ನ್ಯೂಸ್

Cricket ಪಂದ್ಯದ ವೇಳೆ ಕೊಹ್ಲಿ ಈ ಚಾಕೊಲೇಟ್​​​ನ್ನು ಯಾಕೆ ತಿನ್ನುತ್ತಾರೆ, ಏನದರ ವಿಶೇಷತೆ ಗೊತ್ತಾ?

Cricket : ವಿರಾಟ್​​ ಕೊಹ್ಲಿ ಕ್ರಿಕೆಟ್ ಆಟಕಷ್ಟೇ ಅಲ್ಲ ಫಿಟ್‌ನೆಸ್​​​ಗೂ ಫೇಮಸ್​​. ಕೊಹ್ಲಿ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಚಾಕೊಲೇಟ್ ತಿನ್ನುವುದನ್ನು ನೀವು ನೋಡಿರಬಹುದು. ಹಾಗಾದ್ರೆ ಅದು ಯಾವ ಚಾಕೊಲೇಟ್? ಅದರ ವಿಶೇಷತೆಯೇನು ಎನ್ನುವ ಬಗ್ಗೆ ತಿಳಿಯೋಣ ಬನ್ನಿ.

ಕೊಹ್ಲಿ ತಿನ್ನುವ ಚಾಕೊಲೇಟ್​​ಗಳು ಲಂಡನ್​​ನಿಂದ ಬರುತ್ತಿದ್ದು, ಜೆಲ್ಲಿ ರೂಪದಲ್ಲಿರುತ್ತದೆ. ಇದರ ಬೆಲೆ ಭಾರತದಲ್ಲಿ 5000 ರೂ. ಈ ಚಾಕೊಲೇಟ್ ಆರು ಪ್ಯಾಕ್‌ಗಳಲ್ಲಿ ಬರುತ್ತದೆ. ಕೊಹ್ಲಿ ಒಮ್ಮೆ ಐಪಿಎಲ್ ಪಂದ್ಯದ ಸಮಯದಲ್ಲಿ ಈ ಚಾಕೊಲೇಟ್ ತಿನ್ನುವುದನ್ನು ನೋಡಲಾಗಿತ್ತು.

ಇದರ ವಿಡಿಯೋ ತುಂಬಾ ವೈರಲ್ ಆದಾಗ ಜನರು ಕುತೂಹಲದಿಂದ ಕೊಹ್ಲಿ ಏನು ತಿನ್ನುತ್ತಿದ್ದಾರೆ ಎಂದು ಪ್ರಶ್ನೆಯನ್ನು ಸಹ ಕೇಳಿದ್ದರು.

ಚಾಕೊಲೇಟ್ ವಿಶೇಷತೆ ಏನು?

1. ಇದರಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೆಫೀನ್ ಇರುತ್ತವೆ.

2. ಇದು ದೇಹಕ್ಕೆ ಶಕ್ತಿಯನ್ನು ನೀಡುವ, ಶಕ್ತಿಯುತ ಚಾಕೊಲೇಟ್.

3. ಇದು ದೀರ್ಘ ಚಟುವಟಿಕೆಯ ನಂತರ ದೇಹದ ಆಯಾಸವನ್ನು ನಿವಾರಿಸುತ್ತದೆ.

ಪಂದ್ಯದ ಸಮಯದಲ್ಲಿ ಕೊಹ್ಲಿ ಸುಸ್ತಾಗುವಾಗಲೆಲ್ಲಾ ಈ ಚಾಕೊಲೇಟ್ ತಿನ್ನುವುದನ್ನು ನೋಡಿದ್ದೀರಿ. ಅವರು ಬೇಗನೆ ಚೇತರಿಸಿಕೊಳ್ಳಲು ಇದನ್ನು ಬಳಸುತ್ತಾರೆ.

ಈ ಚಾಕೊಲೇಟ್ 100 ಗ್ರಾಂ ತೂಗುತ್ತದೆ ಮತ್ತು ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳಲ್ಲಿ ಲಭ್ಯವಿದೆ. ಕೆಲವರು ಇದು ಒಂದು ರೀತಿಯ ಔಷಧ ಎಂದು ಸಹ ಮಾಹಿತಿ ಇದೆ.

ವಿರಾಟ್​​ ಕೊಹ್ಲಿ ತಿನ್ನುವ ಈ ಚಾಕೊಲೇಟ್ ಬಗ್ಗೆ ಎಬಿ ಡಿವಿಲಿಯರ್ಸ್ ಕೂಡ ಇಷ್ಟ ಎಂದು ಹೇಳಿದ್ದರು. (ಏಜೆನ್ಸೀಸ್​)