ನ್ಯೂಸ್

ಸನಾತನ ಹೇಳಿಕೆ; ಉದಯನಿಧಿ ಸ್ಟಾಲಿನ್​ ಮಾತನ್ನು ಯಾರೂ ನಂಬಬೇಡಿ ಎಂದ ಕಾಂಗ್ರೆಸ್​

ನವದೆಹಲಿ: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಭಾಷಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ ಮೌನ ಮುರಿದಿದ್ದು, ಅವರ ಮಾತನ್ನು ಯಾರೂ ನಂಬಬೇಡಿ ಎಂದಿದೆ.

ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಹಿರಿಯ​ ನಾಯಕ ಪವನ್​ ಖೇರಾ, ಕಾಂಗ್ರೆಸ್​ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ನಾವು ಸರ್ವಧರ್ಮ ಸಂಭವದಲ್ಲಿ ನಂಬಿಕೆ ಇಡುವವರು ಎಂದಿದ್ದಾರೆ.

ಕಾಂಗ್ರೆಸ್​ ಪಕ್ಷವು ಸರ್ವಧರ್ಮ ಸಂಭವದಲ್ಲಿ ಹೆಚ್ಚು ನಂಬಿಕೆ ಇರಿಸಿದೆ. ಯಾರು ಸಹ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸಬಾರದು. ಕಾಂಗ್ರೆಸ್​ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. I.N.D.I.A ಒಕ್ಕೂಟದ ಪ್ರತಿಯೊಬ್ಬ ನಾಯಕರಿಗು ಸಹ ಪ್ರತಿ ಸಮುದಾಯ, ಧರ್ಮ ಹಾಗೂ ಜನರ ನಂಬಿಕೆಗೆ ಹೆಚ್ಚು ಗೌರವ ಕೊಡುತ್ತಾರೆ.

ಸಚಿವ ಉದಯನಿಧಿ ಸ್ಟಾಲಿನ್​ ನೀಡಿರುವ ಹೇಳಿಕೆಯನ್ನು ಯಾರು ನಂಬಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಹಿರಿಯ ನಾಯಕ ಪವನ್​ ಖೇರಾ ಸನಾತನ ಹೇಳಿಕೆ ವಿವಾದವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.