ಇಂದಿರಾ ಗಾಂಧಿ ನಿವಾಸದ ದೀಪಾವಳಿ ಸಂಭ್ರಮ ನೆನಪಿಸಿಕೊಂಡ ಸೋನಿಯಾ 
ನ್ಯೂಸ್

ಆಗಿನ ದೀಪಾವಳಿಯೇ ಚಂದ: ಮೊಮ್ಮಗಳಿಗೆ ಇಂದಿರಾ ಗಾಂಧಿ ಕಾಲದ ಕಥೆ ಹೇಳಿದ ಸೋನಿಯಾ! | Sonia Gandhi Instagram

Sonia Gandhi Diwali Memories: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮನೆಯಲ್ಲಿ ದೀಪಾವಳಿ ಆಚರಣೆ ಹೇಗಿರ್ತಿತ್ತು ಗೊತ್ತಾ? ಆ ಕಾಲದ ಸುಂದರ ನೆನಪುಗಳನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮೊಮ್ಮಗಳು ಮಿರಾಯಾ ವಾದ್ರಾ ಅವರೊಂದಿಗೆ ಮನೆಯ ತೋಟದಲ್ಲಿ ಕುಳಿತು ಮಾತನಾಡುತ್ತಿರುವ ವೀಡಿಯೊವನ್ನು ಸೋನಿಯಾ ಗಾಂಧಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ದೀಪಾವಳಿ ಹಬ್ಬ ಎಂದರೆ ತುಂಬಾ ಇಷ್ಟ ಮತ್ತು ಆ ದಿನಗಳಲ್ಲಿ ಆಚರಣೆಗಳು ಅತ್ಯಂತ ಸುಂದರವಾಗಿದ್ದವು ಎಂದು ಅವರು ಹೇಳಿದ್ದಾರೆ.

ದೀಪಾವಳಿಯ ಹಳೆಯ ನೆನಪುಗಳು

ವೀಡಿಯೊದಲ್ಲಿ ಮಾತನಾಡಿರುವ ಸೋನಿಯಾ, ’ಆ ದಿನಗಳಲ್ಲಿ ಮನೆಯ ಪ್ರವೇಶದ್ವಾರದಲ್ಲಿದ್ದ ಗಣೇಶನ ಮೂರ್ತಿಯನ್ನು ಸಿಂಗರಿಸಲಾಗುತ್ತಿತ್ತು. ದಾರಿಗಳು ಮತ್ತು ಮನೆಯ ಛಾವಣಿಯ ಮೇಲೆ ಮಣ್ಣಿನ ದೀಪಗಳನ್ನು ಸಾಲಾಗಿ ಹಚ್ಚಲಾಗುತ್ತಿತ್ತು. ಅಲ್ಲದೆ, ಆ ಸಮಯದಲ್ಲಿ ತಿಳಿ ನೀಲಿ ಆಕಾಶ ಮತ್ತು ಹಿತಕರವಾದ ವಾತಾವರಣವಿರುತ್ತಿತ್ತು‘ ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ.

ದೆಹಲಿಗೆ ಕರೆದೊಯ್ದು ಪಟಾಕಿ ಕೊಡಿಸುತ್ತಿದ್ದ ಅಪ್ಪ

ಇದೇ ವೇಳೆ ಮಗಳು ಪ್ರಿಯಾಂಕಾ ಗಾಂಧಿ ಮಾತನಾಡಿ, ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದೀಪಾವಳಿ ಸಮಯದಲ್ಲಿ ಮಕ್ಕಳನ್ನು ಹಳೆಯ ದೆಹಲಿಗೆ ಕರೆದೊಯ್ದು ಪಟಾಕಿ ಕೊಡಿಸುತ್ತಿದ್ದ ಕ್ಷಣಗಳನ್ನು ನೆನಪಿಸಿಕೊಂಡರು. ಹಬ್ಬಗಳ ಸಮಯದಲ್ಲಿ ತಮ್ಮ ಕುಟುಂಬದಲ್ಲಿ ಕಾಶ್ಮೀರಿ ಅಡುಗೆಯನ್ನು ಸವಿಯುತ್ತಿದ್ದೆವು ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ವೀಡಿಯೊ ಹಂಚಿಕೊಂಡ ಸೋನಿಯಾ ಗಾಂಧಿ, ‘ನನ್ನ ಆರಂಭಿಕ ದೀಪಾವಳಿ ಆಚರಣೆಯ ನೆನಪುಗಳು, ಸಂಪ್ರದಾಯಗಳು ಮತ್ತು ಆ ಪುಟ್ಟ ಕ್ಷಣಗಳನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜಪಾನ್‌ನಲ್ಲಿ ಪ್ರಬಲ ಭೂಕಂಪ: ನಡುಕಕ್ಕೆ ನಲುಗಿದ ನಗರಗಳು, ಸೂಪರ್‌ಮಾರ್ಕೆಟ್ ವಸ್ತುಗಳು ಚೆಲ್ಲಾಪಿಲ್ಲಿ! | Japan earthquake

ಸಾಮಾಜಿಕ ಜಾಲತಾಣಕ್ಕೆ ಸೋನಿಯಾ ಎಂಟ್ರಿ

ಸೋನಿಯಾ ಗಾಂಧಿ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್ ಖಾತೆಗಳನ್ನು ತೆರೆಯುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಪದಾರ್ಪಣೆ ಮಾಡಿದ್ದಾರೆ. ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಅವರ ಆತ್ಮಕಥೆ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ಮಂಗಳವಾರ ಬಿಡುಗಡೆಯಾಗಲಿದೆ.