ನ್ಯೂಸ್

ಈ ಮೂರು ರಾಶಿಯವರಿಗೆ ಜವಾಬ್ದಾರಿ ಅಂದರೆ ಅಲರ್ಜಿಯಂತೆ! ನಿಮ್ಮದೂ ಇದೇ ರಾಶಿನಾ? Zodiac signs

Zodiac signs : ರಾಶಿಚಕ್ರ ಮತ್ತು ಮನುಷ್ಯನ ವ್ಯಕ್ತಿತ್ವದ ನಡುವಿನ ಸಂಬಂಧವು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಮುಖ ಅಂಶವಾಗಿದೆ. ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ಸಮಯದಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿಚಕ್ರದ ಸ್ಥಾನವು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.

ಅದೇ ರೀತಿ ಕೆಲವು ರಾಶಿಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಬೇಜವಾಬ್ದಾರಿಯಿಂದ ಕೂಡಿರುತ್ತಾರೆ ಮತ್ತು ತಮ್ಮ ಸಂಬಂಧಗಳ ಕಡೆಗೆ ತಮ್ಮ ಕರ್ತವ್ಯಗಳನ್ನು ಯಾವಾಗಲೂ ನಿರ್ಲಕ್ಷಿಸುತ್ತರಂತೆ! ಹಾಗಾದರೆ, ಯಾವ ರಾಶಿಯವರಿಗೆ ಜವಾಬ್ದಾರಿ ಅಂದರೆ ಅಲರ್ಜಿ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರು ಸ್ಪರ್ಧಾತ್ಮಕರು ಮತ್ತು ಜೀವನದಲ್ಲಿ ಯಾವಾಗಲೂ ಹೆಚ್ಚಿನ ಉತ್ಸಾಹವನ್ನು ಹೊಂದಿರುತ್ತಾರೆ. ಆದರೆ, ಕೇವಲ ತಮ್ಮ ಗುರಿಗಳ ಬಗ್ಗೆ ತುಂಬಾ ಗೀಳನ್ನು ಹೊಂದಿರುತ್ತಾರೆ ಹೊರತು ಇತರ ವಿಷಯಗಳಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಸ್ಪರ್ಧೆಯಲ್ಲಿ ಗೆಲ್ಲುವ ವಿಷಯ ಬಂದಾಗ ಅವರು ಆಗಾಗ್ಗೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ, ತಮ್ಮ ವ್ಯಾಪ್ತಿಗೆ ಮೀರಿದ ಯಾವುದನ್ನಾದರೂ ಸವಾಲಾಗಿ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸುವುದೇ ಇಲ್ಲ. ಈ ರಾಶಿಯವರು ಸಾಮಾನ್ಯವಾಗಿ ಯಾವುದೇ ವಿಚಾರಗಳನ್ನು ತಮ್ಮ ಅಹಂಕಾರಕ್ಕೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಪರಿಸ್ಥಿತಿಯಿಂದ ತೊಂದರೆಯನ್ನು ಉಂಟುಮಾಡುತ್ತಾರೆ. ಈ ರಾಶಿಯವರು ಸಂಬಂಧಗಳ ಬಗ್ಗೆ ಹೆಚ್ಚು ಗಮನ ಹರಿಸುವುದೇ ಇಲ್ಲ.

ಮಿಥುನ ರಾಶಿ

ಮಿಥುನ ರಾಶಿಯವರು ವಿನೋದ ಮತ್ತು ಉತ್ಸಾಹದಿಂದ ತುಂಬಿರುತ್ತಾರೆ. ಅವರು ತಮ್ಮ ದ್ವಂದ್ವ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಜವಾಬ್ದಾರಿಗಳನ್ನು ತಪ್ಪಿಸಿಕೊಳ್ಳುವಲ್ಲಿ ನಿಪುಣರು. ಅವರು ಯಾವಾಗಲೂ ತಮ್ಮ ರೋಮಾಂಚನಕ್ಕಾಗಿ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳುತ್ತಾರೆ. ಸಣ್ಣ ಸಂತೋಷಗಳಿಗಾಗಿ ದೊಡ್ಡ ಜವಾಬ್ದಾರಿಗಳಿಂದ ಯಾವಾಗಲೂ ದೂರ ಸರಿಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಕುಟುಂಬ ಮತ್ತು ಸ್ನೇಹಿತರು ಈ ರಾಶಿಯವರ ಅಪಕ್ವ ವರ್ತನೆಯಿಂದ ಭಾರಿ ನಿರಾಶೆಗೊಳ್ಳುತ್ತಾರೆ. ಈ ರಾಶಿಯವರು ಎಂದಿಗೂ ಅವರಿಗೆ ನೀಡಲಾದ ಜವಾಬ್ದಾರಿಗಳನ್ನು ಪೂರೈಸುವುದಿಲ್ಲ.

ಧನುಸ್ಸು ರಾಶಿ

ಧನುಸ್ಸು ರಾಶಿಯವರು ನಿರಂತರವಾಗಿ ಚಿಂತೆಗೀಡಾಗುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಬೇಜವಾಬ್ದಾರಿ ವರ್ತನೆಯಿಂದ ತಮಗೆ ತಾವೇ ದುರಾದೃಷ್ಟವನ್ನು ತರುತ್ತಾರೆ. ಅವರು ತುಂಬಾ ಅಸಡ್ಡೆ ಮತ್ತು ಸ್ವಾತಂತ್ರ್ಯ ಪ್ರಿಯರಾಗಿರುವುದರಿಂದ, ತಮ್ಮ ಮುಂದೆ ಇರುವ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಜವಾಬ್ದಾರಿಗಳು ಮತ್ತು ಬಾಧ್ಯತೆಗಳನ್ನು ಯಾವಾಗಲೂ ಸಂಪೂರ್ಣವಾಗಿ ದ್ವೇಷಿಸುವ ಈ ರಾಶಿಚಕ್ರ ಚಿಹ್ನೆಯು ಸಂಬಂಧದಲ್ಲಿ ದೀರ್ಘಕಾಲ ಉಳಿಯಲು ಕಷ್ಟಪಡುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.