More

    ಅಮೇರಿಕಾದಲ್ಲಿ ಬುಬೊನಿಕ್ ಪ್ಲೇಗ್ ಪತ್ತೆ : ಬೆಕ್ಕಿನಿಂದ ಹರಡಿದೆ ಸೋಂಕು!

    ಲಾಸ್ ಏಂಜಲೀಸ್: ಅಮೆರಿಕದ ಒರೆಗಾನ್ ರಾಜ್ಯದಲ್ಲಿ ಅಪರೂಪದ ಕಾಯಿಲೆಯೊಂದರ ಪ್ರಕರಣ ದಾಖಲಾಗಿದೆ. ಒಬ್ಬ ವ್ಯಕ್ತಿಗೆ ಬುಬೊನಿಕ್ ಪ್ಲೇಗ್ ಇರುವುದು ಪತ್ತೆಯಾಗಿದ್ದು, ಸಾಕು ಬೆಕ್ಕಿನಿಂದ ಈ ರೋಗ ಹರಡಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: 20 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಸಾಧಿಸಿದ ಮೊದಲ ಭಾರತೀಯ ಕಂಪನಿ ರಿಲಯನ್ಸ್: ಅದರ ಷೇರು ವಹಿವಾಟು ಹೀಗಿದೆ ನೋಡಿ..

    ಬುಬೊನಿಕ್ ಪ್ಲೇಗ್ ಈ ಹಿಂದೆ ಯುರೋಪಿನಲ್ಲಿ ಭಾರಿ ಹಾನಿಯನ್ನುಂಟುಮಾಡಿತ್ತು. ಮಧ್ಯಯುಗದಲ್ಲಿ ಯುರೋಪ್ ಅನ್ನು ಅಪ್ಪಳಿಸಿದ ಪ್ಲೇಗ್ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರನ್ನು ಬಲಿಪಡೆದಿತ್ತು. ಇದನ್ನು ಬ್ಲ್ಯಾಕ್ ಡೆತ್ ಎಂದು ವಿವರಿಸಲಾಗಿದೆ. ಇತ್ತೀಚಿನ ಪ್ರಕರಣವನ್ನು ಒರೆಗಾನ್‌ನ ಡೆಸ್ಚುಟ್ಸ್ ಕೌಂಟಿಯಲ್ಲಿ ಗುರುತಿಸಲಾಗಿದೆ.

    ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಸಂಪರ್ಕಕ್ಕೆ ಬಂದಿದ್ದವರನ್ನು ಸಹ ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗಕ್ಕೆ ಕಾರಣವಾದ ಬೆಕ್ಕಿಗೂ ಸಹ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ರಿಚರ್ಡ್ ವಾಸೆಟ್ ತಿಳಿಸಿದ್ದಾರೆ.

    ಪ್ರಾಣಿಗಳಿಂದ ಪ್ಲೇಗ್ ವೈರಸ್ ಸೋಂಕಿಗೆ ಒಳಗಾದ 8 ದಿನಗಳ ನಂತರ, ಮಾನವರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೋಗಲಕ್ಷಣಗಳು ಜ್ವರ, ದೌರ್ಬಲ್ಯ, ಶೀತ ಮತ್ತು ಕೀಲು ನೋವುಗಳನ್ನು ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದ್ದಾರೆ.

    ಬುಬೊನಿಕ್ ಪ್ಲೇಗ್ ಅನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಅದು ಸೆಪ್ಟಿಸಿಮಿಕ್ ಪ್ಲೇಗ್ ಆಗಿ ಬದಲಾಗುವ ಸಾಧ್ಯತೆಗಳಿವೆ. ಇದು ರಕ್ತದಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

    14ನೇ ಶತಮಾನದಲ್ಲಿ ಯೂರೋಪಿಗೆ ಬಂದ ಖಾಯಿಲೆಯಿಂದ 5 ಮಿಲಿಯನ್​ ಜನರನ್ನು ಬಲಿಪಡೆದಿತ್ತು. ಆದರೆ ಒರೆಗಾನ್‌ನಲ್ಲಿ ದಾಖಲಾದ ಪ್ರಕರಣ ಅತ್ಯಂತ ಅಪರೂಪ. ಆ ರಾಜ್ಯದಲ್ಲಿ 2015ರಲ್ಲಿ ಕೊನೆಯ ಪ್ರಕರಣ ದಾಖಲಾಗಿತ್ತು.

    ಚೀನಾ ಅನಾವರಣಗೊಳಿಸಿದೆ 600 ಕಿಮೀ ವೇಗದ ಮ್ಯಾಗ್ಲೆವ್ ರೈಲು! ಇದು ವಿಮಾನದಂತೆ ಗಾಳಿಯಲ್ಲಿ ತೇಲಬಲ್ಲದು!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts