ನ್ಯೂಸ್

Free Gold: ಭಾರತದ ಈ 2 ಪ್ರದೇಶದಲ್ಲಿ ನೀವು ಎಷ್ಟು ಬೇಕಾದ್ರೂ ಚಿನ್ನವನ್ನು ಉಚಿತವಾಗಿ ಪಡೆಯಬಹುದು!

ನವದೆಹಲಿ: ದಿನದಿಂದ ದಿನಕ್ಕೆ ಚಿನ್ನ (Gold)ದ ದರ ಗಗನಮುಖಿಯಾಗುತ್ತಿದೆ. ಅತ್ಯಮೂಲ ಹಳದಿ ಲೋಹ ಗ್ರಾಹಕರ ಜೇಬು ಸುಡುತ್ತಿದೆ. ಸದ್ಯ ಚಿನ್ನದ ಬೆಲೆ ಜಿಎಸ್​ಟಿ ಸೇರಿದಂತೆ 22 ಕ್ಯಾರಟ್​ನ ಚಿನ್ನದ ಬೆಲೆ 10 ಗ್ರಾಂಗೆ 70 ಸಾವಿರ ರೂ. ದಾಟಿದೆ. ಹೀಗೆ ಬೆಲೆ ಏರಿದರೆ ಮುಂದೆ ಹೇಗಪ್ಪಾ ಅಂತಾ ಗ್ರಾಹಕರು ಚಿಂತಿಸುತ್ತಿದ್ದಾರೆ. ಆದರೆ, ಚಿನ್ನದ ಬೆಲೆ ಎಷ್ಟೇ ಹೆಚ್ಚಾದರೂ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಅಚ್ಚರಿಯ ಸಂಗತಿ ಏನೆಂದರೆ, ಭಾರತದ ಈ ಎರಡು ಜಾಗದಲ್ಲಿ ಮಾತ್ರ ಉಚಿತವಾಗಿ ಚಿನ್ನ (Free Gold) ದೊರೆಯುತ್ತದೆ. ಇದು ನಿಜಾನಾ? ನಮ್ಮಿಂದ ನಂಬಲು ಸಾಧ್ಯವಿಲ್ಲ ಎಂಬ ಮಾತುಗಳು ನಿಮ್ಮಿಂದ ಬರಬಹುದು. ಆದರೆ, ಇದು ನಿಜ. ನಿಜ ಅನ್ನೋದಾದರೆ ಆ ಜಾಗಗಳು ಯಾವುವು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು ಅದಕ್ಕೆ ಉತ್ತರ ಇಲ್ಲಿದೆ.

ಹೊಳೆಯುವ ಲೋಹಕ್ಕೆ ಮಹಿಳೆಯರು ಮತ್ತು ಪುರುಷರು ಇಬ್ಬರು ಫಿದಾ ಆಗುತ್ತಾರೆ. ಅದರಲ್ಲೂ ಮಹಿಳೆಯರೇ ಚಿನ್ನಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ವ್ಯಾಪಾರ ಅಥವಾ ವೈದ್ಯಕೀಯ ವೆಚ್ಚಗಳಿಗಾಗಿ ಕಷ್ಟಕರ ಸಂದರ್ಭಗಳಲ್ಲಿ ಚಿನ್ನವು ನೆರವಾಗುತ್ತದೆ ಎಂಬುದು ಮಧ್ಯಮ ವರ್ಗದ ಜನರ ನಂಬಿಕೆಯಾಗಿದೆ. ಕೆಲವರು ಹೂಡಿಕೆಗಾಗಿಯೂ ಚಿನ್ನವನ್ನೂ ಖರೀದಿಸುತ್ತಾರೆ. ಚಿನ್ನಕ್ಕೆ ಇಷ್ಟೊಂದು ಬೇಡಿಕೆ ಇದ್ದು, ದುಬಾರಿಯಾಗಿರುವ ಸಂದರ್ಭದಲ್ಲಿ ಉಚಿತವಾಗಿ ಚಿನ್ನ ಸಿಗುತ್ತದೆ ಎಂದರೆ ಯಾರು ತಾನೇ ನಂಬುತ್ತಾರೆ? ಆದರೆ ಚಿನ್ನ ಉಚಿತವಾಗಿ ದೊರೆಯುವ ಸ್ಥಳಗಳಿವೆ.

