ನ್ಯೂಸ್

ರೇಣುಕಾಚಾರ್ಯ ಅವರು ಯಡಿಯೂರಪ್ಪನವರ ಬಾಲ ಹಿಡಿದುಕೊಂಡು ಬೆಳೆದವರು: ಡಿಕೆಶಿ

Webdesk - Savina Naik

ದಾವಣಗೆರೆ: ರೇಣುಕಾಚಾರ್ಯ ಯಡಿಯೂರಪ್ಪನವರ ಬಾಲ ಹಿಡಿದುಕೊಂಡು ಬೆಳೆದವರು. ಹೊನ್ನಾಳಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆಂದು ಹೊ‌ನ್ನಾಳಿಯಲ್ಲಿ ಡಿ. ಕೆ ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40% ಕಮಿಷನ್​ನಲ್ಲಿ ಬಿಜೆಪಿ ಮುಳುಗಿದೆ. ಇದರಿಂದ ಶಿವಮೊಗ್ಗದಲ್ಲಿ ಒಂದು ಸಾವು ಕೂಡ ಆಗಿದೆ. ಹೀಗಾಗಿ ಈಶ್ವರಪ್ಪನವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಲಂಚದಲ್ಲಿಯೇ ಬಿಜೆಪಿ ಬದುಕಿದೆ. ರೇಣುಕಾಚಾರ್ಯ ಯಡಿಯೂರಪ್ಪನವರು ಬಾಲ ಹಿಡಿದುಕೊಂಡು ಬೆಳೆದವರು. ಹೊನ್ನಾಳಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ, ಎಲ್ಲಾ ಭ್ರಷ್ಟಾಚಾರದಲ್ಲಿ ಮುಳುಗಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ದಿನ ಬಳಕೆಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಹೆಣ್ಣು ಮಕ್ಕಳು ಸಂಸಾರ ಮಾಡುವುದು ಕಷ್ಟವಾಗಿದೆ. ಹೀಗಾಗಿ ಮಹಿಳೆಯರಿಗೆ ತಿಂಗಳಿಗೆ 2000 ನೀಡುತ್ತಿದ್ದೇವೆ. 10 ಕೆಜೆ ಅಕ್ಕಿ ಕೊಡುತ್ತೇವೆ, ಮಹಿಳೆಯರಿಗೆ ಬಸ್ ಪಾಸ್ ಉಚಿತವಾಗಿ ನೀಡುತ್ತೇವೆ. ಇದೆ 13ರಂದು ನಮ್ಮ ಎಲ್ಲಾ ಗ್ಯಾರಂಟಿ ಅನ್ವಯವಾಗುತ್ತವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ 60 ಸೀಟು ಬರಲ್ಲ. ನಮಗೆ ವಿಶ್ವಾಸ ಇದೆ, ಕಾಂಗ್ರೆಸ್ 140 ಸೀಟು ಬರುತ್ತದೆ. ಶಾಂತನಗೌಡ ಹಸು ಇದ್ದಾಗೆ ಅವರಿಗೆ ಓಟು ಹಾಕಿ. ಅವರಿಗೆ ಓಟು ಹಾಕಿ ನನ್ನ ಮತ್ತು ಸಿದ್ದು ಕೈ ಬಲಪಡಿಸಿ. ಹೊನ್ನಾಳಿ ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡ್ ಪರ ಪ್ರಚಾರ ಮತ್ತು ಮತಯಾಚನೆ ಮಾಡಿದ್ದಾರೆ.