ನ್ಯೂಸ್

ಪಾಲಕ್​ ತಿನ್ನಲು ಇಷ್ಟವಿಲ್ಲವೇ? ಹೀಗೆ ಮಾಡಿ, ಇದು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ! Face pack

Face pack: ಇಂದಿನ ದಿನಗಳಲ್ಲಿ ಹಲವಾರು ಜನರು ತಮ್ಮ ಮುಖವು ಅಂದವಾಗಿ ಹೊಳೆಯುವಂತೆ ಕಾಣಲು ಬಳಸುತ್ತಾರೆ. ಅದೇ ರೀತಿಯಲ್ಲಿ ಪಾರ್ಲರ್​ಗಳಿಗೆ ಹೋಗುವುದು, ಇಲ್ಲವೇ ದುಬಾರಿ ಸಿರಮ್​ಗಳು, ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಇದು ಕೆಲವೇ ಸಮಯದವರೆಗೆ ಮಾತ್ರ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ನಂತರ ಮತ್ತೆ ಹಳೆಯ ಸ್ಥಿತಿಗೇ ಮರಳುತ್ತದೆ. ಶಾಶ್ವತವಾದಂತಹ ಚರ್ಮದ ಸೌಂದರ್ಯವನ್ನು ಬಯಸುವಂತವರು ಪಾರ್ಲರ್​ಗೆ ಹೋಗುವ ಬದಲು ನಿಮ್ಮ ಅಡುಗೆಮನೆಯ ಸಹಾಯವನ್ನು ಪಡೆಯಿರಿ. ಇದು ನಿಮ್ಮ ಮುಖವನ್ನು ಬೆಳಗಿಸುವ ಎಲ್ಲಾ ವಸ್ತುಗಳನ್ನು ನಿಮ್ಮ ಅಡುಗೆ ಮನೆಯೇ ನೀಡುತ್ತದೆ.

ಈ ಸರಳವಾದ ಮನೆಮದ್ದುಗಳಿಂದ ನಿಮ್ಮ ಮುಖದ ಮೇಲಿನ ಆಯಾಸ, ಕಪ್ಪು ಕಲೆಗಳು ಮತ್ತು ಮಂದತೆಯನ್ನು ಕೆಲವೇ ನಿಮಿಷಗಳಲ್ಲಿ ಕಡಿಮೆ ಮಾಡಬಹುದು. ಹಾಗಿದ್ದರೆ ಇಂದೇ ತಯಾರಿಸಿ ಗ್ರೀನ್​ ಗ್ಲೋ ಫೇಶಿಯಲ್​ ಮಾಸ್ಕ್​. ಇದು ಹೇಗೆ ತಯಾರಿಸುವುದು ಹಾಗೂ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ....

ಪಾಲಕ್ ಮತ್ತು ರೋಸ್ ವಾಟರ್ ಮಿಶ್ರಣ

ಪಾಲಕ್ ಮತ್ತು ರೋಸ್ ವಾಟರ್ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಇದು ನಮ್ಮ ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಪಾಲಕ್​ನಲ್ಲಿ ವಿಟಮಿನ್ A, C, K ಮತ್ತು ಆಂಟಿಆಕ್ಸಿಡೆಂಟ್‌ಗಳು ಇರುವುದರಿಂದ ಚರ್ಮವನ್ನು ಪೋಷಿಸಿ, ಮುಖದಲ್ಲಾಗಿರುವ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಹಾಗೆಯೇ ರೋಸ್​ ವಾಟರ್​ ಚರ್ಮವನ್ನು ತಂಪುಗೊಳಿಸಿ, pH ಸಮತೋಲನ ಕಾಯ್ದು, ಕೊಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ತಂಪು ಗುಣವನ್ನು ನೀಡುತ್ತದೆ. ಹಾಗಾಗಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ ಇದು ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪು ನೈಸರ್ಗಿಕ ಪೋಷಣೆಯನ್ನು ಒದಗಿಸುತ್ತದೆ

