Beauty tips: ಇಂದಿನ ದಿನಗಳಲ್ಲಿ ಚಿಕ್ಕವರಿನಿಂದ ಹಿಡಿದು ದೊಡ್ಡವರವರೆಗೂ ತಮ್ಮ ಚರ್ಮವು ಸೌಂದರ್ಯದಿಂದ ಕೂಡಿರಬೇಕು ಹಾಗೂ ಹೊಳೆಯಬೇಕು ಎಂದು ತಿಳಿದಿರುತ್ತಾರೆ. ಅದಕ್ಕಾಗಿ ದುಬಾರಿ ಕ್ರೀಮ್ಗಳು ಹಾಗೂ ಇನ್ನಿತರ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಇದೆಲ್ಲಾ ಮಾಡಿದರೂ ಕೂಡಾ ನಿಮಗೆ ಒಳ್ಳೆಯ ಫಲಿತಾಂಶ ಸಿಕ್ಕಿಲ್ಲವೇ? ಹಾಗಿದ್ದರೆ ಈ ಮನೆಮದ್ದುಗಳನ್ನು ಬಳಸಿ ನಿಮ್ಮ ಕೈಗಳ ಸಂದು, ಇನ್ನಿತರ ಚರ್ಮದ ಭಾಗಗಳಿಗೆ ಹಚ್ಚಿರಿ. ಇದು ಕೊಳೆಯಾಗಿರುವ ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಕಡಲೆ ಹಿಟ್ಟನ್ನು ಚರ್ಮದ ಸೌಂದರ್ಯಕ್ಕಾಗಿ ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ಇದರಲ್ಲಿರುವ ನೈಸರ್ಗಿಕ ಗುಣಗಳು ಚರ್ಮದಲ್ಲಿರುವ ಸತ್ತ ಜೀವಕೋಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೆಯೇ, ಇದು ಚರ್ಮದಲ್ಲಿರುವ ಅನಗತ್ಯ ಎಣ್ಣೆಯನ್ನು ತೆಗೆದುಹಾಕಿ ಹೊಳಪನ್ನು ನೀಡುತ್ತದೆ. ಇದಲ್ಲದೇ, ಕಡಲೆಹಿಟ್ಟು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನೀವೇನಾದರೂ ಹೊಳೆಯುವ ಚರ್ಮವನ್ನು ಪಡೆಯಬೇಕೆಂದರೆ ಕಡಲೆ ಹಿಟ್ಟನ್ನು ಬಳಸಿ.
ಇದನ್ನೂ ಓದಿ: ಬಚ್ಕೆ ರೆ ರೆಹನಾ ರೆ ಬಾಬಾ: ಟ್ರಂಪ್ ಭೇಟಿಯನ್ನು ತಪ್ಪಿಸಲು ಪ್ರಧಾನಿ ASEAN ಶೃಂಗಸಭೆಗೆ ಹೋಗುತ್ತಿಲ್ಲ ಎಂದು ಕಾಂಗ್ರೆಸ್ ಆರೋಪ
ಕಾಫಿ ಕೇವಲ ನಿಮ್ಮನ್ನು ಬೆಳಿಗ್ಗೆ ಎಬ್ಬಿಸಲು ಇರುವ ಪಾನೀಯವಲ್ಲ. ಬದಲಿಗೆ ಇದು ಚರ್ಮವನ್ನು ಪುನಃ ಯೌವನಗೊಳಿಸಲು ಸಹಾಯ ಮಾಡುವಂತಹ ನೈಸರ್ಗಿಕ ಪದಾರ್ಥವಾಗಿದೆ. ಕಾಫಿಪುಡಿಯಿಂದ ಚರ್ಮಕ್ಕೆ ಸ್ಕ್ರಬ್ ಮಾಡುವುದರಿಂದ ಇದು ರಕ್ತಪರಿಚಲನವನ್ನು ಸುಧಾರಿಸುತ್ತದೆ. ಹಾಗೆಯೇ ಚರ್ಮವು ಕಾಂತಿಯುತವಾಗಿ ಕಾಣುವಂತೆ ಮಾಡಿ ನಿಮ್ಮ ಅಂಧವನ್ನು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ.
ಮೊಸರು ಚರ್ಮಕ್ಕೆ ಯಾವಾಗಲೂ ಉತ್ತಮವಾದ ನೈಸರ್ಗಿಕ ಮಾಯಿಶ್ಚರೈಸರ್ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಲ್ಯಾಕ್ಟಿವ್ ಆಮ್ಲವು ಚರ್ಮದಲ್ಲಿರುವ ಕಲೆಯನ್ನು ತೆಗೆದುಹಾಕಲು ಸಹಾಯ ಮಾಡಿ. ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಕಡಲೆ ಹಿಟ್ಟಿನೊಂದಿಗೆ ಮೊಸರನ್ನು ಸೇರಿಸಿ ಚರ್ಮಕ್ಕೆ ಹಚ್ಚುವುದರಿಂದ ಇದು ಹೊಳಪನ್ನು ನೀಡಿ ಸುಕ್ಕು ಕಟ್ಟಿದ ಚರ್ಮದಿಂದ ಪುನಃ ಯೌವನ ಸ್ಥಿತಿಗೆ ತಲುಪುವಂತೆ ಮಾಡುತ್ತದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಗೂಳಿ ಓಟ ಜೋರು: ಸತತ 6 ದಿನಗಳಿಂದ ಏರುಗತಿಯಲ್ಲಿರುವ ಸೆನ್ಸೆಕ್ಸ್, ನಿಫ್ಟಿ ಅಂಕ! | Stock Market
ತೆಂಗಿನ ಎಣ್ಣೆಯು ಚರ್ಮಕ್ಕೆ ಆಳವಾದ ಪೋಷಣೆಯನ್ನು ನೀಡುತ್ತದೆ. ಇದು ನೈಸರ್ಗಿಕವಾಗಿ ಕೊಬ್ಬಿನಾಮ್ಲಗಳಿಂದ ಕೂಡಿದ್ದು, ಸುಕ್ಕುಗಟ್ಟಿದ ಚರ್ಮವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚುವುದಿರಿಂದ ಇದು ಚರ್ಮದ ಮೇಲಿನ ಊತ, ತುರಿಕೆ ಅಥವಾ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೆಯೇ ನೈಸರ್ಗಿಕ ಫೇಸ್ಪ್ಯಾಕ್ಗಳಿಗೆ ಇದನ್ನು ಸೇರ್ಪಡಿಸುವುದರಿಂದ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದು ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.