dks ramesh jarakiholi cd case 
ನ್ಯೂಸ್

ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ? ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಆಕ್ರೋಶ

ಬೆಂಗಳೂರು: ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿರುವ ಡಿಕೆಶಿ, ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ? ಎಂದು ಕಟುವಾಗಿಯೇ ಪ್ರಶ್ನಿಸಿದ್ದಾರೆ.

'ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದೇ ಡಿ.ಕೆ.ಶಿವಕುಮಾರ್. ಸಿಡಿ ಕೇಸ್ ಅನ್ನು ಸಿಬಿಐಗೆ ಕೊಡಿಸುತ್ತೇನೆ‌. 40 ಕೋಟಿ ರೂ. ಖರ್ಚು ಮಾಡಿ ನನನ್ನು ಸಿಡಿ ಕೇಸಲ್ಲಿ ಸಿಕ್ಕಿಸಿ ಹಾಕಿಸಿದ್ದಾಗಿ ಡಿಕೆಶಿಯೇ ಹೇಳಿಕೊಂಡಿದ್ದಾನೆ' ಎಂದು ಬೆಳಗಾವಿಯಲ್ಲಿ ಬುಧವಾರ ರಮೇಶ್​ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಕಟುವಾಗಿಯೇ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ರಮೇಶ್ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚುವಂತೆ ನಾವು ಹೇಳಿದ್ವಾ? ಎಂದು ಪ್ರಶ್ನಿಸಿದ್ದಾರೆ.

ಲಂಚ ಹೊಡಿ ಎಂದು ರಮೇಶ್​ ಜಾರಕಿಹೊಳಿಗೆ ಹೇಳಿದ್ವಾ? ದುಡ್ಡು ಹಂಚು ಎಂದೆವಾ? ಕಾಂಗ್ರೆಸ್ ಹಾಳು‌ ಮಾಡಿದ್ದು ಅವನು. ಆಪರೇಷನ್ ಕಮಲ‌ಮಾಡಿದ್ದು ಅವನು, ಸರ್ಕಾರ ಬೀಳಿಸಿದ್ದು ಅವನು. ಅದೇನೋ ತನಿಖೆ ಮಾಡಿಸ್ತೀನಿ ಅಂದ್ನಲ್ಲಾ ಮಾಡಿಸೋಕೆ ಹೇಳಿ ಎಂದು ಡಿಕೆಶಿ ಹೇಳಿದ್ದಾರೆ.