ರಾತ್ರಿ ಹೊತ್ತು ನಾಯಿಗಳು ಊಳಿಡುವುದು ಯಾಕೆ? 
ನ್ಯೂಸ್

ರಾತ್ರಿ ನಾಯಿಗಳು ಅಳೋದು ದೆವ್ವ ನೋಡಿಯಾ? ಶ್ವಾನಗಳು ಕೂಗೋದರ ಹಿಂದಿದೆ ರೋಚಕ ಕಾರಣ! | Dogs Howl At Night

Dogs Howling: ರಾತ್ರಿ ವೇಳೆ ನಾಯಿಗಳು ಇದ್ದಕ್ಕಿದ್ದಂತೆ ಅಳಲು ಶುರು ಮಾಡಿದರೆ ‘ಅಯ್ಯೋ, ದೆವ್ವ ಅಥವಾ ಭೂತ ಓಡಾಡ್ತಿರಬೇಕು, ಅದಕ್ಕೆ ನಾಯಿ ಅಳ್ತಿದೆ’ ಅಂತ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಆದರೆ ವಿಜ್ಞಾನ ಮತ್ತು ಜೀವಶಾಸ್ತ್ರದ ಪ್ರಕಾರ, ರಾತ್ರಿ ನಾಯಿಗಳು ಅಳುವುದಕ್ಕೂ ದೆವ್ವ-ಭೂತಗಳಿಗೂ ಯಾವುದೇ ಸಂಬಂಧವಿಲ್ಲ. ಇದರ ಹಿಂದೆ ಪ್ರಕೃತಿ ನೀಡಿರುವ ಅತ್ಯದ್ಭುತ ಶ್ರವಣ ಶಕ್ತಿಯ ರಹಸ್ಯವಿದೆ.

ನಾಯಿಗಳ ಕಿವಿಗಳನ್ನು ಪ್ರಕೃತಿಯ 'ಕ್ಯಾನೈನ್ ಅಲ್ಟ್ರಾಸೋನಿಕ್ ರಾಡಾರ್' ಎಂದೇ ಕರೆಯಲಾಗುತ್ತದೆ. ಸಾಮಾನ್ಯ ಮನುಷ್ಯರು ಕೇವಲ 20 ಕೆಹೆಚ್‌ಝಡ್ (kHz) ವರೆಗಿನ ಶಬ್ದವನ್ನು ಮಾತ್ರ ಕೇಳಬಲ್ಲರು. ಆದರೆ ನಾಯಿಗಳು 45 ಕೆಹೆಚ್‌ಝಡ್ ನಿಂದ 65 ಕೆಹೆಚ್‌ಝಡ್ ವರೆಗಿನ ಹೆಚ್ಚಿನ ಆವರ್ತನದ (Ultrasonic) ಶಬ್ದಗಳನ್ನು ಸುಲಭವಾಗಿ ಗ್ರಹಿಸುತ್ತವೆ.

ರಾತ್ರಿಯ ನಿಶ್ಯಬ್ದ ವಾತಾವರಣದಲ್ಲಿ ಮೈಲಿಗಟ್ಟಲೆ ದೂರದಲ್ಲಿ ಆಗುವ ಸಣ್ಣ ಸದ್ದು, ವಾಹನಗಳ ಸೈರೆನ್ ಅಥವಾ ಕ್ರಿಮಿ-ಕೀಟಗಳ ಶಬ್ದಗಳನ್ನು ನಾಯಿಗಳು ತಕ್ಷಣವೇ ಪತ್ತೆಹಚ್ಚುತ್ತವೆ.

ಮೂಲತಃ ತೋಳಗಳ ವಂಶಕ್ಕೆ ಸೇರಿದ ನಾಯಿಗಳು, ರಾತ್ರಿ ತಂಪಾದ ಗಾಳಿಯಲ್ಲಿ ತಮ್ಮ ಗುಂಪಿನ ಇತರ ನಾಯಿಗಳೊಂದಿಗೆ ಸಂಪರ್ಕ ಸಾಧಿಸಲು ಹಾಗೂ ತಮ್ಮ ಜಾಗವನ್ನು (Territory) ರಕ್ಷಿಸಿಕೊಳ್ಳಲು ಈ ರೀತಿ ಕೂಗು ಹಾಕುತ್ತವೆ.

ಇದನ್ನೂ ಓದಿ: MSRTC Bus Assault: ಓವರ್‌ಟೇಕ್ ವಿಚಾರಕ್ಕೆ ಕಿರಿಕ್! ​ಎಸ್‌ಟಿ ಬಸ್ ತಡೆದು ಚಾಲಕನ ಮೇಲೆ ಹಲ್ಲೆ, ಪ್ರಯಾಣಿಕರಿಗೆ ಧಮ್ಕಿ

ಅಷ್ಟೇ ಅಲ್ಲದೆ, ಒಂಟಿತನ ಕಾಡಿದಾಗ ಅಥವಾ ಆಂಬ್ಯುಲೆನ್ಸ್ ಸೈರೆನ್‌ನಂತಹ ಶಬ್ದ ಕೇಳಿದಾಗ ಅದನ್ನು ಮತ್ತೊಂದು ನಾಯಿಯ ಕೂಗು ಎಂದು ಭಾವಿಸಿ ಪ್ರತಿಯಾಗಿ ಧ್ವನಿ ಮಾಡುತ್ತವೆ. ಪ್ರಾಚೀನ ಕಾಲದಲ್ಲಿ ಮನುಷ್ಯನಿಗೆ ಕೇಳಿಸದ ಶಬ್ದಗಳಿಗೆ ನಾಯಿ ಪ್ರತಿಕ್ರಿಯಿಸುವುದನ್ನು ನೋಡಿ 'ದೆವ್ವ ಕಂಡಿದೆ' ಎಂಬ ಮೂಢನಂಬಿಕೆ ಹುಟ್ಟಿಕೊಂಡಿತ್ತಷ್ಟೇ.