ನ್ಯೂಸ್

86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ‘ಡಾನ್’ ಸಿನಿಮಾ ನಿರ್ದೇಶಕ ಚಂದ್ರ ಬರೋಟ್ | chandra-barot

chandra-barot; ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಚಂದ್ರ ಬರೋಟ್ ಅವರು ತಮ್ಮ 86ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.

ಅವರು ಕಳೆದ ಏಳು ವರ್ಷಗಳಿಂದ ಪಲ್ಮನರಿ ಫೈಬ್ರೋಸಿಸ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಡಾ. ಮನೀಶ್ ಶೆಟ್ಟಿ ಅವರ ಆರೈಕೆಯಲ್ಲಿ ಗುರುನಾನಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಈ ಹಿಂದೆ ಜಸ್ಲೋಕ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿದೆ.

ಅಮಿತಾಭ್‌‌ ಬಚ್ಚನ್ ನಟನೆಯ 1978 ರ ಐಕಾನಿಕ್ ಸಿನಿಮಾ ಡಾನ್​ಅನ್ನು ಇವರು ನಿದೇಶಿಸಿದ್ದರು. ಹಿಂದಿಯಲ್ಲಿ ‘ಡಾನ್’ ಸಿನಿಮಾ ನಿರ್ದೇಶನ ಮಾಡುವ ಮೂಲಕ ಚಂದ್ರ ಬರೋಟ್ ಅವರು ಅಪಾರ ಖ್ಯಾತಿ ಗಳಿಸಿದ್ದರು. ಆದರೆ ಇದೀಗ ಮುಂಬೈನ ಬಾಂದ್ರಾದ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಚಂದ್ರ ಬರೋಟ್ ಅವರ ನಿಧನಕ್ಕೆ ಭಾರತೀಯ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

(ಏಜೆನ್ಸೀಸ್)

ಚಂದ್ರ ಬರೋಟ್ ನಿರ್ದೇಶನ ಮಾಡಿದ್ದ ‘ಡಾನ್’ ಸಿನಿಮಾ 1978ರಲ್ಲಿ ತೆರೆ ಕಂಡಿತ್ತು. ಅಮಿತಾಭ್ ಬಚ್ಚನ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಪೀಳಿಗೆಯ ಅನೇಕ ನಟರು ಹಾಗೂ ನಿರ್ದೇಶಕರ ಮೇಲೆ ಆ ಸಿನಿಮಾ ಪರಿಣಾಮ ಬೀರಿತು. ಅದು ಚಂದ್ರ ಬರೋಟ್ ನಿರ್ದೇಶನ ಮಾಡಿದ್ದ ಮೊದಲ ಸಿನಿಮಾ ಆಗಿತ್ತು. ಈ ಸಿನಿಮಾದ ಮೂಲಕ ಅವರು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು.