ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಹೋದರರಿಂದ ಧನ ಸಹಾಯ ಒದಗಿಬರಲಿದೆ

ಮೋಹನ್​ ಶೆಟ್ಟಿ

ಮೇಷ: ತಂದೆಯ ಆರೋಗ್ಯ ವಿಷಯದಲ್ಲಿ ವಿಶೇಷ ಎಚ್ಚರ ವಹಿಸಿ. ಸಾಲ ತೀರಿಸಲು ಸಹಾಯ ಸಿಗುವುದು. ಪ್ರೇಮಿಗಳಲ್ಲಿ ಮನಸ್ತಾಪ. ಶುಭಸಂಖ್ಯೆ: 1 (Dina bhavishya)

ವೃಷಭ: ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ ಉಂಟಾಗಿ ಸಮಾಧಾನ. ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಮಾತಿನಿಂದ ತೊಂದರೆ. ಶುಭಸಂಖ್ಯೆ: 9

ಮಿಥುನ: ಸಹೋದರರಿಂದ ಧನ ಸಹಾಯ ಒದಗಿಬರಲಿದೆ. ಯಂತ್ರೋಪಕರಣ ನೆರವಿನಿಂದ ಯಶಸ್ಸು. ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 2

ಕಟಕ: ಗೃಹಿಣಿಯರಿಗೆ ವಿಶೇಷ ದಿನ. ಉದ್ಯೋಗದಲ್ಲಿ ಒತ್ತಡ ಉಂಟಾಗಬಹುದು. ಲೋಹ ಸಂಬಂಧ ವ್ಯಾಪಾರದಲ್ಲಿ ಹೆಚ್ಚಿನ ಆದಾಯ. ಶುಭಸಂಖ್ಯೆ: 9

ಸಿಂಹ: ತಾಯಿಯ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ಆನ್​ಲೈನ್ ವ್ಯವಹಾರದಲ್ಲಿ ಮೋಸ ಸಂಭವ. ಅಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 2

ಕನ್ಯಾ: ಆಸ್ತಿ ಪ್ರಾಪ್ತಿಯಾಗಿ ಬಹುದಿನದ ಕನಸು ನನಸು. ಕೃಷಿಕರಿಗೆ ಕೃಷಿ ಉತ್ಪನ್ನ ಖರೀದಿಯಲ್ಲಿ ಮೋಸ. ಕುಟುಂಬದಲ್ಲಿ ಆಸ್ತಿ ಕಲಹ. ಶುಭಸಂಖ್ಯೆ:3

ತುಲಾ: ಯಂತ್ರ ತಯಾರಿಕೆಗೆ ಪೋ›ತ್ಸಾಹ ಸಿಗುವುದು. ಹಿರಿಯ ಅಧಿಕಾರಿಗಳಿಂದ ತೊಂದರೆ. ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:7

ವೃಶ್ಚಿಕ: ಗೃಹ ಕೈಗಾರಿಕೆಗೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭ ಬರಲಿದೆ. ನೀರಿಗೆ ಸಂಬಂಧಿಸಿದ ಕೆಲಸದಲ್ಲಿ ಆದಾಯ. ಅಧಿಕಾರಿಗಳಿಗೆ ಒತ್ತಡ. ಶುಭಸಂಖ್ಯೆ:9

ಧನಸ್ಸು: ಶೀತ ಸಂಬಂಧೀ ರೋಗ ಬಾಧಿಸೀತು. ಹೈನುಗಾರಿಕೆಯಲ್ಲಿ ನಿರೀಕ್ಷಿತ ಆದಾಯ ಕೈಸೇರಲಿದೆ. ಕಲಾವಿದರಿಗೆ ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 4

ಮಕರ: ರಕ್ತದೊತ್ತಡ ಸಮಸ್ಯೆ ಉಂಟಾದೀತು. ಸರ್ಕಾರಿ ನೌಕರರಿಗೆ ಹಿರಿಯ ಅಧಿಕಾರಿಗಳ ಬೆಂಬಲ ಸಿಗು ವುದು. ತಾಯಿಯಿಂದ ಸಹಕಾರ. ಶುಭಸಂಖ್ಯೆ: 8

ಕುಂಭ: ಹೋಟೆಲ್ ವ್ಯವಹಾರದಲ್ಲಿ ಹೆಚ್ಚಿನ ಆದಾಯ. ಕೃಷಿಯಲ್ಲಿ ಲಾಭ. ವಿದ್ಯಾರ್ಥಿಗಳಲ್ಲಿ ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ:5

ಮೀನ: ಛಾಯಾಗ್ರಾಹಕರಿಗೆ ಶುಭ ದಿವಸ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ. ಆರಕ್ಷಕರು ತಾಳ್ಮೆಯಿಂದ ವ್ಯವಹರಿಸಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 7