ಪಾಲಕ್ ಸೊಪ್ಪು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಬಹಳ ಒಳ್ಳೆಯದು ಎಂದು ನಂಬಲಾಗಿದೆ. ಇದರಲ್ಲಿರುವ ವಿಟಮಿನ್ ಎ, ಸಿ, ಇ ಮತ್ತು ಕಬ್ಬಿಣವು ಚರ್ಮವನ್ನು ಆಳದಿಂದ ಫೋಷಿಸುತ್ತದೆ. ಹಾಗೆಯೇ ಇದರಲ್ಲಿರುವ ಪೋಷಕಾಂಶಗಳು ಚರ್ಮದಲ್ಲಿರುವ ಜೀವಕೋಶಗಳನ್ನು ಸರಿಪಡಿಸುವಂತೆ ಮಾಡುತ್ತದೆ. ಮೆಂತೆ ಸೊಪ್ಪಿನ ಪೇಸ್ಟ್​ನ್ನು ಆಗ್ಗಾಗೆ ನಿಮ್ಮ ಚರ್ಮಕ್ಕೆ ಸಿಂಪಡಿಸುವುದರಿಂದ ಇದು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಚರ್ಮವು ಬಹಳ ಕಾಲದವರೆಗೂ ಚೆನ್ನಾಗಿರುತ್ತದೆ.

ರೋಸ್ ವಾಟರ್ ಚರ್ಮಕ್ಕೆ ನೈಸರ್ಗಿಕ ಟೋನರ್​

ರೋಸ್ ವಾಟರ್ ಚರ್ಮವನ್ನು ತಾಜಾ ಮತ್ತು ಹೈಡ್ರೀಕರಿಸುವ ಒಂದು ಘಟಕವಾಗಿದೆ. ಇದು ಚರ್ಮದ ಮೇಲೆ ಇರುವಂತಹ ಧೂಳು, ಮಾಲಿನ್ಯ ಮತ್ತು ಕಿರಿಕಿರಿಯನ್ನು ತೆಗೆಯಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಚರ್ಮವನ್ನು pH ಸಮತೋಲನವನ್ನು ಕಾಯ್ದುಕೊಳ್ಳುವಂತೆ ಸಹಾಯ ಮಾಡುತ್ತದೆ. ರೋಸ್​ ವಾಟರ್​ನ್ನು ಚರ್ಮಕ್ಕೆ ಸಿಂಪಡಿಸುವುದರಿಂದ ಇದು ಚರ್ಮವನ್ನು ಬಿಗಿಗೊಳಿಸುವಂತೆ ಮಾಡುತ್ತದೆ.

ಅಕ್ಕಿ ಹಿಟ್ಟಿನ ಸ್ಕ್ರಬ್​

ಅಕ್ಕಿ ಹಿಟ್ಟನ್ನು ಮುಖಕ್ಕೆ ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದು ಚರ್ಮದಲ್ಲಿರುವ ಸತ್ತ ಕಣಗಳನ್ನು ತೆಗೆದು ಚರ್ಮವನ್ನು ಮೃದವಾಗಿರುವಂತೆ ಮಾಡಲು ಸಾಧ್ಯವಾಗುತ್ತದೆ. ಇದು ಮುಖದಲ್ಲಾಗುವ ಕಪ್ಪು ಕಲೆಗಳನ್ನು ಹೋಗಲಾಡಿಸಿ ಚರ್ಮವನ್ನು ತಿಳಿಗೊಳಿಸುತ್ತದೆ. ಅಕ್ಕಿ ಹಿಟ್ಟಿಗೆ ರೋಸ್​ ವಾಟರ್ ಅಥವಾ ನೀರನ್ನು ಹಾಕಿ 15 ನಿಮಿಷ ಸ್ಕ್ರಬ್​ ಮಾಡಿ ಇದು ಚರ್ಮದ ಸೌಂದರ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ಪಾಲಕ್​ ಫೇಸ್​ ಪ್ಯಾಕ್​ ಮಾಡುವುದು ಹೇಗೆ?

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.