More

    ಚೀನಾ ಅನಾವರಣಗೊಳಿಸಿದೆ 600 ಕಿಮೀ ವೇಗದ ಮ್ಯಾಗ್ಲೆವ್ ರೈಲು! ಇದು ವಿಮಾನದಂತೆ ಗಾಳಿಯಲ್ಲಿ ತೇಲಬಲ್ಲದು!!

    ಬೀಜಿಂಗ್‌: ಚೀನಾ ದೇಶವು 600 ಕಿಲೋಮೀಟರ್ ವೇಗದ ಸಾಮರ್ಥ್ಯವನ್ನು ಹೊಂದಿರುವ ಸ್ವದೇಶಿ ಮ್ಯಾಗ್ನೆಟಿಕ್ ಲೆವಿಟೇಶನ್(ಮ್ಯಾಗ್ಲೆವ್ ) ರೈಲನ್ನು ಅನಾವರಣಗೊಳಿಸಿದೆ. ಇದು ಆ ದೇಶವು ನಿರ್ಮಿಸಿದ ಅತ್ಯಂತ ವೇಗದ ರೈಲಾಗಿದೆ.

    ಇದನ್ನೂ ಓದಿ: ಬಾಲಿವುಡ್‌ ನಟ ಅಜಯ್‌ ದೇವಗನ್‌ ಮೊದಲ ಪ್ರೀತಿ ಕಾಜೊಲ್ ಅಲ್ಲ, ಹಾಗಾದ್ರೆ ಮತ್ಯಾರು?

    ಹೊಸ ರೈಲಿನ ವೇಗವು ಸೆಂಟ್ರಲ್ ಜಪಾನ್ ರೈಲ್ವೇ ನಿರ್ಮಿಸಿದ ಜಪಾನಿನ ಮ್ಯಾಗ್ಲೆವ್ (603 ಕಿಮೀ) ರೈಲಿನ ವಿಶ್ವ ದಾಖಲೆಯನ್ನು ಸಮೀಪಿಸಿದೆ

    ಈ ಹೈ-ಸ್ಪೀಡ್ ರೈಲನ್ನು ಚೀನಾ ಏರೋಸ್ಪೇಸ್, ಸೈನ್ಸ್ ಮತ್ತು ಇಂಡಸ್ಟ್ರಿ ಕಾರ್ಪೊರೇಷನ್ (ಸಿಎಎಸ್​ಐಸಿ) ಈ ಮಾಹಿತಿ ಪ್ರಕಟಿಸಿದೆ.

    ಪ್ರತಿ ಗಂಟೆಗೆ 600 ಕಿಮೀ ವೇಗದಲ್ಲಿ ಮ್ಯಾಗ್ಲೆವ್ ಸಂಚರಿಸಲಿದೆಎಂದು ಸಿಎಎಸ್​ಐಸಿ ಹೇಳಿದೆ. ಆದರೆ ಅದು ದಾಖಲಿಸಿದ ನಿಖರವಾದ ವೇಗವನ್ನು ಬಹಿರಂಗಪಡಿಸಿಲ್ಲ. ಎರಡು ಕಿಲೋಮೀಟರ್ ಉದ್ದದ ಲೋ ವ್ಯಾಕ್ಯೂಮ್ ಟ್ಯೂಬ್ ನಲ್ಲಿ ಪರೀಕ್ಷೆ ನಡೆಸಿದಾಗ ಫಲಿತಾಂಶ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪ್ರಕಾರ ವಿಮಾನದ ವೇಗದಲ್ಲಿ ಚಲಿಸುವ ರೈಲು ಶೀಘ್ರದಲ್ಲೇ ಚೀನಾದಲ್ಲಿ ಲಭ್ಯವಾಗಲಿದೆ.

    ಐದು ಕಾರುಗಳ ಸೆಟ್‌ಗಳಲ್ಲಿ ಬರುವ ಚೀನಾದ ಮ್ಯಾಗ್ಲೆವ್‌ನ ಅಭಿವೃದ್ಧಿಯು 2016 ರಲ್ಲಿ ಪ್ರಾರಂಭವಾಯಿತು, ಜೂನ್ 2020 ರಲ್ಲಿ ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿತ್ತು. ಇದನ್ನು ಸಿಆರ್​ಆರ್​ಸಿ ಕಾರ್ಪೊರೇಷನ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.
    ಈ ರೈಲು ಬೀಜಿಂಗ್‌ನಿಂದ ಶಾಂಘೈಗೆ ಮೂರೂವರೆ ಗಂಟೆಗಳಲ್ಲಿ ತಲುಪಲಿದೆ. ಇದು ಬುಲೆಟ್ ಟ್ರೈನ್‌ ವೇಗಕ್ಕಿಂತ ಎರಡು ಗಂಟೆ ಕಡಿತಗೊಳಿಸುತ್ತದೆ. ಜಪಾನಿನ ಮ್ಯಾಗ್ಲೆವ್ ರೈಲು 2015 ರಲ್ಲಿ ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 603 ಕಿಲೋಮೀಟರ್ ವೇಗವನ್ನು ತಲುಪಿತ್ತು. ಜೆಆರ್​ ಸೆಂಟ್ರಲ್ ಟೋಕಿಯೊ ಮತ್ತು ನಗೋಯಾವನ್ನು ಸಂಪರ್ಕಿಸುವ ಮ್ಯಾಗ್ಲೆವ್ ಮಾರ್ಗವನ್ನು ನಿರ್ಮಿಸುತ್ತಿದೆ, ಅದರ ಮೇಲೆ ರೈಲು ಗರಿಷ್ಠ 500 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.

    ಆ ಮೂರು ದೇಶಗಳಲ್ಲಿ ಮಾತ್ರ ಮ್ಯಾಗ್ಲೆವ್ ರೈಲುಗಳಿವೆ:  ಪ್ರಸ್ತುತ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಮಾತ್ರ ಮ್ಯಾಗ್ಲೆವ್ ರೈಲುಗಳನ್ನು ನಿರ್ವಹಿಸುತ್ತಿವೆ. ಇಂತಹ ರೈಲುಗಳು ಮ್ಯಾಗ್ಲೆವ್ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ರೈಲನ್ನು ಮುಂದಕ್ಕೆ ಓಡಿಸಲು ಕಾಂತೀಯ ಬಲವನ್ನು ಬಳಸಲಾಗುತ್ತದೆ. ಹಾಗೆಯೇ ಈ ರೈಲು ಪಟ್ಟಾಗಳಿಲ್ಲದೆ ಸ್ವಲ್ಪಹೊತ್ತು ಗಾಳಿಯಲ್ಲಿ ತೇಲುತ್ತಲೂ ಸಂಚರಿಸಬಲ್ಲದು. ರೈಲಿನ ವೇಗವನ್ನು ಮತ್ತಷ್ಟು ಹೆಚ್ಚಿಸಲು ಲೋ ವ್ಯಾಕ್ಯೂಮ್ ಟ್ಯೂಬ್ ನಲ್ಲಿ ಓಡಿಸಲಾಗುತ್ತಿದೆ.

    ಅಶ್ಲೀಲ ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ…ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾದ ಬಿಜೆಪಿ ಮುಖಂಡೆ ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts