ನ್ಯೂಸ್

ಲೈಂಗಿಕ ಜೀವನದ ವಿಚಾರಕ್ಕೆ ವಿಚ್ಛೇದನ ಪಡೆದುಕೊಳ್ಳುತ್ತಾರೆ: ಅಚ್ಚರಿ ಹೇಳಿಕೆ ನೀಡಿದ ವಕೀಲೆ! | Divorce

ಮುಂಬೈ: ಸಂಗೀತ ಮಾಂತ್ರಿಕ ಎ.ಆರ್​. ರೆಹಮಾನ್​ ಮತ್ತು ಸಾಯಿರಾ ಭಾನು ದಂಪತಿ ವಿಚ್ಛೇದನದ(Divorce) ಸುದ್ದಿ ತಿಳಿದು ಅನೇಕರು ಭಾರೀ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. 29 ವರ್ಷಗಳ ದಾಂಪತ್ಯ ಜೀವನವನ್ನು ಈಗ ಅಂತ್ಯಗೊಳಿಸಲು ಮುಂದಾದ ಈ ಜೋಡಿಯ ನಿರ್ಧಾರ ಹಲವರನ್ನು ಗೊಂದಲಕ್ಕೆ ದೂಡಿದೆ. ವಿಚ್ಛೇದನದ ಹಿಂದಿರುವ ಕಾರಣ ಏನಿರಬಹುದು ಎಂದು ಚರ್ಚಿಸುತ್ತಿರುವ ಬೆನ್ನಲ್ಲೇ ಇದೀಗ ಸಾಯಿರಾ ಭಾನು ಪರ ವಕೀಲರಾದ ವಂದನಾ ಷಾ ಒಂದಷ್ಟು ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚಿಗಷ್ಟೇ ರೆಹಮಾನ್​ ಪತ್ನಿ ಸಾಯಿರಾ ಭಾನು, ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದು, 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿರುವೆ ಎಂದು ಹೇಳಿಕೊಂಡರು. ಈ ಏಕಾಏಕಿ ನಿರ್ಧಾರದಿಂದ ಬಾಲಿವುಡ್​ ಮಂದಿ ಸೇರಿ ವಿವಿಧ ಚಿತ್ರರಂಗದ ಗಣ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ರೆಹಮಾನ್​ ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್​)​ ಖಾತೆಯಲ್ಲಿ ವಿಚ್ಛೇದನದ ಬಗ್ಗೆ ''ನಾವು 30 ವರ್ಷದ ದಾಂಪತ್ಯ ಜೀವನವನ್ನು ಆಶೀಸಿದ್ದೇವು. ಆದರೆ, ಈ ವಿಷಯದಿಂದ ಎಲ್ಲ ವಿಚಾರಗಳು ಅಂತ್ಯಗೊಂಡಿವೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವು ನಡುಗಬಹುದು. ಆದರೂ, ಇದರಲ್ಲಿ ಅರ್ಥವನ್ನು ಹುಡುಕಿಕೊಳ್ಳಲು ಪ್ರಯತ್ನಿಸುತ್ತೇವೆ'' ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದೆಲ್ಲದರ ನಡುವೆ ವಕೀಲೆ ವಂದನಾ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ.

''ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ವಂದನಾ ಷಾ, ಬಾಲಿವುಡ್​ನಲ್ಲಿ ಇವರ ಜೀವನ ಸಾಮಾನ್ಯರಿಗಿಂತ ವಿಭಿನ್ನವಾಗಿರುತ್ತೆ. ದಾಂಪತ್ಯದಲ್ಲಿ ಸೆಕ್ಸ್​ ಲೈಫ್​ನಿಂದಲೇ ಬಹಳಷ್ಟು ಜನರ ವಿಚ್ಛೇದನಕ್ಕೆ ಕಾರಣವಾಗಿದೆ. ಹಾಗಂತ ಎಲ್ಲರ ವಿಚ್ಛೇದನಕ್ಕೂ ಇದೇ ಕಾರಣವಾಗಿರುವುದಿಲ್ಲ. ಇಲ್ಲಿನ ಜನರು (ಬಾಲಿವುಡ್​) ಎರಡೇರಡು ಮದುವೆಗಳನ್ನು ಮಾಡಿಕೊಳ್ಳುವುದು ಸಾಮಾನ್ಯ. ಇವರಲ್ಲಿ ಲೈಂಗಿಕ ಜೀವನ ಕೂಡ ವಿಭಿನ್ನವಾಗಿದೆ. ನನಗೆ ಬಂದ ಮಾಹಿತಿ ಪ್ರಕಾರ, ಸಾಮಾನ್ಯರಿಗಿಂತ ಅಧಿಕ ಅಥವಾ ವಿಭಿನ್ನ ರೀತಿಯಲ್ಲಿ ಲೈಂಗಿಕ ಜೀವನ ಬೇಕು ಎನ್ನುತ್ತಾರೆ. ಇದು ಸಾಧ್ಯವಾಗದಿದ್ದಾಗ ವಿಚ್ಛೇದನದತ್ತ ಮುಖ ಮಾಡುತ್ತಾರೆ ಎಂದು ಹೇಳಿದರು.

ಇದೇ ವಿಷಯ ಅಲ್ಲ, ಸಾಮಾನ್ಯವಾಗಿ ಮನೆಯಲ್ಲಿ ದಂಪತಿಯ ಜಗಳ, ಅತ್ತೆ-ಸೊಸೆ ಜಗಳ, ಇವರ ಜೀವನದಲ್ಲಿ ಮತ್ತೊಬ್ಬರು ತಲೆ ಹಾಕುತ್ತಿದ್ದಾರೆ ಎಂದು ತಮ್ಮ ಸಣ್ಣ-ಪುಟ್ಟ ಸಮಸ್ಯೆಗಳಿಗೆ ವಿಚ್ಛೇದನ ಕೋರುತ್ತಾರೆ. ಪ್ರತಿ ಸಂಬಂಧ ಹಲವು ಏರಿಳಿತಗಳನ್ನು ಎದುರಾಗುತ್ತವೆ. ಅವರ ವಿಚ್ಛೇದನದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಇಬ್ಬರೂ ಪರಸ್ಪರ ಬೆಂಬಲಿಸುತ್ತಾ ಬಾಳಿ ಎಂದು ಹಾರೈಸಿದ್ದಾರೆ,(ಏಜೆನ್ಸೀಸ್).