ಹೌದು, ಜಗತ್ತಿನಲ್ಲಿ 4 ಸ್ಥಳಗಳಲ್ಲಿ ಚಿನ್ನ ಉಚಿತವಾಗಿ ದೊರೆಯುತ್ತದೆ. ಅವುಗಳಲ್ಲಿ 2 ಭಾರತದಲ್ಲಿವೆ. ಕೆನಡಾದ ಕಿಲೋಡೈಕ್ ನದಿಯಿಂದ ದೊಡ್ಡ ಪ್ರಮಾಣದ ಚಿನ್ನವನ್ನು ಗಣಿಗಾರಿಕೆ ಮಾಡಲಾಗುತ್ತದೆ. ಇಲ್ಲಿನ ಜನರು ಜೀವನೋಪಾಯಕ್ಕಾಗಿ ಚಿನ್ನವನ್ನು ಶೋಧಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಅಮೆರಿಕದ ಮಿಸ್ಸೋರಿ ನದಿಯ ಮರಳಿನಲ್ಲೂ ಜನರು ಚಿನ್ನಕ್ಕಾಗಿ ಹುಡುಕುತ್ತಾರೆ. ಇಲ್ಲಿ ಉಚಿತವಾಗಿ ಸಿಗುವ ಚಿನ್ನದಿಂದಲೇ ತಮ್ಮ ಜೀವನಕ್ಕೆ ಬೇಕಾದ ಎಲ್ಲವನ್ನೂ ಅಲ್ಲಿನ ಜನರು ಪಡೆಯುತ್ತಾರೆ.

ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ, ಇಲ್ಲಿ ಎರಡು ನದಿಗಳಲ್ಲಿ ಚಿನ್ನ ಉಚಿತವಾಗಿ ದೊರೆಯುತ್ತದೆ. ಸ್ವರ್ಣರೇಖಾ ಅಥವಾ ಸುವರ್ಣಾ ರೇಖಾ ನದಿಯಲ್ಲಿ ಚಿನ್ನ ದೊರೆಯುತ್ತದೆ. ಸುವರ್ಣರೇಖಾ ನದಿಯು ಭಾರತದ ರಾಜ್ಯಗಳಾದ ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ಮೂಲಕ ಹರಿಯುತ್ತದೆ. ಇಲ್ಲಿನ ಜನರು ಚಿನ್ನವನ್ನು ಪಡೆಯಲು ನದಿಯಿಂದ ಮರಳನ್ನು ಹೊರ ತೆಗೆಯುತ್ತಾರೆ. ಬಳಿಕ ಚಿನ್ನವನ್ನು ಮರಳಿನಿಂದ ಬೇರ್ಪಡಿಸುತ್ತಾರೆ.

ಭಾರತದ ಇನ್ನೊಂದು ಸ್ಥಳವೆಂದರೆ ಅದು ಖಾರ್ಕೈ ನದಿಯ. ಇದು ಸುವರ್ಣರೇಖಾ ನದಿಯ ಉಪನದಿಯಾಗಿದೆ. ಈ ನದಿಯ ಮರಳಿನಲ್ಲೂ ಚಿನ್ನ ಸಿಗುತ್ತದೆ. ಮರಳಿನಲ್ಲಿ ಮಿಶ್ರಿತ ಚಿನ್ನವನ್ನು ಹೊರತೆಗೆಯಲು ಜನರು ನದಿಯಿಂದ ಮರಳನ್ನು ತೆಗೆಯುತ್ತಾರೆ. (ಏಜೆನ್ಸೀಸ್​)