ಬೆಂಗಳೂರು: ಪ್ರೇಮಿಗಳ ದಿನಕ್ಕೆ ಸ್ಯಾಂಡಲ್ವುಡ್ನ ಹಲವು ಚಿತ್ರತಂಡಗಳು ಸ್ಪೆಷಲ್ ಪೋಸ್ಟರ್ಸ್, ಟೀಸರ್ ಝಲಕ್ಗಳನ್ನ ಬಿಡುಗಡೆ ಮಾಡುತ್ತಿದ್ದಾರೆ. ಅದರಂತೆ ದಿನಕರ್ ತೂಗುದೀಪ ಅವರ ಬಹುನಿರೀಕ್ಷಿತ ಸಿನಿಮಾ ‘ರಾಯಲ್’ ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ಬಿಡಗಡೆ ಮಾಡಿದ್ದು, ಸಿನಿ ರಸಿಕರನ್ನು ಸೆಳೆಯುತ್ತಿದೆ.
ಜಯಣ್ಣ ಕಂಬೈನ್ಸ್ ನಡಿ ರಾಯಲ್ ಸಿನಿಮಾ ನಿರ್ಮಾಣವಾಗುತ್ತಿದೆ. ವಿರಾಟ್ ಮತ್ತು ಸಂಜನಾ ಮುಖ್ಯಭೂಮಿಕೆಯಲ್ಲಿದ್ದಾರೆ. ಸದ್ಯ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಪ್ರೇಮಿಗಳ ದಿನದಂದು ಬಂದಿರುವ ಇದರ ಪೋಸ್ಟರ್ಯುವಜನರನ್ನು ಮಂತ್ರಮುಗ್ಧರನ್ನಾಗಿಸಿದೆ. ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬುದನ್ನ ಚಿತ್ರತಂಡವೇ ಹೇಳಬೇಕಿದೆ.
ಪೋಸ್ಟರ್ನಲ್ಲಿ ಕೆಂಪು ಗುಲಾಬಿಗಳಿಂದ ಮಾಡಿದ ಪ್ರೀತಿಯ ಹೃದಯ ಬ್ಯಾಕ್ಗ್ರೌಂಡ್ನಲ್ಲಿದ್ದು, ಅದರಲ್ಲಿ ವಿರಾಟ್ ಮತ್ತು ಸಂಜನಾ ನೃತ್ಯ ಮಾಡುವಂತೆ ತೋರುತ್ತಿದ್ದು, ಗಮನಸೆಳೆಯುತ್ತಿದೆ.