ಒಣಗಿದ, ದುರ್ಬಲ ಕೂದಲುಗಳು ನಿಮ್ಮನ್ನು ಚಿಂತೆಗೆ ದೂಡಿದಿಯೇ? ಹಾಗಿದ್ದರೆ ಈ ಹೇರ್​ ಪ್ಯಾಕ್​ ಒಮ್ಮೆ ಟ್ರೈ ಮಾಡಿ...Hair mask

White hair
Published on

Hair mask: ಪ್ರತಿಯೊಬ್ಬ ಮಹಿಳೆಯೂ ತನ್ನ ಕೂದಲು ಮೃದುವಾಗಿ, ಹೊಳಪಾಗಿ ಮತ್ತು ದಪ್ಪವಾಗಿರುವಂತೆ ಬಯಸುತ್ತಾಳೆ. ಅದಕ್ಕಾಗಿ ಹಲವಾರು ರೀತಿಯ ಜೆಲ್​ಗಳು, ಶಾಂಪುಗಳನ್ನು ಬಳಸುತ್ತಾರೆ. ಆದರೂ ಕೂಡ ಕೂದಲುಗಳು ಉದುರುತ್ತಿರುತ್ತವೆ. ಇನ್ನು ಚಳಿಗಾಲದ ಸಮಯದಲ್ಲಂತೂ ಕೂದಲುಗಳು ಹೇರಳವಾಗಿ ದುರ್ಬಲ ಹೊಂದುತ್ತಾವೆ. ಅಂತಹ ಸಂದರ್ಭದಲ್ಲಿ ನೈಸರ್ಗಿಕ ಪರಿಹಾರಗಳು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ಈ ರೀತಿಯಂತಹ ತೊಂದರೆಗೆ ಒಳಗಾದ ನಟಿ ಮಾಧುರಿ ಕೂದಲಿನ ಆರೈಕೆಗಾಗಿ ಈ ರೀತಿಯ ಹೇರ್​ ಮಾಸ್ಕ್​ನ್ನು ಬಳಸುತ್ತಾರಂತೆ...

ಬಾಳೆಹಣ್ಣಿನ ಹೇರ್​ ಮಾಸ್ಕ್​

ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್​ ಕೂದಲನ್ನು ಆಳವಾಗಿ ಪೋಷಿಸಲು ಸಹಾಯ ಮಾಡುತ್ತದೆ. ಇದು ಒಣಗಿದ ಸುಕ್ಕುಗಟ್ಟಿದ ಕೂದಲನ್ನು ಮೃದುಗೊಳಿಸಿ, ಹೊಳಪನ್ನು ನೀಡುತ್ತದೆ. ಮಾಧುರಿಯ ಮಾಸ್ಕ್​ನಲ್ಲಿರುವ ಮುಖ್ಯ ಅಂಶವೆಂದರೆ ಬಾಳೆಹಣ್ಣು ಕೂದಲಿನ ಎಳೆಯನ್ನು ಕಾಪಾಡುತ್ತದೆ. ಹಾಗೆಯೇ ನೈಸರ್ಗಿಕ ಸ್ಥಿತಿಸ್ಥಾಪಕತ್ವ ಸಂರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ. ಬಾಳೆಹಣ್ಣಿನಲ್ಲಿ ತಯಾರಿಸಿದ ಹೇರ್​ ಮಾಸ್ಕ್​ನ್ನು ಬಳಸುವುದರಿಂದ ಇದು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ, ಕೂದಲು ಉದುರುವುನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಮೊಸರು

ಮೊಸರನ್ನು ಕೂದಲನ್ನು ಪೋಷಿಸುವ ನೈಸರ್ಗಿಕ ಕಂಡೀಷನರ್​ ಎಂದು ಕರೆಯುತ್ತಾರೆ. ಇದರಲ್ಲಿರುವ ಲ್ಯಾಕ್ಟಿನ್​ ಅಂಶವು ನೆತ್ತಿಯನ್ನು ಪೋಷಣೆ ಮಾಡುತ್ತದೆ ಹಾಗೆಯೇ ಇದು ಸತ್ತ ಜೀವಕೋಶಗಳನ್ನು ಹೊರಗೆ ಹಾಕಿ ಕೂದಲನ್ನು ಬೆಳೆಯುವಂತೆ ಮಾಡುತ್ತದೆ. ಮೊಸರನ್ನು ತಲೆಗೆ ಹಚ್ಚುವುದರಿಂದ ಇದು ಕೂದಲಿನ ಬೇರುಗಳನ್ನು ಪೋಷಿಸಿ ಸದೃಢವಾಗಿ ಬೆಳೆಯುವಂತೆ ಮಾಡುತ್ತದೆ. ಹಾಗೆಯೇ ಇದು ತಲೆಯ ಹೊಟ್ಟನ್ನು ನಿವಾರಿಸುತ್ತದೆ.

ಜೇನುತುಪ್ಪ

ಜೇನುತುಪ್ಪದಲ್ಲಿರುವ ಉತ್ಕರ್ಷಣ ನಿರೋಧಕಕಗಳು ಕೂದಲನ್ನು ನೈಸರ್ಗಿಕವಾಗಿ ಕೂದಲನ್ನು ರಕ್ಷಿಸುವಂತೆ ಮಾಡುತ್ತದೆ. ಇದು ನೆತ್ತಿಯಲ್ಲಿರುವ ಬ್ಯಾಕ್ಟೀರಿಯಾವನ್ನು ತೆಗೆದು ಹಾಕಿ ಸೋಂಕನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪ ನೈಸರ್ಗಿಕ ಹೊಳಪನ್ನು ನೀಡುವುದರ ಜೊತೆಗೆ ಕೂದಲಿನ ಒರಟುತನವನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಕಾಲದ ವರೆಗೂ ಕೂದಲನ್ನು ಪೋಷಿಸುತ್ತದೆ ಎಂದು ಮಾಧುರಿ ಹಂಚಿಕೊಂಡಿದ್ದಾರೆ.

ಹೇರ್​ಪ್ಯಾಕ್​ ತಯಾರಿಸುವುದು ಹೇಗೆ?

ಒಂದು ಬೌಲ್​ಗೆ ಮಾಗಿದ ಬಾಳೆಹಣ್ಣನ್ನು ಹಾಕಿ ಮ್ಯಾಶ್​ ಮಾಡಿ. ಎರಡು ಚಮಚ ಮೊಸರು ಮತ್ತು 1 ಚಮಚ ಜೇನುತುಪ್ಪ ಹಾಕಿ ಮಿಶ್ರಣ ತಯಾರಿಸಿ. ಇದನ್ನು ನಿಮ್ಮ ತಲೆಯ ನೆತ್ತಿಯಿಂದ ಕೂದಲಿನವರೆಗೆ ಹಚ್ಚಿ ಸುಮಾರು 1 ಗಂಟೆ ಬಿಟ್ಟು ಸ್ವಲ್ಪ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಹೇರ್​ ಪ್ಯಾಕ್​ನ್ನು ವಾರಕ್ಕೆ ಒಮ್ಮೆ ಹಚ್ಚುವುದರಿಂದ ಇದು ಕೂದಲಿನ ಆರೈಕೆ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net