General Knowledge : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ.
ಅಂದಹಾಗೆ ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ.
ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಹಾವುಗಳು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ. ಎಷ್ಟು ವಿಷಕಾರಿ ಅಂದರೆ, ಕಚ್ಚಿದ ಕೂಡಲೇ ಪ್ರಾಣ ಹೋಗಿಬಿಡುತ್ತದೆ. ಹೀಗಾಗಿಯೇ ಹಾವುಗಳೆಂದರೆ ಮನುಷ್ಯ ಹೆದರುತ್ತಾನೆ. ಆದರೆ, ಹಾವಿನ ವಿಷಕ್ಕೂ ಸೆಡ್ಡು ಹೊಡೆಯುವ ಕೆಲವು ಜೀವಿಗಳಿವೆ. ಎಂಥದ್ದೇ ವಿಷಕಾರಿ ಹಾವು ಕಚ್ಚಲಿ ಆ ಜೀವಿಗಳಿಗೆ ಮಾತ್ರ ಏನು ಆಗುವುದಿಲ್ಲ. ಆ ಜೀವಿಗಳು ಯಾವುವು ಎಂದು ನಾವೀಗ ತಿಳಿಯೋಣ.
ಹನಿ ಬ್ಯಾಡ್ಜರ್ : ಹನಿ ಬ್ಯಾಡ್ಜರ್‌ಗಳು ಉಗ್ರ ಮತ್ತು ಆಕ್ರಮಣಕಾರಿ ಪರಭಕ್ಷಕಗಳಾಗಿದ್ದು, ವಿವಿಧ ರೀತಿಯ ಕೀಟಗಳು, ಉಭಯಚರಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳನ್ನು ಬೇಟೆಯಾಡುತ್ತವೆ. ಇವು ಹಾವುಗಳು ಮತ್ತು ಚೇಳುಗಳನ್ನು ಸಹ ಬೇಟೆಯಾಡಿ ತಿನ್ನುತ್ತವೆ. ಅವುಗಳ ವಿಷವು ಹನಿ ಬ್ಯಾಡ್ಜರ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಸ್ಕಂಕ್: ಸ್ಕಂಕ್‌ಗಳು ಹನಿ ಬ್ಯಾಡ್ಜರ್‌ಗಳಿಗೆ ಸಂಬಂಧಿಸಿವೆ. ನೋಡಲು ಒಂದೇ ರೀತಿ ಇವೆ. ನಾಯಿ ಅಥವಾ ಬೆಕ್ಕನ್ನು ಕೊಲ್ಲುವ ವಿಷಕ್ಕಿಂತ 100 ಪಟ್ಟು ಹೆಚ್ಚು ವಿಷವನ್ನು ಸ್ಕಂಕ್ ತಡೆದುಕೊಳ್ಳಬಲ್ಲದು. ಆದರೆ, ಈ ಪ್ರಾಣಿ ವಿಷಕಾರಿಯಲ್ಲ.
ಇದನ್ನೂ ಓದಿ: ಅರ್ಧಶತಕದ ಬಳಿಕ ತೋರಿದ ಸನ್ನೆಯ ಅರ್ಥವೇನು? ಅಭಿಷೇಕ್ ಕೊಟ್ಟ ಅಚ್ಚರಿ ಉತ್ತರ ಹೀಗಿದೆ… Abhishek Sharma
ಮೀರ್‌ಕ್ಯಾಟ್ : ಮೀರ್‌ಕ್ಯಾಟ್ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ. ಅವು ಪಕ್ಷಿಗಳು, ಸಣ್ಣ ಸಸ್ತನಿಗಳು ಮತ್ತು ಹಾವುಗಳು ಸೇರಿದಂತೆ ಯಾವುದನ್ನಾದರೂ ಬೇಟೆಯಾಡಿ ತಿನ್ನುತ್ತವೆ. ತಮಗಿಂತಲೂ ದೊಡ್ಡದಾದ, ವಿಷಕಾರಿ ಪ್ರಾಣಿಗಳನ್ನು ಸಹ ಬೇಟೆಯಾಡಬಲ್ಲವು. ಯಾವುದೇ ವಿಷವನ್ನು ವಿರೋಧಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ಸಸ್ತನಿಗಳಲ್ಲಿ ಮೀರ್‌ಕ್ಯಾಟ್ ಕೂಡ ಒಂದು. ಮೀರ್ಕ್ಯಾಟ್ನ ರಕ್ತದಲ್ಲಿರುವ ಸೀರಮ್ ವಿಷವನ್ನು ತಟಸ್ಥಗೊಳಿಸುತ್ತದೆ ಅಂದ್ರೆ ವಿಷವು ಅವುಗಳನ್ನು ಕೊಲ್ಲುವುದನ್ನು ತಡೆಯುತ್ತದೆ.
ಮರದ ಇಲಿ : ಹಾವುಗಳು ಮರದ ಇಲಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಆದರೆ, ಅವುಗಳನ್ನು ಹಾವಿನ ವಿಷದಿಂದ ಕೊಲ್ಲಲು ಸಾಧ್ಯವಿಲ್ಲ. ಮರದ ಇಲಿಗಳು ಹಾವಿನ ವಿಷಕ್ಕೆ ನಿರೋಧಕವಾಗಿರುತ್ತವೆ ಎಂದು ಅಧ್ಯಯನಗಳು ತೋರಿಸಿವೆ.
ಮುಳ್ಳುಹಂದಿ : ಮುಳ್ಳುಹಂದಿಗಳು ವಿಷಕಾರಿ ಪ್ರಾಣಿಗಳು ಮತ್ತು ವಿಷಕಾರಿ ಸಸ್ಯಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಈ ಪ್ರಾಣಿಗಳು ವಿಷಕಾರಿ ಸಸ್ಯಗಳನ್ನೇ ತಿನ್ನುತ್ತವೆ ಮತ್ತು ತಮ್ಮ ಮುಳ್ಳುಗಳನ್ನು ವಿಷಕಾರಿಯಾಗಿ ಇಡುತ್ತವೆ. ಹಂದಿಯ ಮುಳ್ಳುಗಳಲ್ಲಿರುವ ವಿಷವು ತನ್ನನ್ನು ಬೇಟೆಯಾಡುವ ಪ್ರಾಣಿಗಳಿಗೆ ಬೆದರಿಕೆಯಾಗಿದೆ.
ಹಂದಿ : ಅತ್ಯಂತ ಸೋಮಾರಿ ಪ್ರಾಣಿ ಅಂದರೆ ಅದು ಹಂದಿ. ಕಾಡುಹಂದಿಗಳು ಸಾಮಾನ್ಯವಾಗಿ ವಿಷಕಾರಿ ಹಾವುಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದ್ದರಿಂದಲೇ ವಿಷಕಾರಿ ಹಾವುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವಿಷಕ್ಕೆ ಸಂಪೂರ್ಣ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. (ಏಜೆನ್ಸೀಸ್)