ಹೈದರಾಬಾದ್: ಯಂಗ್ ಟೈಗರ್ ಎನ್ಟಿಆರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿ ಇರುವುದು ಎಲ್ಲರಿಗೂ ಗೊತ್ತೆ ಇದೆ. ಪ್ರಸ್ತುತ ಅವರ ಬಳಿ ಮೂರು ಸಿನಿಮಾಗಳು ಇವೆ. ಅದನ್ನು ಹೊರತಪಡಿಸಿ ಮತ್ತೊಂದು ಸಿನಿಮಾವನ್ನು ಜೂನಿಯರ್ ಎನ್ಟಿಆರ್ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ: 12ನೇ ವಯಸ್ಸಿನಲ್ಲೇ ನನಗೆ ಕುಷ್ಠರೋಗವಿತ್ತು.. ಆ ಸಮಯದಲ್ಲೇ ನನಗೆ ಇದು ಪರಿಚಯವಾಗಿದ್ದು; ಡಿಂಪಲ್ ಕಪಾಡಿಯಾ
ನ್ಯಾಚುರಲ್ ಸ್ಟಾರ್ ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ಸಿನಿಮಾ ‘ಹಾಯ್ ನಾನ್ನಾ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ ಶೌರ್ಯುವ್ ಅವರೊಂದಿಗೆ ಜೂ. ಎನ್ಟಿಆರ್ ಮುಂದಿನ ಸಿನಿಮಾ ಎಂಬುದು ಸದ್ಯದ ಟಾಕ್.
ಶೌರ್ಯುವ್ ಹೇಳಿರುವ ಕಥೆ ಕೇಳಿ ಮ್ಯಾನ್ ಆಫ್ ಮಾಸ್ ಎನ್ಟಿಆರ್ ಗ್ರೀನ್ಸಿಗ್ನಲ್ ನೀಡಿದ್ದಾರೆ. ಸೀಕ್ವೆಲ್ ಸಿನಿಮಾ ಮಾಡುವ ಪ್ಲ್ಯಾನ್ ಮಾಡಲಾಗಿದ್ದು, ಎನ್ಟಿಆರ್ ಬಿಜಿಯಿರುವ ಕಾರಣ ಮೊದಲ ಭಾಗ 2026ರಲ್ಲಿ ಸೆಟ್ಟೇರಲಿದೆ. ಸಿನಿಮಾ 2028ರಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗವನ್ನು 2031ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು.
ಸದ್ಯ ಈ ಊಹಾಪೋಹಗಳಿಗೆ ತೆರೆ ಎಳೆದಿರುವ ನಿರ್ದೇಶಕ ಶೌರ್ಯುವ್ ಅವರು, ಇದು ನಿಜವಲ್ಲ. ಈ ವದಂತಿಗಳು ಹೇಗೆ ಪ್ರಾರಂಭವಾದವು ಎಂಬುದು ನನಗೆ ತಿಳಿದಿಲ್ಲ. ದುರದೃಷ್ಟವಶಾತ್ ಇದು ಸುಳ್ಳು ಮಾಹಿತಿ, ನಿಜವಾಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು.
ಜೂನಿಯರ್ ಎನ್ಟಿಆರ್ ಕೊರಟಾಲ ಶಿವ ನಿರ್ದೇಶನದ ದೇವರ 1 ಚಿತ್ರೀಕರಣದಲ್ಲಿ ಬಿಸಿ ಇದ್ದಾರೆ. ಈ ಸಿನಿಮಾದಲ್ಲಿ ಎನ್ಟಿಆರ್ಗೆ ಜಾನ್ವಿ ಕಪೂರ್ ನಾಯಕಿಯಾಗಿದ್ದಾರೆ. ಇದಲ್ಲದೆ ಎನ್ಟಿಆರ್ ಹೃತಿಕ್ ರೋಷನ್ ಅವರೊಂದಿಗೆ ವಾರ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. (ಏಜೆನ್ಸೀಸ್)