ನ್ಯೂಸ್

8 ಸಾವಿರ ರೂ. ಬೇಕಾ or ಡೇಟಿಂಗ್ ಮಾಡ್ತೀಯಾ​​? ಯುವಕನ ಆಯ್ಕೆ ಕೇಳಿ ವಿದೇಶಿ ಯುವತಿ ಶಾಕ್​! Foreign Woman

Foreign Woman : ಸಾಮಾನ್ಯವಾಗಿ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​​ಗಳು ಜನರ ಮುಂದೆ ಬಂದು, ಪ್ರಶ್ನೆ ಕೇಳುವುದು ಅಥವಾ ಯಾವುದಾರೂ ಒಂದು ಟಾಸ್ಕ್​ ನೀಡಿ, ಅದನ್ನು ಕಂಪ್ಲೀಟ್​ ಮಾಡಿದರೆ ಹಣ ಸೇರಿ ಇನ್ನಿತರ ಆಫರ್​ ನೀಡುವುದನ್ನು ನೀವು ಜಾಲತಾಣದಲ್ಲಿ ಗಮನಿಸಿರುತ್ತೀರಿ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಇಂತಹ ಅನೇಕ ವಿಚಿತ್ರ ಟ್ರೆಂಡ್​ಗಳು ಜಾಲತಾಣದಲ್ಲಿ ಆಗಾಗ ಚರ್ಚಿಸಲಾಗುತ್ತದೆ.

ಇದೀಗ ವಿದೇಶಿ ಯುವತಿ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​​ ರೂಬಿ ಹೆಕ್ಸ್ ಎಂಬಾಕೆ ಯುವಕನೊಬ್ಬನಿಗೆ ನೀಡಿದ ಒಂದು ಆಫರ್ ನೆಟ್ಟಿಗರ ಹುಬ್ಬೇರಿಸಿದೆ. ರೂಬಿ, ಸೈಕಲ್ ಮೇಲೆ ಕುಳಿತಿರುವ ಹರ್ಯಾನ್ವಿ ಎಂಬ ಯುವಕನ ಬಳಿ ಹೋಗುತ್ತಾಳೆ. ನಿಮಗೆ 8,500 ರೂ. ಬೇಕಾ ಅಥವಾ ನನ್ನ ಜೊತೆ ಡೇಟಿಂಗ್‌ಗೆ ಬರಲು ಬಯಸುತ್ತೀರಾ? ಎಂದು ಕೇಳುತ್ತಾಳೆ.

ಇದೇ ಪ್ರಶ್ನೆಯನ್ನು ಮೊದಲು ಸಾಕಷ್ಟು ಮಂದಿಗೆ ಕೇಳಲಾಗಿರುತ್ತದೆ. ಇದಕ್ಕೆ ಹೆಚ್ಚಿನ ಜನರು ಹಣವನ್ನು ಆಯ್ಕೆ ಮಾಡಿಕೊಂಡರು. ಆದರೆ, ಯುವಕ ಹರ್ಯಾನ್ವಿಯ ಉತ್ತರ ಮಾತ್ರ ಅನಿರೀಕ್ಷಿತವಾಗಿತ್ತು. ಯುವತಿಯ ಪ್ರಸ್ತಾಪವನ್ನು ಕೇಳಿದ ತಕ್ಷಣ , ಹರ್ಯಾನ್ವಿ, ತನ್ನ ಸಹೋದರನಿಗೆ ಕರೆ ಮಾಡಿ ಸಲಹೆ ಕೇಳಿದನು. ಒಬ್ಬ ಹುಡುಗಿ $100 (ರೂ. 8,500) ಬೇಕಾ ಅಥವಾ ತನ್ನೊಂದಿಗೆ ಡೇಟ್ ಮಾಡುತ್ತೀಯಾ ಎಂದು ಕೇಳುತ್ತಿದ್ದಾಳೆ. ಏನ್ನನ್ನು ಆಯ್ದುಕೊಳ್ಳಲಿ ಎಂದು ಪ್ರಶ್ನಿಸಿದನು.

ತನ್ನ ಸಹೋದರನೊಂದಿಗಿನ ಸಂಭಾಷಣೆಯ ನಂತರ, ಹುಡುಗ ಎರಡೂ ಆಯ್ಕೆಗಳನ್ನು ತಿರಸ್ಕರಿಸುವ ಮೂಲಕ ವಿದೇಶಿ ಯುವತಿಗೆ ಶಾಕ್​ ನೀಡಿದನು. ಇದನ್ನು ಕೇಳಿದ ವಿದೇಶಿ ಯುವತಿ, ಇದುವರೆಗೆ ಯಾರೂ ತನಗೆ ಈ ರೀತಿ ಹೇಳಿಲ್ಲ ಎಂದಳು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅರ್ಧ ಕೋಟಿಗೂ ಹೆಚ್ಚು ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕ ಜನರು ಯುವಕನನ್ನು ಹೊಗಳಿ ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)