ಬಾಂಗ್ಲಾದೇಶ; ಜಗತ್ತಿನ ಎಲ್ಲಾ ನಾಗರಿಕತೆಗಳ ಹುಟ್ಟು-ಬೆಳವಣಿಗೆಗೆ ನದಿಗಳು ಪ್ರಮುಖ ಕಾರಣವಾಗಿವೆ. ನದಿ ಹುಟ್ಟುವುದು ಸಾಮಾನ್ಯವಾಗಿ ಬೆಟ್ಟ ಅಥವಾ ಪರ್ವತಪ್ರದೇಶಗಳ ಸಮೀಪ. ಇದೇ ನದಿಯ ಮೂಲವಾಗಿದೆ. ಇದಕ್ಕೆ ಮಳೆಯ ನೀರು ಅಥವಾ ಹಿಮಗಡ್ಡೆಗಳೇ ಆಶ್ರಯ. ಬೆಟ್ಟದ ಮೇಲೆ ಬಿದ್ದ ಮಳೆಯ ಅಥವಾ ಹಿಮಗಡ್ಡೆ ಕರಗಿ ಉಂಟಾದ ನೀರು ಇಳಿಜಾರಿನ ಕೊರಕಲುಗಳಲ್ಲಿ ಝರಿಗಳಂತೆ ಹರಿದು ಕೆಳಗಿಳಿಯುತ್ತದೆ. ಮುಂದೆ ಹರಿದಂತೆಲ್ಲ ಹಲವಾರು ಝರಿಗಳು ಒಂದರೊಡನೊಂದು ಸೇರಿ ಹಳ್ಳವಾಗಿ, ಸಣ್ಣತೊರೆಯಾಗಿ ಕೊನೆಗೆ ನದಿಯಾಗುತ್ತದೆ.
ಇದನ್ನೂ ಓದಿ: ರಾಹುಲ್ ಗಾಂಧಿಯ ಮತಗಳ್ಳತನ ಆರೋಪ: ಎಸ್ಐಟಿ ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್| Supreme Court
ಇನ್ನೂ ಈ ನದಿಗಳ ನಾಡು ಎಂದು ಬಾಂಗ್ಲಾದೇಶವನ್ನು ಕರೆಯಲಾಗುತ್ತದೆ. ಏಕೆಂದರೆ ಈ ದೇಶದಲ್ಲಿ ನೀವು ಎಲ್ಲಿ ನೋಡಿದರೂ ಜಲಮಾರ್ಗಗಳು, ನದಿ ತೀರದ ಮಾರುಕಟ್ಟೆಗಳು ಮತ್ತು ಫಲವತ್ತಾದ ಭೂಮಿಯನ್ನು ಕಾಣಬಹುದಾಗಿದೆ. ಅಲ್ಲಿ 700 ಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಅದರ ಭೂಮಿ, ಸಂಸ್ಕೃತಿ ಮತ್ತು ಆರ್ಥಿಕತೆ ಎಲ್ಲವೂ ಈ ಇದರೊಂದಿಗೆ ಸಂಪರ್ಕ ಹೊಂದಿವೆ. ಬಾಂಗ್ಲಾದೇಶವು ವಿಶ್ವದ ಅತಿದೊಡ್ಡ ನದಿ ಡೆಲ್ಟಾ ಒಂದರಲ್ಲಿ ನೆಲೆಗೊಂಡಿದ್ದು, ಇದರ ಭೂಪ್ರಕೃತಿ, ಆರ್ಥಿಕತೆ ಮತ್ತು ಸಂಸ್ಕೃತಿ ನದಿಗಳಿಂದಲೇ ರೂಪುಗೊಂಡಿದೆ. ಬಾಂಗ್ಲಾದೇಶ ಹಿಮಾಲಯದ ದಕ್ಷಿಣದಲ್ಲಿದೆ. ಅಲ್ಲಿ ನದಿಗಳು ಟಿಬೆಟ್ ಮತ್ತು ಭಾರತದ ಮೂಲಕ ಹರಿದು, ಬಂಗಾಳಕೊಲ್ಲಿಯಲ್ಲಿ ಸಂಗಮವಾಗುತ್ತವೆ. ಪ್ರತಿವರ್ಷ ಪ್ರವಾಹವನ್ನು ಹೊತ್ತು ತರುವಷ್ಟು ಈ ನದಿಗಳು ಪ್ರಬಲವಾಗಿವೆ.
