ಇಸ್ಲಾಮಾಬಾದ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಮಗೆ ಗೊತ್ತಿರುತ್ತದೆ. ಅಮೆರಿಕದಲ್ಲಿರುವ ಅವರು ಪಾಕಿಸ್ತಾನದಲ್ಲಿ ಆಗಾಗ ಕಾಣಿಸಿಕೊಳ್ತಾರಂತೆ. ಅದರಲ್ಲೂ ಜುಬ್ಬ ಪೈಜಾಮ್ ಧರಿಸಿ, ಪಂಜಾಬಿ ಹಾಡು ಹೇಳಿಕೊಂಡು ಇರುತ್ತಾರಂತೆ.
ಇದೇನಪ್ಪಾ ಎನಿಸಿದರೂ ಇದು ನಿಜವೇ. ಆದರೆ ಪಾಕಿಸ್ತಾನದಲ್ಲಿ ಇರುವುದು ಟ್ರಂಪ್ ಅಲ್ಲ ಬದಲಾಗಿ ಅವರಿಗೆ ಹೋಲುವ ಸಲೀಂ. ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಸಲೀಂ ನೋಡುವುದಕ್ಕೆ ಸೇಮ್ ಟ್ರಂಪ್ ರೀತಿಯೇ ಕಾಣುತ್ತಾರಂತೆ. 2017ರಲ್ಲಿ ಟ್ರಂಪ್ ಪಾಕ್ಗೆ ಬಂದ ನಂತರ ಸಲೀಂ ಸ್ನೇಹಿತರು ಆತನನ್ನು ಟ್ರಂಪ್ ಎಂದೇ ಕರೆಯುತ್ತಾರಂತೆ.
ಪಾಕಿಸ್ತಾನದಲ್ಲಿ ಟ್ರಂಪ್ ಬಗ್ಗೆ ಅಷ್ಟೇನು ಒಳ್ಳೆಯ ಅಭಿಪ್ರಾಯವೇನಿಲ್ಲ. ಟ್ರಂಪ್ ಮುಸಲ್ಮಾನರ ವಿರೋಧಿ ಎನ್ನುವ ಆರೋಪವಿದೆ. ಹಾಗಿದ್ದರೂ ಟ್ರಂಪ್ ಎಂದು ಕರೆದಾಗ ಸಲೀಂ ಖುಷಿಯಿಂದ ನಗುತ್ತಾರಂತೆ. ಚರ್ಮದ ಕಾಯಿಲೆಯಿಂದ ಬಳಲುತ್ತಿರುವುದು ನಾನು ವೈರಲ್ ಆಗುವಂತೆ ಮಾಡಿದೆ. ಆದರೆ ಅತ್ಯಂತ ಸೂಕ್ಷ್ಮವಾಗಿರುವ ಚರ್ಮವನ್ನಿಟ್ಟುಕೊಂಡು ಹೊರಗಡೆ ಹೋಗುವುದು ಕೂಡ ಕಷ್ಟವಾಗಿದೆ ಎಂದು ಸಲೀಂ ಹೇಳಿದ್ದಾರೆ. (ಏಜೆನ್ಸೀಸ್)