ನ್ಯೂಸ್

ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಟೀ ಕುಡಿಯುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ! Tea

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಗ್ಲಾಸ್​ ಟೀ ಅಥವಾ ಕಾಫಿ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.

ನಮ್ಮ ಭಾರತದಲ್ಲಂತೂ ಟೀ-ಕಾಫಿಗೆ ಜನರು ಸಾಕಷ್ಟು ಒಗ್ಗಿಕೊಂಡಿದ್ದಾರೆ. ಟೀ-ಕಾಫಿ ಕುಡಿಯುವವರ ಸಂಖ್ಯೆ ಅಧಿಕವಾಗಿರುವ ಕಾರಣ ಎಷ್ಟೋ ಮಂದಿ ಟೀ-ಕಾಫಿ ಮಾರಾಟ ಮಾಡಿ ಬದುಕು ಸಾಗಾಟ ಮಾಡುತ್ತಿದ್ದಾರೆ. ಟೀ ಮಾರಿಯೇ ಕೋಟ್ಯಧಿಪತಿಗಳಾಗಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಚಹಾ ಕುಡಿಯುವವರನ್ನು ಹೊಂದಿರುವ ರಾಜ್ಯ ಯಾವುದು ನಿಮಗೆ ಗೊತ್ತಾ? ಈ ಪ್ರಶ್ನೆ ಎಂದಾದರೂ ನಿಮ್ಮ ತಲೆಗೆ ಬಂದಿದೆಯಾ? ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಅಂದ್ರೆ ನಾವು ಹೇಳ್ತಿವಿ ಮುಂದೆ ಓದಿ.

ಹೆಚ್ಚಿನ ಪ್ರಮಾಣದಲ್ಲಿ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ? ಕೆಟ್ಟದ್ದೋ? ಎಂಬ ಚರ್ಚೆ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಚಹಾ ಕುಡಿಯುವವರು ಇದ್ದಾರೆ ಎಂಬುದನ್ನು ನಿರ್ಧರಿಸಲು ಭಾರತೀಯ ಚಹಾ ಮಂಡಳಿಯು ಒಂದು ಅಧ್ಯಯನವನ್ನು ನಡೆಸಿತು. ಅದರಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಹರಿಯಾಣ ಎರಡನೇ ಸ್ಥಾನದಲ್ಲಿದ್ದರೆ, ಗೋವಾ ಮೂರನೇ ಸ್ಥಾನದಲ್ಲಿದೆ. ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿವೆ.

ಕಾರಣವೇನು?

ಗುಜರಾತಿನಲ್ಲಿ ಅತಿ ಹೆಚ್ಚು ಟೀ ಕುಡಿಯಲು ಕಾರಣ ಏನು ಎಂದು ಹುಡುಕಿದಾಗ ಆ ರಾಜ್ಯದಲ್ಲಿ ಹಾಲು ಸುಲಭವಾಗಿ ಲಭ್ಯವಾಗುತ್ತಿರುವುದು ಎಂಬ ಉತ್ತರ ಸಿಗುತ್ತದೆ. ಇನ್ನು ಹೆಚ್ಚು ಚಹಾ ಕುಡಿಯುವ ಅಭ್ಯಾಸವು ದೇಹಕ್ಕೆ ಹಾನಿಕಾರಕವಾಗಿದ್ದು, ಮಿತವಾಗಿ ಸೇವಿಸುವುದು ಒಳ್ಳೆಯದು.

ಅತಿಯಾಗಿ ಚಹಾ ಸೇವಿಸುವವರಿಗೆ ಕೊಲೆಸ್ಟ್ರಾಲ್ ಜೊತೆಗೆ ಇತರ ಸಮಸ್ಯೆಗಳು ಎದುರಾಗಬಹುದು. ಅಸಿಡಿಟಿ ಸಮಸ್ಯೆಯೂ ಉಂಟಾಗುತ್ತದೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವವರಿಗೆ ಅಸಿಡಿಟಿ ಸಮಸ್ಯೆ ಹೆಚ್ಚು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುತ್ತಾರೆ ತಜ್ಞರು.

ಅತಿಯಾಗಿ ಟೀ ಕುಡಿಯುವುದರಿಂದ ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚು ಟೀ ಕುಡಿಯುವವರಿಗೆ ಮೊಡವೆ ಸಮಸ್ಯೆ ಉಂಟಾಗುತ್ತದೆ. ರಾತ್ರಿಯಲ್ಲಿ ಟೀ ಕುಡಿಯುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಸರ್​ನಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಟೀ ಕುಡಿಯುವವರಲ್ಲಿ ನಿರ್ಜಲೀಕರಣದ ಸಮಸ್ಯೆಯೂ ಕಾಡುತ್ತದೆ. (ಏಜೆನ್ಸೀಸ್​)