ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕಾರ್ಯಗಳಲ್ಲಿ ಯಶಸ್ಸು

ಮೋಹನ್​ ಶೆಟ್ಟಿ

ಮೇಷ: ಕಾರ್ಯಗಳಲ್ಲಿ ಯಶ ದೊರೆಯುತ್ತದೆ. ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದೆ. ಧೈರ್ಯದಿಂದ ಮುಂದುವರಿಯಿರಿ. ಶುಭಸಂಖ್ಯೆ:7

ವೃಷಭ: ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಕುಟುಂಬದವರೊಂದಿಗೆ ಸಮಯ ಕಳೆಯುವುದು ಶ್ರೇಯಸ್ಕರ. ಶುಭಸಂಖ್ಯೆ:8

ಮಿಥುನ: ಹೊಸ ಪರಿಚಯಗಳು ಪ್ರಯೋಜನಕಾರಿ. ಕಚೇರಿಯಲ್ಲಿ ಕೆಲಸದ ಒತ್ತಡ. ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಫಲ ದೊರೆಯಲಿದೆ. ಶುಭಸಂಖ್ಯೆ:6

ಕಟಕ: ಮನಸ್ಸಿನ ಶಾಂತಿ ಕಾಪಾಡಿ. ಹಳೆಯ ವಿಚಾರಗಳಿಂದ ಅಸಮಾಧಾನ ಉಂಟಾಗಬಹುದು. ಧ್ಯಾನ ಅಥವಾ ಯೋಗ ಸಹಾಯಕ. ಶುಭಸಂಖ್ಯೆ:9

ಸಿಂಹ: ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಸದವಕಾಶ. ಹಿರಿಯರ ಸಲಹೆ ಕೇಳುವುದು ಉಪಯುಕ್ತ. ಗೌರವ, ಖ್ಯಾತಿ ಹೆಚ್ಚುತ್ತದೆ. ಶುಭಸಂಖ್ಯೆ:2

ಕನ್ಯಾ: ಐಟಿ ಕೆಲಸದಲ್ಲಿ ಅನಿರೀಕ್ಷಿತ ಪ್ರಗತಿಯಾಗುವುದು. ಆರೋಗ್ಯದ ಕಡೆ ಗಮನ ಕೊಡಲೇಬೇಕು. ಆಹಾರದಲ್ಲಿ ನಿಯಮ ಪಾಲಿಸಿ.ಶುಭಸಂಖ್ಯೆ:4

ತುಲಾ: ಆರ್ಥಿಕವಾಗಿ ಉತ್ತಮವಾದ ದಿನ. ಪ್ರೇಮ ಸಂಬಂಧಗಳಲ್ಲಿ ಸಂತೋಷ ಸಿಗುವುದು. ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ಶುಭಸಂಖ್ಯೆ:8

ವೃಶ್ಚಿಕ: ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದು. ದೂರ ಪ್ರಯಾಣದ ಯೋಗ ಇದೆ. ಕಲಾವಿದರಿಗೆ ಉತ್ಸಾಹ ಹೆಚ್ಚುತ್ತದೆ. ಶುಭಸಂಖ್ಯೆ:4

ಧನಸ್ಸು: ಮನೋಭಾವದಲ್ಲಿ ಬದಲಾವಣೆ. ಹೊಸ ಯೋಚನೆಗಳು. ಮಗನ ವಿವಾಹದ ವಿಷಯದಲ್ಲಿ ಧೈರ್ಯದಿಂದ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ:3

ಮಕರ: ಉದ್ಯೋಗದ ಸ್ಥಳದಲ್ಲಿ ಮಾನ್ಯತೆ. ನಿಮ್ಮ ಸಾಧನೆಗೆ ಹಿರಿಯರಿಂದ ಮೆಚ್ಚುಗೆ. ಮನೆಗಳಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಹಣ ವ್ಯಯ. ಶುಭಸಂಖ್ಯೆ:6

ಕುಂಭ: ಸ್ನೇಹಿತರ ಬೆಂಬಲ ದೊರೆಯುತ್ತದೆ. ಹೊಸ ಯೋಜನೆ ಪ್ರಾರಂಭಿಸಲು ಇದು ಸೂಕ್ತ ಕಾಲ. ಆತ್ಮವಿಶ್ವಾಸದಿಂದ ನಡೆದುಕೊಳ್ಳಿ. ಶುಭಸಂಖ್ಯೆ:4

ಮೀನ: ನ್ಯಾಯಾಲಯದ ಕೆಲಸದಲ್ಲಿ ವಿಳಂಬ ಆಗಬಹುದು. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಆರೋಗ್ಯದತ್ತ ಗಮನ ಕೊಡಿ. ಶುಭಸಂಖ್ಯೆ:6