ನ್ಯೂಸ್

ಕಾಡಾನೆಯನ್ನೇ ಹಿಮ್ಮೆಟ್ಟಿಸಿದ ಶ್ವಾನ! ಕನಕಪುರದಲ್ಲಿ ಘಟನೆ, ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

arunakunigal

ಕನಕಪುರ: ಕಾಡಿನಿಂದ ಗ್ರಾಮಕ್ಕೆ ಬರುತ್ತಿದ್ದ ಕಾಡಾನೆಯೊಂದನ್ನು ನಾಯಿಯೊಂದು ಹಿಮ್ಮೆಟ್ಟಿಸಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ಊಡಿಗೆ ಕಾಡಾನೆ ನುಗ್ಗಿಗೆ ಅಂದಾಕ್ಷಣದ ಜನರೇ ಬೆಚ್ಚಿಬೀಳ್ತಾರೆ. ಅಂತಹದ್ದರಲ್ಲಿ ಶ್ವಾನವೊಂದು ಬೊಗಳುತ್ತ ಆನೆಯ ಹಿಂದೆ ಮುಂದೆ ಸುತ್ತಿ ಸೆಣಸಾಟ ನಡೆಸಿ, ಆನೆಯನ್ನು ಕಾಡಿಗೆ ಓಡಿಸಿದೆ...

ಇಂತಹ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕು ಸಾತನೂರು ಹೋಬಳಿಯಲ್ಲಿ ಸಂಭವಿಸಿದೆ. ಇಲ್ಲಿನ ಕಾಡಹಳ್ಳಿ ಪಂಚಾಯಿತಿ ಸಮೀಪದ ಕೋಣಾಲಗುಂದಿ ಕಾಡಿನಿಂದ ಗ್ರಾಮದೆಡೆಗೆ ಬರುತ್ತಿದ್ದ ಆನೆಯನ್ನು ನೋಡಿದ ನಾಯಿ ಬೊಗಳಲು ಶುರು ಮಾಡಿದೆ. ಹತ್ತಿರ ಬಂದ ಆನೆಯೊಂದಿಗೆ ಬೊಗಳುತ್ತ ನಾಯಿಯೂ ಆನೆಯನ್ನು ಎದುರಿಸಿದೆ. ಕೊನೆಗೆ ಆನೆ ಕಾಡಿನತ್ತ ವಾಪಸ್​ ತೆರಳಿದೆ.

ಈ ದೃಶ್ಯವನ್ನು ದೂರದಲ್ಲಿ ನಿಂತು ನೋಡುತ್ತಿದ್ದ ದನಗಾಹಿಯೊಬ್ಬ ಮೊಬೈಲ್​ನಲ್ಲಿ ಚಿತ್ರೀಕರಿಸಿ ಭೂಹಳ್ಳಿ ಉಮೇಶ್​ ಎಂಬುವರಿಗೆ ಕಳಿಸಿದ್ದಾನೆ. ಅವರು ಈ ತುಣುಕನ್ನು ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದರು. ಬಳಿಕ ಸಖತ್​ ವೈರಲ್​ ಆಗಿದೆ.