ನ್ಯೂಸ್

ಮಳೆಗಾಲದ ಪ್ರವಾಸದಲ್ಲಿ ಭಾರತದ ಈ 5 ಪ್ರದೇಶಗಳನ್ನು ಖಂಡಿತವಾಗಿಯೂ ಮಿಸ್​ ಮಾಡ್ಬೇಡಿ..|Monsoon trip

Monsoon trip : ಮಳೆಗಾಲದ ಪ್ರವಾಸವು ಭಾರತದಲ್ಲಿ,ಒಂದು ವಿಶಿಷ್ಟ ಅನುಭವವಾಗಿದೆ. ಮುಂಗಾರಿನ ಮೊದಲ ಮಳೆ ಹನಿಗಳು ಮಣ್ಣಿನ ಮೇಲೆ ಬೀಳುತ್ತಿದ್ದಂತೆಯೇ ಮಣ್ಣಿನ ಸುವಾಸನೆ ಹೊರಸೂಸುತ್ತದೆ. ಇನ್ನು ಮಳೆ ಬಂದಾಗ ಸುಮಾರು ಪ್ರವಾಸಿಗರಿಗೆ ಎಲ್ಲಿಯಾದರೂ ವಿಹಾರ ತಾಣಗಳನ್ನು ನೋಡಲು ಆಸೆ ಪಡುತ್ತಾರೆ. ಇನ್ನು ಈ ಕಾಲದಲ್ಲಿ ಪ್ರಕೃತಿಯ ಸೌಂದರ್ಯವು ತನ್ನ ಎಲ್ಲ ಆಕರ್ಷಣೆಯೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ. ಮಳೆಗಾಲದ ಪ್ರವಾಸಕ್ಕೆ ಕೆಲವು ಉತ್ತಮ ತಾಣಗಳು ಮತ್ತು ಮಾಹಿತಿಗಳನ್ನು ಇಲ್ಲಿ ನಿಡಲಾಗಿದೆ.

ಗೋವಾ

ಗೋವಾ, ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಸಣ್ಣ ರಾಜ್ಯವಾಗಿದ್ದು, ಮಳೆಗಾಲದಲ್ಲಿ ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ. ಈ ಸಮಯದಲ್ಲಿ ಕಡಿಮೆ ಜನಸಂದಣಿಯಿಂದ ಸಮುದ್ರ ತೀರಗಳಾದ ಬಾಗಾ, ಕ್ಯಾಲಂಗುಟ್, ಮತ್ತು ಕುಡ್ಲೆ ಶಾಂತವಾಗಿರುತ್ತವೆ. ದುಧ್‌ಸಾಗರ ಜಲಪಾತವು ಮಳೆಯಿಂದ ರಭಸಗೊಂಡು ಅದ್ಭುತವಾಗಿ ಕಾಣಿಸುತ್ತಾ ಪ್ರವಾಸಿಗರನ್ನು ಕಂಗೊಳಿಸುತ್ತದೆ. ಇನ್ನು ಓಲ್ಡ್ ಗೋವಾದ ಐತಿಹಾಸಿಕ ಚರ್ಚ್‌ಗಳು, ಭಗವಾನ್ ಮಹಾವೀರ್ ವನ್ಯಜೀವಿ ಧಾಮ, ಮತ್ತು ಮಾಂಡವಿ ನದಿಯ ದೋಣಿ ವಿಹಾರವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಗೋವಾದ ಆಹಾರ ವಿಚಾರಕ್ಕೆ ಬಂದರೆ ಅಲ್ಲಿಯ ​ ಸ್ಥಳೀಯ ಸೀಫುಡ್, ಫೆನಿ ಗಳು ಬಾಯಲ್ಲಿ ನೀರೂರಿಸುತ್ತದೆ. ಮಳೆಗಾಲದ ಗೋವಾ ಪ್ರಕೃತಿಯ ಸೊಗಸನ್ನು ಆನಂದಿಸಲು ಉತ್ತಮ ತಾಣವಾಗಿದೆ.

ಲೋನಾವಾಲ

ಲೋನಾವಾಲ, ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತಗಳಲ್ಲಿರುವ ಜನಪ್ರಿಯ ಗಿರಿಧಾಮ. ಇದು ಮುಂಬೈನಿಂದ 96 ಕಿಮೀ ಮತ್ತು ಪುಣೆಯಿಂದ 64 ಕಿಮೀ ದೂರದಲ್ಲಿದೆ. ಮಳೆಗಾಲದಲ್ಲಿ ಜಲಪಾತಗಳು, ಹಸಿರು ಕಣಿವೆಗಳು, ಮತ್ತು ಮಂಜಿನಿಂದ ಕೂಡಿದ ಗುಡ್ಡಗಳಿಂದ ಆಕರ್ಷಕವಾಗಿದೆ. ಭೂಷಿ ಡ್ಯಾಮ್, ಟೈಗರ್ಸ್ ಲೀಪ್, ಕಾರ್ಲಾ ಗುಹೆಗಳು, ಮತ್ತು ರಾಜಮಾಚಿ ಕೋಟೆ ಪ್ರಮುಖ ಆಕರ್ಷಣೆ ತಾಣಗಳಾಗಿವೆ. ಚಿಕ್ಕಿ ಸಿಹಿ ತಿಂಡಿಯು ಇಲ್ಲಿ ಪ್ರಸಿದ್ದಿಯಾಗಿದೆ. ಟ್ರೆಕ್ಕಿಂಗ್, ಕ್ಯಾಂಪಿಂಗ್, ಮತ್ತು ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಇದು ಉತ್ತಮ ತಾಣವಾಗಿದೆ.

ಮೌಂಟ್​ ಅಬು ರಾಜಸ್ಥಾನ್​

ಮೌಂಟ್ ಅಬು, ರಾಜಸ್ಥಾನದ ಏಕೈಕ ಗಿರಿಧಾಮವಾಗಿದೆ. ಅರಾವಳಿ ಪರ್ವತಗಳಲ್ಲಿ 1,220 ಮೀಟರ್ ಎತ್ತರದಲ್ಲಿದೆ. ಮಳೆಗಾಲದಲ್ಲಿ ಹಸಿರು ಕಾಡುಗಳು, ಜಲಪಾತಗಳು, ಮತ್ತು ಮಂಜಿನ ಕಣಿವೆಗಳು ನೋಡುಗರನ್ನು ಘರ್ಜಿಸುತ್ತವೆ. ಇನ್ನು ದಿಲ್ವಾರ ಜೈನ ದೇವಾಲಯಗಳು, ನಕ್ಕಿ ಸರೋವರ, ಸನ್‌ಸೆಟ್​ ಹಾಗೂ ಗುರು ಶಿಖರ್ ಪ್ರಮುಖವಾಗಿ ನೋಡುಗರನ್ನು ಆಕರ್ಷಿಸುವಂತ ಪ್ರದೇಶಗಳಾಗಿದೆ. ಟ್ರೆಕ್ಕಿಂಗ್, ದೋಣಿವಿಹಾರ, ಮತ್ತು ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು ಉತ್ತಮ ತಾಣವಾಗಿದೆ.

ಕೇರಳ

ಮಳೆ ಸುರಿಯುತ್ತಿದ್ದಂತೆಯೇ ಕೇರಳದ ವಯನಾಡ್​ ಸ್ವರ್ಗವಾಗಿ ಬದಲಾಗುತ್ತದೆ. ಇಲ್ಲಿ ಜನಪ್ರಿಯ ಗಿರಿಧಾಮ, ಮಳೆಗಾಲದಲ್ಲಿ ತೇಯಿಲೆ ತೋಟಗಳು, ಮಂಜಿನ ಕಣಿವೆಗಳು, ಮತ್ತು ಜಲಪಾತಗಳು ನೋಡುಗರನ್ನು ಕಂಗೊಳಿಸುತ್ತವೆ. ಇನ್ನು ಎರವಿಕುಲಂ ರಾಷ್ಟ್ರೀಯ ಉದ್ಯಾನ, ಅಟ್ಟುಕಾಲ್ ಜಲಪಾತ, ಮ್ಯಾಟ್ಟುಪೆಟ್ಟಿ ಡ್ಯಾಮ್, ಮತ್ತು ಆನೈಮುಡಿ ಶಿಖರ ಪ್ರಮುಖ ಆಕರ್ಷಣೆ ತಾಣಗಳು. ಪ್ರಕೃತಿಯ ವೈಭವವನ್ನು ಆನಂದಿಸಲು ಈ ಕೇರಳವು ಸಹಾಯ ಮಾಡುತ್ತದೆ.

ಆಗುಂಬೆ

ಆಗುಂಬೆ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ "ದಕ್ಷಿಣ ಭಾರತದ ಚಿರಪುಂಜಿ" ಎಂದು ಕರೆಯಲ್ಪಡುವ ಗಿರಿಧಾಮವಾಗಿದೆ. ಇನ್ನು ಭಾರೀ ಮಳೆಯ ಸಂದರ್ಭದಲ್ಲಿ ಜಲಪಾತಗಳು, ಮತ್ತು ಹಸಿರು ಕಾಡುಗಳಿಂದ ಆಕರ್ಷಕವಾಗಿದೆ. ಬರಕಾನ ಫಾಲ್ಸ್, ಒನಕೆ ಅಬ್ಬಿ ಫಾಲ್ಸ್, ಸೀತಾನದಿ, ಮತ್ತು ಕೂಡ್ಲು ತೀರ್ಥ ಜಲಪಾತಗಳು ನೋಡುಗರನ್ನು ಪ್ರಮುಖವಾಗಿ ಆಕರ್ಷಿಸುತ್ತವೆ. ಇನ್ನು ಈ ಪ್ರದೇಶಗಳಲ್ಲಿ ಟ್ರೆಕ್ಕಿಂಗ್, ಪಕ್ಷಿವೀಕ್ಷಣೆ, ಮತ್ತು ಪ್ರಕೃತಿ ಛಾಯಾಗ್ರಹಣ ಮಾಡಲು ಆದರ್ಶವಾಗಿದೆ. (ಏಜೆನ್ಸೀಸ್​)