ಇದನ್ನೂ ಓದಿ: ಒಣಗಿದ, ದುರ್ಬಲ ಕೂದಲುಗಳು ನಿಮ್ಮನ್ನು ಚಿಂತೆಗೆ ದೂಡಿದಿಯೇ? ಹಾಗಿದ್ದರೆ ಈ ಹೇರ್ ಪ್ಯಾಕ್ ಒಮ್ಮೆ ಟ್ರೈ ಮಾಡಿ…Hair mask
(ಏಜೆನ್ಸೀಸ್)
ಯುನೈಟೆಡ್ ಸ್ಟೇಟ್ ವಿಶ್ವದಲ್ಲಿಯೇ ಅತಿಹೆಚ್ಚು ನದಿಗಳನ್ನು ಹೊಂದಿರುವ ದೇಶವಾಗಿದೆ. ಅಮೆರಿಕಾದಲ್ಲಿ ಹರಿಯುವ ನದಿಗಳನ್ನು ಎಣಿಸಲು ಸಾಧ್ಯವಿಲ್ಲ. ಬರೋಬ್ಬರಿ 2 ಲಕ್ಷ 50 ಸಾವಿರ ನದಿಗಳು ಇಲ್ಲಿ ಹರಿಯುತ್ತವೆ ಎಂದು ನಂಬಲಾಗಿದೆ. ಮಿಸೌರಿ ಮತ್ತು ಮಿಸ್ಸಿಸ್ಸಿಪ್ಪಿ ಇಲ್ಲಿನ ಅತಿದೊಡ್ಡ ನದಿಗಳಾಗಿವೆ.
ಇಲ್ಲಿನ ಪದ್ಮಾ ನದಿಯು ಗಂಗಾ ನದಿಯ ಪ್ರಮುಖ ಉಪನದಿಯಾಗಿದ್ದು, ಭಾರತದಿಂದ ಬಾಂಗ್ಲಾದೇಶದ ಮಧ್ಯಭಾಗದ ಮೂಲಕ ಹರಿಯುತ್ತದೆ. ಇದು 356 ಕಿಲೋಮೀಟರ್ ಉದ್ದವಾಗಿದೆ. ಈ ನದಿಯು ಕೃಷಿಗೆ ನೀರನ್ನು ಒದಗಿಸುವುದರೊಂದಿಗೆ, ಜನರು ಮೀನು ಹಿಡಿಯುವ ಮತ್ತು ವ್ಯಾಪಾರ ಮಾಡುವ ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಬಾಂಗ್ಲಾ ದೇಶ ಪದ್ಮಾ, ಜಮುನಾ, ಮೇಘನಾ, ಗಂಗಾ, ಬ್ರಹ್ಮಪುತ್ರ, ಕರ್ಣಫುಲಿ ಎಂಬ ಪ್ರಮುಖ ನದಿಗಳನ್ನು ಹೊಂದಿದೆ. ಜಮುನಾ ನದಿಯು ಬ್ರಹ್ಮಪುತ್ರ ನದಿಯ ಕೆಳಭಾಗವಾಗಿದ್ದು, ಟಿಬೆಟ್‌ನಿಂದ ಬಾಂಗ್ಲಾದೇಶಕ್ಕೆ ಹರಿಯುತ್ತದೆ. ಇದು 11 ಕಿಮೀ ಅಗಲವಾಗಿದ್ದು. ವಿಶ್ವದ ಅತ್ಯಂತ ಅಗಲವಾದ ನದಿಗಳಲ್ಲಿ ಒಂದಾಗಿದೆ. ಈ ನದಿಯು ತುಂಬಾ ಕೆಸರನ್ನು ಹೊತ್ತುಕೊಂಡು ಹೋಗುವುದರಿಂದ ಪ್ರವಾಹದ ಸಮಯದಲ್ಲಿ ಹೊಸ ದ್ವೀಪಗಳೇ ರಚನೆಗೊಳ್ಳುತ್ತವೆಯಂತೆ.