Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಕ ದಿನವಾದ ಸೋಮವಾರ (ಅ.20) ಭರ್ಜರಿ ಏರಿಕೆ ಕಾಣುವ ಮೂಲಕ ದೀಪಾವಳಿ ಸಂಭ್ರಮ ಮತ್ತಷ್ಟು ಹಿಮ್ಮಡಿಗೊಳಿಸಿದೆ.
ಹೌದು, ಷೇರು ಮಾರುಕಟ್ಟೆ (NSE ಮತ್ತು BSE) ಇಂದು ಸಾಮಾನ್ಯವಾಗಿ ತೆರೆದಿದ್ದು, ಮಧ್ಯಾಹ್ನ 1:00 ಗಂಟೆಯವರೆಗೆ ಸೆನ್ಸೆಕ್ಸ್ 84,499.41 ಅಂಕಗಳಲ್ಲಿ ವ್ಯಾಪಾರ ನಡೆಯುತ್ತಿದ್ದು, 547 ಅಂಕಗಳ ಏರಿಕೆಯಿದೆ (0.65%). ನಿಫ್ಟಿ 50 ಸೂಚ್ಯಂಕ 25,850 ಅಂಕಗಳನ್ನು ಮೀರಿದ್ದು, ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.
ದೀಪಾವಳಿ ಸಂಬಂಧಿತ ರಜಾದಿನಗಳ ಕಾರಣದಿಂದಾಗಿ ಅ.21 ಮತ್ತು 22(ನಾಳೆ , ನಾಡಿದ್ದು) ದೇಶೀಯ ಷೇರು ಮಾರುಕಟ್ಟೆಗಳು ವಹಿವಾಟು ಸ್ಥಗಿತಗೊಳಿಸಲಿವೆ.
ಮಂಗಳವಾರ ದೇಶಾದ್ಯಂತ ಲಕ್ಷ್ಮೀ ಪೂಜೆ ಕಾರಣದಿಂದಾಗಿ ಅ.21ರಂದು ರಜೆ ಇದ್ದು, ಹಾಗೆಯೇ ಬುಧವಾರ ಬಲಿ ಪಾಂಡ್ಯಮಿ ಹಿನ್ನೆಲೆ ಮಾರುಕಟ್ಟೆ ಮುಚ್ಚಲ್ಪಟ್ಟಿರುತ್ತದೆ ಎಂದು NSE ಮತ್ತು BSE ತಿಳಿಸಿವೆ.(ಏಜೆನ್ಸೀಸ್)