ನ್ಯೂಸ್

ಪುರುಷರಿಗಿಂತ ಮಹಿಳೆಯರು ಏಕೆ ಬೇಗ ಅಳುತ್ತಾರೆ ಗೊತ್ತೇ?: ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿಯಿರಿ.. | Women Cry

Women Cry: ಮನೆಯಲ್ಲಿ ಯಾರಾದರೂ ದುಖಿತರಾಗಿದ್ದಾರೆ ಅಥವಾ ಗೊಳೋ ಅಂತ ಅತ್ತರೆ, ಸಾಮಾನ್ಯವಾಗಿ ಮನೆಯ ಹಿರಿಕರು ಹೆಣ್ಣು ಮಗುವಂತೆ ಅಳುದ್ದಿಯಾ ಎಂದು ಗದರಿಸುತ್ತಾರೆ. ಅಲ್ಲದೆ, ಪುರುಷರಿಗಿಂತ ಮಹಿಳೆಯರು ಬೇಗೆನೆ ಅಳುತ್ತಾರೆ ಎಂದು ನಂಬಲಾಗಿದೆ. ಇದರ ಹಿಂದಿನ ಕಾರಣವನ್ನು ಕೆಣಕಿದಾಗ ವೈಜ್ಞಾನಿಕವಾಗಿ ಬೇರೆ ಉತ್ತರವೊಂದು ಸಿಗುತ್ತದೆ.

ಹೌದು, ಪುರುಷರು ಅಳುವುದಿಲ್ಲ ಅಂತ ಅಲ್ಲ, ಆದರೆ, ಮಹಿಳೆಯರು ಪುರುಷರಿಗಿಂತ ಸಲ್ಪ ಬೇಗ ದುಖಿರಾಗುತ್ತಾರೆ. ಅಲ್ಲದೆ, ಪುರುಷರು ಅತ್ತರೆ ಅದು ಎಲ್ಲರಿಗೂ ಒಂಥಾರ ವಿಚಿತ್ರವೆನಿಸುತ್ತದೆ. ಇಲ್ಲಿ ಪ್ರಶ್ನೆ ಏನೆಂದರೆ ಮಹಿಳೆಯರು ಬೇಗ ಮತ್ತು ಭಾವನಾತ್ಮಕ ಆಗೋದು ಹೇಗೆ? ಇದರ ಹಿಂದಿನ ವೈಜ್ಞಾನಿಕವಾಗಿ ತಜ್ಞರು ಏನು ಹೇಳುತ್ತಾರೆ ತಿಳಿಯೋಣ ಬನ್ನಿ..

ಮಹಿಳೆಯರು ವರ್ಷಕ್ಕೆ 30 ರಿಂದ 65 ಬಾರಿ ಅಳುತ್ತಾರೆ

ಪುರುಷರು ಮತ್ತು ಮಹಿಳೆಯರ ಆಳುವಿನ ಕಾರಣವನ್ನು ತಿಳಿಯಲು 2011ರಲ್ಲಿ ಒಂದು ಸಂಶೋಧನೆಯನ್ನು ಮಾಡಲಾಯಿತು. ಈ ವರದಿಯಿಂದ ಅನೇಕ ವಿಚಿತ್ರ ವಿಷಯಗಳಿಂದ ಹೊರ ಬಂದಿದ್ದು, ಅಶ್ಚರ್ಯಪಡುವುದು ಗ್ಯಾರಂಟಿ. ಹೌದು, ಈ ವರದಿಯ ಪ್ರಕಾರ, ಮಹಿಳೆಯರು ಒಂದು ವರ್ಷಕ್ಕೆ 30 ರಿಂದ 65 ಬಾರಿ ಅಳುತ್ತಾರೆ. ಆದರೆ, ಪುರುಷರು ಏಳು ಬಾರಿ ಅಥವಾ ಅದಕ್ಕಿಂತ ಕಡಿಮೆ ಬಾರಿ ಆಳುತ್ತಾರೆ. ಅಲ್ಲದೆ, ಪುರುಷರು ಒಬ್ಬಂಟಿಯಾಗಿ ಅಳಲು ಬಯಸುತ್ತಾರೆ. ಮಹಿಳೆಯರು ಸಾರ್ವಜನಿಕವಾಗಿ ಆಳಲು ಬಯಸುತ್ತಾರೆ ಎಂದು ವರದಿ ಹೇಳಿದೆ.

ಮಹಿಳೆಯರು ಬೇಗ ಅಳಲು ಕಾರಣ

ದೇಹದಲ್ಲಿ ಕಂಡುಬರುವ ಹಾರ್ಮೋನ್​ಗಳ ವ್ಯತ್ಯಾಸದಿಂದ ಅಳುವಿನ ಅಧಿಕ ಮತ್ತು ಕಡಿಮೆ ವ್ಯತ್ಯಾಸ ಇರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಪುರುಷರೊಳಗಿನ ಹಾರ್ಮೋನ್​​ ಮಹಿಳೆಯರ ಹಾರ್ಮೋನ್​ಗಿಂತ ಅಧಿಕ ಶಕ್ತಿ ಪ್ರಭಾವಶಾಲಿಯಾಗಿದೆ. ಅದುವೇ ಟೆಸ್ಟೋಸ್ಟೆರನ್​ ಹೆಸರಿನ ಹಾರ್ಮೋನ್​. ಈ ಟೆಸ್ಟೋಸ್ಟೆರನ್​ ಪುರುಷನಲ್ಲಿ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಇದರ ಉತ್ಪಾದನೆಯು ಪುರುಷನ ಲೈಂಗಿಕ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಇದು ಪುರುಷರು ಅಳುವುದನ್ನು ಮತ್ತು ಭಾವನಾತ್ಮಕವಾಗಿರುವುದನ್ನು ತಡೆಯುವ ಹಾರ್ಮೋನ್ ಆಗಿದೆ. ಇದು ಭಾವನಾತ್ಮಕ ಬುದ್ಧಿವಂತಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣೀರು ಹರಿಯುವುದನ್ನು ತಡೆಯುತ್ತದೆ ಎಂದು ಸಂಶೋಧನೆ ಹೇಳುತ್ತದೆ.

ಇದಲ್ಲದೆ, ಹಾಲೆಂಡ್‌ನ ಪ್ರಾಧ್ಯಾಪಕರೊಬ್ಬರು ನಡೆಸಿದ ಸಂಶೋಧನೆಯೊಂದರಲ್ಲಿ, ಪುರುಷರಲ್ಲಿ ಕಣ್ಣೀರು ಕಡಿಮೆಯಾಗಲು ಪ್ರೊಲ್ಯಾಕ್ಟಿನ್ ಹಾರ್ಮೋನ್ ಕಾರಣ ಎಂದು ಪರಿಗಣಿಸಿದ್ದಾರೆ.(ಏಜೆನ್ಸೀಸ್​)