ನ್ಯೂಸ್

Donald Trump ಪ್ರಮಾಣ ವಚನ ಸ್ವೀಕಾರ ಸಮಾರಂಭ; ಕಾಂಚಿಪುರಂ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ; ವಿಶೇಷತೆ ಗೊತ್ತೇ?

ವಾಷಿಂಗ್​ಟನ್​​: ಕೆಲವೇ ಕ್ಷಣಗಳಲ್ಲಿ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್(Donald Trump )​ ಟ್ರಂಪ್​ ಪ್ರಮಾಣವಚನ(ಜ.20) ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಸಮಾರಂಭದಲ್ಲಿ ಪಾಲ್ಗೊಂಡಿರುವ ಉದ್ಯಮಿ ಮುಕೇಶ್​ ಅಂಬಾನಿ ಪತ್ನಿ ನೀತಾ ಅಂಬಾನಿ ಕಾಂಚಿಪುರಂ ಸೀರೆಯಲ್ಲಿ ಮಿಂಚಿದ್ದು, ಇವರ ಸೀರೆಯ ವೈಶಿಷ್ಠತೆಯ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಚರ್ಚೆಯಾಗುತ್ತಿದೆ.

ಹೌದು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಾಸ್ಟರ್ ಕುಶಲಕರ್ಮಿ ಬಿ. ಕೃಷ್ಣಮೂರ್ತಿ ನೇಯ್ದ ಕಸ್ಟಮ್-ನಿರ್ಮಿತ, ಸಾಂಪ್ರದಾಯಿಕ ಕಾಂಚೀಪುರಂ ರೇಷ್ಮೆ ಸೀರೆ ಧರಿಸಿರುವ ನೀತಾ ಅಂಬಾನಿ ಜಾಗತಿಕ ವೇದಿಕೆಯಲ್ಲಿ ಮಿಂಚಿದ್ದಾರೆ. ಇದೀಗ ಇವರ ಫೋಟೊಗಳು ಭಾರಿ ವೈರಲ್​​ ಆಗುತ್ತಿವೆ.

ಸೀರೆಯ ವಿಶೇಷತೆ..

ಕಾಂಚೀಪುರಂನ ಭವ್ಯವಾದ ದೇವಾಲಯಗಳ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಅಂಶದಿಂದ ಪ್ರೇರಿತವಾದ 100 ಕ್ಕೂ ಅಧಿಕ ಮಹತ್ವದ ಸಾಂಪ್ರದಾಯಿಕ ಲಕ್ಷಣಗಳನ್ನು ಒಳಗೊಂಡಂತೆ ಸೀರೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಇರುತಲೈಪಕ್ಷಿ (ವಿಷ್ಣುವನ್ನು ಸಂಕೇತಿಸುವ ಎರಡು ತಲೆಯ ಹದ್ದು), ಮಾಯಿಲ್ (ಅಮರತ್ವ ಮತ್ತು ದೈವತ್ವವನ್ನು ಪ್ರತಿನಿಧಿಸುತ್ತದೆ) ನಂತಹ ಸಂಕೀರ್ಣವಾದ ಮತ್ತು ನಿಖರವಾಗಿ ಆಯ್ಕೆಮಾಡಿದ ಲಕ್ಷಣಗಳನ್ನು ಒಳಗೊಂಡಿದೆ. ಅಲ್ಲದೆ ಅಗಿನ ಸಮಕಾಲೀನ ಸ್ಪರ್ಶವನ್ನು ಸೇರಿಸುವ ಮೂಲಕ ಸೀರೆಯನ್ನು ವಿನ್ಯಾಸ ಮಾಡಲಾಗಿದೆ.

ದಕ್ಷಿಣ ಭಾರತದಲ್ಲಿ ರಚಿಸಲಾದ 200 ಕ್ಕೂ ಹಳೆಯದಾದ ಭಾರತೀಯ ಪೆಂಡೆಂಟ್​ ಇದಾಗಿದೆ. ಪಚ್ಚೆಗಳು, ಮಾಣಿಕ್ಯಗಳು, ವಜ್ರ, ಮುತ್ತುಗಳಿಂದ ಸುತ್ತುವರೆದ ಗಿಣಿ ಆಕಾರದ ನಿಧಿ ವಿನ್ಯಾಸ ಇದಾಗಿದೆ. ಅಲ್ಲದೆ, ಕೆಂಪು ಮತ್ತು ದಂತಕವಚಗಳೊಂದಿಗಿನ ಕುಂದನ್​​ ತಂತ್ರಜ್ಞಾನವನ್ನು ಇದರದಲ್ಲಿ ಹೊಂದಿಸಲಾಗಿದೆ ಎಂದು ವರದಿಯಾಗಿದೆ.

ಇಂತಹ ಜಾಗತಿಕ ವೇದಿಕೆಯಲ್ಲಿ ನೀತಾ ಅಂಬಾನಿ ಭಾರತೀಯ ಸಂಪ್ರದಾಯಗಳ ಶಾಶ್ವತ ಸೌಂದರ್ಯವನ್ನು ಜಗತ್ತಿಗೆ ತೊರಿಸಿಕೊಟ್ಟಿದ್ದಾರೆ. ಅಲ್ಲದೆ, ಈ ಮೂಲಕ ದೇಶದ ಕುಶಲಕರ್ಮಿಗಳನ್ನು ಗೌರವಿಸಿದ್ದಾರೆ.(ಏಜೆನ್ಸೀಸ್​)