ನ್ಯೂಸ್

ವಿಶ್ವದ ಅತಿದೊಡ್ಡ ಆಲದ ಮರ ಭಾರತದ ಯಾವ ಪ್ರದೇಶದಲ್ಲಿದೆ ಗೊತ್ತಾ?: ಇದರ ವಿಶೇಷತೆ ಇಲ್ಲಿದೆ.. | Banyan Tree

Banyan Tree ವಿಶ್ವದ ಅತಿ ಪೂರಾತನಗಳ ಹೆಗ್ಗಳಿಕೆಗೆ ಭಾರತ ದೇಶ ಪ್ರಸಿದ್ಧಿ ಪಡೆದಿದೆ. ಅದರಂತೆ ನಮ್ಮ ದೇಶ ತನ್ನ ಕಾಲಗರ್ಭದಲ್ಲಿ ಅದೆಷ್ಟೋ ಇತಿಹಾಸವನ್ನು ಹುದುಗಿಸಿಕೊಂಡಿದ್ದು, ಮನುಷ್ಯನಿಗೆ ಮತ್ತು ಅಧುನಿಕ ತಂತ್ರಜ್ಞಾನಗಳಿಗೆ ನಿಲುಕದ ಹಲವು ವಿಸ್ಮಯಗಳು ನಡೆಯುತ್ತಲೇ ಇವೆ. ಅದರಂತೆ ಇತಿಹಾಸ ಪುರಾತನ ಕಾಲದ ಆಲದ ಮರವೊಂದು ನಮ್ಮಲ್ಲಿದ್ದು, ನೋಡುಗರನ್ನು ಆಶ್ಚರ್ಯಚಕಿತಗೊಳಿಸುತ್ತಿದೆ.

ಹೌದು, ಆಂಧ್ರಪ್ರದೇಶದ ಕದಿರಿ ಎಂಬ ಕುಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಅಲದ ಮರ ಇದ್ದು, ಇದು 5 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. ತಿಮ್ಮಮ್ಮನ ಮರಿಮನು ಎಂದು ಕರೆಯಲ್ಪಡುವ ಈ ಆಲದ ಮರ ವಿಶ್ವದ ಅತಿ ಪುರಾತನ ಮತ್ತು ಅತಿದೊಡ್ಡ ಆಲದ ಮರ ಎಂಬ ಖ್ಯಾತಿ ಪಡೆದಿದೆ. ಈ ಮರದ ಶಾಖೆಗಳು(ರಂಬೆ, ಕೊಂಬೆ) 5 ಎಕರೆಯಲ್ಲಿ ಹರಡಿಕೊಂಡಿದ್ದು, ಪ್ರಕೃತಿ ಪ್ರೇಮಿಗಳಿಗೆ ಮತ್ತು ವಿಜ್ಞಾನಿಗಳಿಗೆ ವಿಸ್ಮಯಗೊಳಿಸುತ್ತದೆ.

ಮರದ ವಿಶೇಷತೆ ಏನು?

5 ಎಕರೆಯಲ್ಲಿ ಹರಡಿಕೊಂಡಿರುವ ಈ ಮರ 19,107 ಚದರ ಮೀಟರ್​ನಷ್ಟು ಮೇಲಾವರಣವನ್ನು ಹೊಂದಿದೆ. ವಿಸ್ತೀರ್ಣ ದೃಷ್ಠಿಯಿಂದ ಇದು ವಿಶ್ವದ ಅತಿ ದೊಡ್ಡ ಆಲದ ಮರ ಎಂದು ಹೇಳಲಾಗಿದೆ. ಕ್ಯಾಲಿಪೋರ್ನಿಯಾದ ಜನರಲ್​ ಶರ್ಮಾನ್​ ಟ್ರೀ ಗಾತ್ರಕ್ಕೆ ತಿಮ್ಮಮ್ಮನ ಮರಿಮನು ಮರ ಸರಿಸಮವಾಗಿದೆ. ಆದರೆ, ಶರ್ಮಾನ್​ ಟ್ರೀ ಗಾತ್ರಕ್ಕೆ ಹೊಲಿದರೆ ತಿಮ್ಮಮ್ಮನ ಮರಿಮನು ಅತಿಹೆಚ್ಚು ಶಾಖೆಗಳನ್ನು ಹೊಂದಿದೆ. ಮರದ ಕಾಂಡದ ಶಾಖೆಗಳು ಬೆಳೆದು ನೆಲಕ್ಕೆ ತಾಗಿ ಮತ್ತೆ ಬೆಳೆಯುತ್ತಿರುವುದೇ ಇದರ ವಿಶೇಷವಾಗಿದೆ.

ಮರದ ಹಳೆಯ ದಂತೆ ಕಥೆ

15 ನೇ ಶತಮಾನದಲ್ಲಿ ತಿಮ್ಮಮ್ಮ ಎಂಬ ಮಹಿಳೆ ತನ್ನ ಪತಿಯ ಅಂತ್ಯಕ್ರಿಯೆಯ ಚಿತೆಯ ಮೇಲೆ ತನ್ನ ಪ್ರಾಣವನ್ನು ತ್ಯಾಗ ಮಾಡುವ ವಿಶೇಷ ಆಚರಣೆಯನ್ನು ಮಾಡಿದ್ದಳು ಎಂದು ಹೇಳಲಾಗುತ್ತದೆ. ಸುಟ್ಟ ಕಟ್ಟಿಗೆಯಲ್ಲಿ ಒಂದು ಸಣ್ಣ ಸಸಿ ಮೊಳಕೆಯೊಡೆದಿದೆ. ಆ ಪುಟ್ಟ ಸಸಿಯೇ ಕೊನೆಗೆ ಬೆಳೆದು ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ ಎಂಬ ದಂತ ಕಥೆ ಇದೆ.(ಏಜೆನ್ಸೀಸ್​)