ನ್ಯೂಸ್

ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಇಂದೇ ರಾಜೀನಾಮೆ?

Webdesk - Ravikanth

ಇಸ್ಲಾಮಾಬಾದ್: ಅವಿಶ್ವಾಸ ಮಂಡನೆ ಬಳಿಕ ಅಯೋಮಯ ಆಗಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್​ ರಾಜಕೀಯ ಜೀವನದಲ್ಲಿ ಇಂದು ಮತ್ತೊಂದು ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆಗಳಿವೆ. ಅಂದರೆ, ಇಮ್ರಾನ್​ ಖಾನ್ ಬಹುತೇಕ ಇಂದೇ ರಾಜೀನಾಮೆ ನೀಡುವ ಲಕ್ಷಣಗಳು ಗೋಚರಿಸಿವೆ.

ಪಾಕಿಸ್ತಾನವನ್ನು ಉದ್ದೇಶಿಸಿ ಇಮ್ರಾನ್​ ಖಾನ್ ಮಾತನಾಡಲಿದ್ದಾರೆ ಎಂದು ಪಾಕಿಸ್ತಾನದ ಗೃಹಸಚಿವ ಶೇಖ್ ರಶೀದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆನ್ನಿಗೇ ಈ ಲಕ್ಷಣಗಳು ಕಾಣಿಸಲಾರಂಭಿಸಿವೆ. ದೇಶವನ್ನು ಕುರಿತು ಮಾತನಾಡಿದ ತಕ್ಷಣ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಮುತ್ತಾಹಿದ್ ಖ್ವಾಮಿ ಮೂಮೆಂಟ್​​ ಪಕ್ಷದ ಸೈಯದ್ ಅಮಿನುಲ್ ಹಕ್ ಮತ್ತು ಫರೋಗ್ ನಸೀಮ್ ಇಂದು ರಾಜೀನಾಮೆ ನೀಡಲಿದ್ದು, ಆ ಬಳಿಕ ಇಮ್ರಾನ್​ ಖಾನ್​ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಸಂದರ್ಭದಲ್ಲೇ ತಮ್ಮ ರಾಜೀನಾಮೆ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.