಲಿ ಏನು ಅನಾಹುತ ಆಗಲ್ಲ ಎನ್ನಲಾಗುತ್ತಿದೆ.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.